ಎಸ್ ಬಿಐ ಗೃಹಸಾಲ ಬಡ್ಡಿ ದರ ಕಡಿತ; 6 ವರ್ಷಗಳಲ್ಲೇ ಇದು ಅತಿ ಕಡಿಮೆ!
ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗೃಹ ಸಾಲದ ಮೇಲಿನ ಬಡ್ಡಿದರವನ್ನು 6 ವರ್ಷಗಳಲೇ ಕನಿಷ್ಟ ಪ್ರಮಾಣಕ್ಕೆ ಇಳಿಕೆ ಮಾಡಿದೆ.

ನವದೆಹಲಿ: ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗೃಹ ಸಾಲದ ಮೇಲಿನ ಬಡ್ಡಿದರವನ್ನು 6 ವರ್ಷಗಳಲೇ ಕನಿಷ್ಟ ಪ್ರಮಾಣಕ್ಕೆ ಇಳಿಕೆ ಮಾಡಿದೆ.
ಮೂಲಗಳ ಪ್ರಕಾರ ಎಸ್ ಬಿಐ ಬ್ಯಾಂಕಿನ ಗೃಹಸಾಲದ ಬಡ್ಡಿದರದಲ್ಲಿ ಭಾರಿ ಪ್ರಮಾಣದ ಇಳಿಕೆಯಾಗಿದ್ದು, ಕಳೆದ ಆರು ವರ್ಷಗಳಲ್ಲಿಯೇ ಬಡ್ಡಿ ಪ್ರಮಾಣದ ಕನಿಷ್ಠ ಪ್ರಮಾಣಕ್ಕೆ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಖಾಸಗಿ ಪತ್ರಿಕೆಯೊಂದು ವರದಿ ಮಾಡಿದ್ದು, ಪತ್ರಿಕಾ ವರದಿಯನ್ವಯ ಸಾಮಾನ್ಯ ಗ್ರಾಹಕರಿಗೆ ನೀಡಲಾಗುವ ಗೃಹಸಾಲದ ವಾರ್ಷಿಕ ಬಡ್ಡಿ ದರ ಶೇ.9.15ಕ್ಕೆ ಇಳಿಕೆಯಾಗಿದೆ. ಅಂತೆಯೇ ಮಹಿಳೆಯರಿಗೆ ನೀಡಲಾಗುವ ಗೃಹಸಾಲದ ಬಡ್ಡಿದರವನ್ನು ಕೂಡ ಇಳಿಕೆ ಮಾಡಲಾಗಿದ್ದು, ವಾರ್ಷಿಕ ಬಡ್ಡಿದರವನ್ನು ಶೇ.9.1ಕ್ಕೆ ಇಳಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಎಸ್ ಬಿಐ ದಸರಾ ಹಾಗೂ ದೀಪಾವಳಿ ಹಬ್ಬದ ನಿಮಿತ್ತ ಈ ಆಫರ್ ಘೋಷಣೆ ಮಾಡಿದ್ದು, ನೂತನ ಆಫರ್ ಗಳು ನವೆಂಬರ್ ಹಾಗೂ ಡಿಸೆಂಬರ್ ವರೆಗೂ ಜಾರಿಯಲ್ಲಿರಲಿವೆ ಎಂದು ತಿಳಿದುಬಂದಿದೆ.
ಕಳೆದ ವಾರವಷ್ಟೇ ಎಸ್ ಬಿಐ ಹಾಗೂ ಐಸಿಸಿಐ ಬ್ಯಾಂಕ್ ಗಳು ಸಾಲದ ಬಡ್ಡಿದರವನ್ನು ಕಡಿತಗೊಳಿಸಿ ಮಾರುಕಟ್ಟೆ ಪೈಪೋಟಿಗೆ ಬಾಗಿಲು ತೆರೆದಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


