'ಮಾಡಬೇಕಾದದ್ದು ಇನ್ನೂ ಬಹಳಷ್ಟಿದೆ': 2ನೇ ಅವಧಿಗೆ ಆಸಕ್ತಿ ತೋರಿದ ರಘುರಾಮ್ ರಾಜನ್
ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಗವರ್ನರ್ ಆಗಿ ಪ್ರತಿ ಕ್ಷಣಗಳನ್ನು ಆನಂದಿಸಿದ್ದೇನೆ. ಆದರೆ 'ಮಾಡಬೇಕಾದದ್ದು ಇನ್ನೂ ಬಹಳಷ್ಟಿದೆ'...

Published On :
ಲಂಡನ್: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಗವರ್ನರ್ ಆಗಿ ಪ್ರತಿ ಕ್ಷಣಗಳನ್ನು ಆನಂದಿಸಿದ್ದೇನೆ. ಆದರೆ 'ಮಾಡಬೇಕಾದದ್ದು ಇನ್ನೂ ಬಹಳಷ್ಟಿದೆ' ಎಂದು ಹೇಳುವ ಮೂಲಕ ರಘುರಾಮ್ ರಾಜನ್ ಅವರು ಎರಡನೇ ಅವಧಿಗೂ ಆರ್ ಬಿಐ ರವರ್ನರ್ ಆಗಿ ಮುಂದುವರೆಯುವ ಆಸಕ್ತಿ ತೋರಿದ್ದಾರೆ.
ಇತ್ತೀಚಿಗೆ ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದ್ದರೂ ಸಹ, ಭಾರತದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಇನ್ನೂ ಹಲವು ಕ್ರಮಗಳನ್ನು ತೆಗೆದುಕೊಳ್ಳ ಬೇಕಾದ ಅಗತ್ಯ ಇದೆ ಎಂದು ರುಘುರಾಮ್ ರಾಜನ್ ಅವರು ಹೇಳಿದ್ದಾರೆ.
ರಘುರಾಮ್ ರಾಜನ್ ಅವರ ಮೂರು ವರ್ಷಗಳ ಅಧಿಕಾರಾವಧಿ ಇದೇ ಸೆಪ್ಟಂಬರ್ 4ಕ್ಕೆ ಮುಕ್ತಾಯವಾಗುತ್ತಿದ್ದು, ಅವರನ್ನು ಮುಂದುವರಿಸುವ ಕುರಿತು ಹಲವು ಚರ್ಚೆಗಳು ನಡೆದಿವೆ.
ಭಾರತದ ಅಭಿವೃದ್ಧಿಗೆ ಸಂಬಂಧಿಸಿದಂತೆ 'ಒಕ್ಕಣ್ಣಿನ ದೊರೆ' ಎಂದಿದ್ದ ರಾಜನ್ ಅವರ ಹೇಳಿಕೆ ಕೇಂದ್ರ ಸರ್ಕಾರಕ್ಕೆ ಮುಜುಗರ ತಂದಿತ್ತು. ಇದಕ್ಕೆ ವಿತ್ತ ಸಚಿವ ಅರುಣ್ ಜೇಟ್ಲಿ ಸೇರಿದಂತೆ ಹಲವರು ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ್ದರು. ಇತ್ತೀಚಿಗಷ್ಟೇ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ರಘುರಾಮ್ ರಾಜನ್ ಅವರು ಆರ್ ಬಿಐ ಗವರ್ನರ್ ಹುದ್ದೆಯಲ್ಲಿರಲು ಲಾಯಕ್ಕಲ್ಲ ಎಂದಿದ್ದರು. ಹೀಗೆ ಕೆಲವು ವಿಷಯಗಳಲ್ಲಿ ರಾಜನ್ ಮತ್ತು ಸರ್ಕಾರದ ನಡುವೆ ಭಿನ್ನ ಧ್ವನಿಗಳಿದ್ದು, ಅವರನ್ನು ಎರಡನೇ ಅವಧಿಗೆ ಮುಂದುವರೆಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


