ವಾಣಿಜ್ಯ

ಇತಿಹಾಸದಲ್ಲೇ ದೊಡ್ಡ ವಿಲೀನ; ಹೆಸರು ಉಳಿಸಿಕೊಂಡ ಡೆಲ್ ಸಂಸ್ಥೆ

ಇತಿಹಾಸದಲ್ಲೇ ಅತಿ ದೊಡ್ಡ ವಿಲೀನ ಎನ್ನಲಾದ ಒಪ್ಪಂದದಲ್ಲಿ ಹೊಸ ಸಂಸ್ಥೆಯ ಹೆಸರು ಡೆಲ್ ಟೆಕ್ನಾಲಜೀಸ್ ಆಗಲಿದೆ ಎಂದು ಮೈಕೆಲ್ ಡೆಲ್ ಅವರು

ಇತಿಹಾಸದಲ್ಲೇ ದೊಡ್ಡ ವಿಲೀನ; ಹೆಸರು ಉಳಿಸಿಕೊಂಡ ಡೆಲ್ ಸಂಸ್ಥೆ
ಸಾಂದರ್ಭಿಕ ಚಿತ್ರ
Published On :

ಲಾಸ್ ವೇಗಾಸ್: ಇತಿಹಾಸದಲ್ಲೇ ಅತಿ ದೊಡ್ಡ ವಿಲೀನ ಎನ್ನಲಾದ ಒಪ್ಪಂದದಲ್ಲಿ ಹೊಸ ಸಂಸ್ಥೆಯ ಹೆಸರು ಡೆಲ್ ಟೆಕ್ನಾಲಜೀಸ್ ಆಗಲಿದೆ ಎಂದು ಮೈಕೆಲ್ ಡೆಲ್ ಅವರು ಘೋಷಿಸಿದ್ದಾರೆ.

"ಇದರ ಶಬ್ದ ಬಹಳ ಚೆನ್ನಾಗಿದೆ" ಎಂದು ಡೆಲ್ ಸಂಸ್ಥೆಯ ಮುಖ್ಯಸ್ಥ ಮತ್ತು ಸಿ ಇ ಒ ಡೆಲ್ ಹೇಳಿದ್ದಾರೆ. ಕಳೆದ ವರ್ಷ ಮತ್ತೊಂದು ತಂತ್ರಜ್ಞಾನ ದೈತ್ಯ ಇ ಎಂ ಸಿ ಸಂಸ್ಥೆಯ ಜೊತೆಗೆ ೭೦ ಬಿಲಿಯನ್ ಡಾಲರ್ ಮೌಲ್ಯದ ವಿಲೀನವನ್ನು ಘೋಷಿಸಲಾಗಿತ್ತು.

"ಡೆಲ್ ಕಂಪ್ಯೂಟರ್ ಗಳ ಬ್ರಾಂಡ್ ಮೌಲ್ಯವನ್ನು ಬದಲಾಯಿಸುವುದು ಕಷ್ಟ" ಎಂದಿರುವ ಅವರು ತಮ್ಮ ಕೌಟುಂಬಿಕ ವ್ಯವಹಾರದ ಹೆಸರಿಗೆ ಪಕ್ಷಪಾತಿಯೂ ಎಂದು ಒಪ್ಪಿಕೊಂಡಿದ್ದಾರೆ. ಈಗ ಡೆಲ್ ಟೆಕ್ನಾಲಜಿಸ್ ಇ ಎಂ ಸಿ, ವಿ ಎಂ ವೇರ್, ಪಿವೋಟಲ್, ಸೆಕ್ಯೂರ್ ನೆಟ್ವರ್ಕ್ಸ್, ಆರ್ ಎಸ್ ಎ ಮತ್ತು ವರ್ಚ್ಯೂಸ್ಟ್ರೀಮ್ ಸಂಸ್ಥೆಗಳನ್ನು ಒಳಗೊಳ್ಳಲಿದೆ.

ಜಾಗತಿಕವಾಗಿ ಈ ವಿಲೀನಗೊಂಡಿರುವ ಸಂಸ್ಥೆ ಡೆಲ್-ಇ ಎಂ ಸಿ ಹೆಸರಿನಲ್ಲಿ ಚಾಲನೆಯಲ್ಲಿರಲಿದೆ ಮತ್ತು ಈ ವಿಲೀನಕ್ಕೆ ಅಮೇರಿಕಾ ಮತ್ತು ಚೈನಾ ಅಧಿಕಾರಿಗಳಿಂದ ಒಪ್ಪಿಗೆಗಾಗಿಯೂ ಕಾಯಲಾಗುತ್ತಿದೆ.

ಹಲವಾರು ದೇಶಗಳು ಈ ವಿಲೀನಕ್ಕೆ ಈಗಾಗಲೇ ಒಪ್ಪಿಗೆ ನೀಡಿದ್ದು ಮುಂದಿನ ಕೆಲವು ತಿಂಗಳುಗಳಲ್ಲಿ ಈ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಇ ಎಂ ಸಿ ಸಂಸ್ಥೆಯ ವಾರ್ಷಿಕ ಕಾರ್ಯಕ್ರಮದಲ್ಲಿ ಡೆಲ್ ಮಾತನಾಡುತ್ತಿದ್ದರು. ಇದೆ ಸಮಯದಲ್ಲಿ ಇ ಎಂ ಸಿ ಸಂಸ್ಥೆಯ ಮುಖ್ಯಸ್ಥ ಮತ್ತು ಸಿ ಇ ಒ ಜೋ ತುಸ್ಸಿ ಇದು ಇ ಎಂ ಸಿ ಯ ಕೊನೆಯ ವಾರ್ಷಿಕ ಸಭೆಯಾಗಲಿದೆ ಎಂದು ಘೋಷಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.