ವಾಣಿಜ್ಯ

ಪತಂಜಲಿಗೆ ಸೆಡ್ಡು ಹೊಡೆಯಲು ನೈಸರ್ಗಿಕ ಹಾದಿ ಹಿಡಿದ ಕೋಲ್ಗೇಟ್

ಪ್ರಸ್ತುತ ಮಾರುಕಟ್ಟೆಯಲ್ಲಿ ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದಿಕ್‌ಗೆ ಬೇಡಿಕೆ ಜಾಸ್ತಿಯಾಗಿರುವ ಕಾರಣ ಕೋಲ್ಗೇಟ್ ನೈಸರ್ಗಿಕ ಉತ್ಪನ್ನಗಳತ್ತ...

ಪತಂಜಲಿಗೆ ಸೆಡ್ಡು ಹೊಡೆಯಲು ನೈಸರ್ಗಿಕ ಹಾದಿ ಹಿಡಿದ ಕೋಲ್ಗೇಟ್
Colgate
Published On :
ನವದೆಹಲಿ: ದಂತ ಸುರಕ್ಷಾ ಉತ್ಪನ್ನಗಳ ಮಾರುಕಟ್ಟೆ ವಲಯದಲ್ಲಿ ಸ್ಪರ್ಧೆ ಹೆಚ್ಚಾಗಿರುವುದರಿಂದ ಕೋಲ್ಗೇಟ್ ಪಾಮೋಲಿವ್ ಕಂಪನಿ ಈಗ ನೈಸರ್ಗಿಕ ಉತ್ಪನ್ನಗಳ ಹಾದಿ ಹಿಡಿದಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದಿಕ್‌ಗೆ ಬೇಡಿಕೆ ಜಾಸ್ತಿಯಾಗಿರುವ ಕಾರಣ ಕೋಲ್ಗೇಟ್ ನೈಸರ್ಗಿಕ ಉತ್ಪನ್ನಗಳತ್ತ ಮುಖ ಮಾಡಿದೆ. 
ಬಹುರಾಷ್ಟ್ರೀಯ ಕಂಪನಿಯಾಗಿರುವ ಕೋಲ್ಗೇಟ್ ಭಾರತೀಯ ಮಾರುಕಟ್ಟೆಯಲ್ಲಿ ಪೈಪೋಟಿ ಎದುರಿಸುತ್ತಿದೆ ಎಂಬ ವಿಷಯವನ್ನು ಕೋಲ್ಗೇಟ್ ಸಿಇಒ ಇಯಾನ್ ಕುಕ್ ಒಪ್ಪಿಕೊಂಡಿದ್ದಾರೆ.
ಭಾರತದಲ್ಲಿ ನೈಸರ್ಗಿಕ ಉತ್ಪನ್ನಗಳ ಮಾರಾಟ ಹೆಚ್ಚಾಗುತ್ತಿದೆ. ಇದನ್ನು ಮನಗಂಡ ಕೋಲ್ಗೇಟ್ ತಮ್ಮ ಆ್ಯಕ್ಟಿವ್ ಸಾಲ್ಟ್ ಪೇಸ್ಟ್ ನ್ನು ಹೊಸ ರೀತಿಯಲ್ಲಿ ಪ್ರಸ್ತುತ ಪಡಿಸಲು ಮುಂದಾಗಿದೆ.
ರು.6,000ಕೋಟಿಯ ಭಾರತೀಯ ದಂತ ಸುರಕ್ಷಾ ಉತ್ಪನ್ನ ವಲಯದಲ್ಲಿ 2015ರಲ್ಲಿ ಶೇ. 0.8 ಮಾತ್ರ ಬೆಳವಣಿಗೆ ಉಂಟಾಗಿದೆ.ಕಳೆದ ಎಂಟು ವರ್ಷಗಳಲ್ಲಿ ಕೋಲ್ಗೇಟ್ ಬೆಳವಣಿಗೆಯಲ್ಲಿ ಶೇ.  48 ರಿಂದ ಶೇ. 54ರಷ್ಟು ಪ್ರಗತಿ ಸಾಧಿಸಿದೆ.
ಈ ಮಾರುಕಟ್ಟೆಯಲ್ಲಿ ಶೇ 13 ರಿಂದ ಶೇ. 14ರ ವರೆಗೆ ನೈಸರ್ಗಿಕ ಉತ್ಪನ್ನಗಳು ಬಿಕರಿಯಾಗುತ್ತಿವೆ. ಆದರೆ ಈ ವಿಭಾಗದಲ್ಲಿ ಕೋಲ್ಗೇಟ್ ಮಾತ್ರ ಬೆಳವಣಿಗೆ ಕಂಡುಕೊಳ್ಳಲಿಲ್ಲ.
ಕೋಲ್ಗೇಟ್, ನೆಸ್ಲೇ ಮೊದಲಾದ ಕಂಪನಿಗಳಿಗೆ ಸೆಡ್ಡು ಹೊಡೆಯಲು ಪತಂಜಲಿ ವಿವಿಧ ರೀತಿಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಪತಂಜಲಿಗೆ ಪೈಪೋಟಿ ನೀಡಲು ಈ ಕಂಪನಿಗಳು ಕಾರ್ಯಪ್ರವೃತ್ತವಾಗಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.