ಆರ್'ಬಿಐ ಗವರ್ನರ್ ಹುದ್ದೆಗೆ ಮೂರು ವರ್ಷದ ಕಾರ್ಯಾವಧಿ ಕಡಿಮೆ: ರಘುರಾಮ್ ರಾಜನ್
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಹುದ್ದೆಯ 3 ವರ್ಷದ ಕಾರ್ಯಾವಧಿ ಕಡಿಮೆ ಎಂದು ನಿವೃತ್ತಗೊಳ್ಳಲಿರುವ ಆರ್ಬಿಐ ಗರ್ವನರ್ ರಘುರಾಮ್ ರಾಜನ್...
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಹುದ್ದೆಯ 3 ವರ್ಷದ ಕಾರ್ಯಾವಧಿ ಕಡಿಮೆ ಎಂದು ನಿವೃತ್ತಗೊಳ್ಳಲಿರುವ ಆರ್ಬಿಐ ಗರ್ವನರ್ ರಘುರಾಮ್ ರಾಜನ್ ಹೇಳಿದ್ದಾರೆ.
ಸಂಸತ್ತಿನ ಸ್ಥಾಯಿ ಸಮಿತಿ ಹಣಕಾಸು ತಟದಲ್ಲಿ ಆರ್ಥಿಕ ಮತ್ತು ಎನ್ಪಿಎ ವಿವಿಧ ಅಂಶಗಳ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದ ರಾಜನ್ ಅವರು, ಆರ್ಬಿಐ ಗವರ್ನರ್ ಹುದ್ದೆ ಅವಧಿ ಐದು ವರ್ಷಗಳ ದೀರ್ಘಾವದಿಯಾಗಿರಬೇಕಿತ್ತು. ಜಾಗತಿಕ ಮಟ್ಟದಲ್ಲಿನ ವ್ಯವಸ್ಥೆಯನ್ನು ಭಾರತ ಅನುಕರಿಸಬೇಕಿದೆ ಎಂದು ಹೇಳಿದ್ದಾರೆ.
ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆ ನಾಲ್ಕು ವರ್ಷಕ್ಕೆ ಸೀಮಿತವಾಗಿದ್ದು ಅದೇ ರೀತಿ ಭಾರತೀಯ ರಿಸರ್ವ ಬ್ಯಾಂಕ್ ಗವರ್ನರ್ ಹುದ್ದೆ ಐದು ವರ್ಷಕ್ಕೆ ಸೀಮಿತವಾಗಬೇಕಿತ್ತು ಎಂದು ರಾಜನ್ ಅಭಿಪ್ರಾಯಪಟ್ಟಿದ್ದಾರೆ.
ಆರ್ಬಿಐನ ಗವರ್ನರ್ ಆಗಿ ಅಧಿಕಾರವಹಿಸಿಕೊಂಡಿದ್ದ ರಘುರಾಮ್ ರಾಜನ್ ಅವರು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯ ತಂದಿದ್ದರು. ಅವರ ಮೂವರು ವರ್ಷದ ಅಧಿಕಾರವಧಿ ಸೆಪ್ಟೆಂಬರ್ 4ಕ್ಕೆ ಮುಕ್ತಾಯಗೊಳ್ಳಲಿದ್ದು, ಎರಡನೇ ಅವಧಿಗೆ ನಾನು ಮುಂದುವರೆಯಲಾರೆ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

