ವಾಣಿಜ್ಯ

ಸಿಇಒ ಜೊತೆ ಮುನಿಸು : ಸಾಫ್ಟ್‌ಬ್ಯಾಂಕ್‌ ಅಧ್ಯಕ್ಷ ನಿಕೇಶ್‌ ರಾಜಿನಾಮೆ

ಜಪಾನಿನ ಬಹುರಾಷ್ಟ್ರೀಯ ದೂರಸಂಪರ್ಕ ಮತ್ತು ಅಂತರ್ಜಾಲ ಸಂಸ್ಥೆ ಸಾಫ್ಟ್‌ಬ್ಯಾಂಕ್‌ ಗ್ರೂಪ್‌ ಕಾರ್ಪ್‌ ಅಧ್ಯಕ್ಷ ಮತ್ತು ಸಿಒಒ ಹುದ್ದೆಗೆ ಭಾರತ ಮೂಲದ ನಿಕೇಶ್‌..

ಸಿಇಒ ಜೊತೆ ಮುನಿಸು : ಸಾಫ್ಟ್‌ಬ್ಯಾಂಕ್‌ ಅಧ್ಯಕ್ಷ ನಿಕೇಶ್‌ ರಾಜಿನಾಮೆ
ನಿಕೇಶ್‌ ಅರೋರಾ
Published On :

ನವದೆಹಲಿ : ಜಪಾನಿನ ಬಹುರಾಷ್ಟ್ರೀಯ ದೂರಸಂಪರ್ಕ ಮತ್ತು ಅಂತರ್ಜಾಲ ಸಂಸ್ಥೆ ಸಾಫ್ಟ್‌ಬ್ಯಾಂಕ್‌ ಗ್ರೂಪ್‌ ಕಾರ್ಪ್‌ ಅಧ್ಯಕ್ಷ ಮತ್ತು ಸಿಒಒ ಹುದ್ದೆಗೆ ಭಾರತ ಮೂಲದ ನಿಕೇಶ್‌ ಅರೋರಾ ಅವರು ರಾಜೀನಾಮೆ ನೀಡಿದ್ದಾರೆ.

ನಿಕೇಶ್ ನೀಡಿರುವ ರಾಜೀನಾಮೆ ಇಂದಿನಿಂದಲೇ ಜಾರಿಗೆ ಬರಲಿದ್ದು, ಅರೋರಾ ಅವರು ಸಂಸ್ಥೆಯ ಸಲಹೆಗಾರರಾಗಿ ಒಂದು ವರ್ಷದವರೆಗೆ ಮುಂದುವರೆಯಲಿದ್ದಾರೆ. ಸಾಫ್ಟ್‌ಬ್ಯಾಂಕ್‌ ಚೇರ್ಮನ್‌ ಮತ್ತು ಸಿಇಒ ಮಸಯೋಶಿ ಸನ್‌ ಅವರ ಉತ್ತರಾಧಿಕಾರಿ ಎಂದೇ ಅರೋರಾ ಅವರನ್ನು ಪರಿಗಣಿಸಲಾಗಿತ್ತು. ಮಸಯೋಶಿ ಸನ್‌ (58) ಅವರು ತಮ್ಮ 60ನೆ ಹುಟ್ಟುಹಬ್ಬದ ಸಂದರ್ಭದಲ್ಲಿ ಅರೋರಾ ಅವರಿಗೆ ಅಧ್ಯಕ್ಷ ಹುದ್ದೆ ಹಸ್ತಾಂತರಿಸಲೂ ಉದ್ದೇಶಿಸಿದ್ದರು.

60 ವರ್ಷದ ನಂತರವೂ 5ರಿಂದ 10 ವರ್ಷಗಳವರೆಗೆ ಮಸಯೋಶಿ ಸನ್‌ ಅಧಿಕಾರದಲ್ಲಿ ಮುಂದುವರೆಯಲು ಅವರು ನಿರ್ಧರಿಸಿದ್ದರಿಂದ ಅರೋರಾ ಪದತ್ಯಾಗ ಮಾಡಲು ಮುಂದಾಗಿದ್ದಾರೆ.  ಸದ್ಯಕ್ಕೆ ಚಾಲ್ತಿಯಲ್ಲಿ ಇರುವ ಬ್ರೆಕ್ಸಿಟ್‌ (ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರನಡೆಯುವುದು), ರೆಕ್ಸಿಟ್‌ ( ಎರಡನೆ ಅವಧಿಗೆ ಮುಂದುವರೆಯದಿರಲು  ಆರ್‌ಬಿಐ ಗವರ್ನರ್‌ ರಘುರಾಂ ರಾಜನ್‌ ನಿರ್ಧಾರ)  ಸಂಕ್ಷಿಪ್ತ ಶಬ್ದಗಳ ಸಾಲಿಗೆ  ಈಗ ನಿಕೇಶ್‌ ಅರೋರಾ ಅವರ ರಾಜೀನಾಮೆ ಕೂಡ (ನೆಕ್ಸಿಟ್‌) ಸೇರ್ಪಡೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.