ವಾಣಿಜ್ಯ

ದೇಶಾದ್ಯಂತ ಬ್ಯಾಂಕ್ ಸಿಬ್ಬಂದಿ ಮುಷ್ಕರ; ಎಂದಿನಂತೆ ನಡೆಯುತ್ತಿರುವ ಖಜಾನೆ ಕಾರ್ಯಗಳು

ಎಸ್ ಬಿಐ ಜತೆಗೆ 5 ಸಹವರ್ತಿ ಬ್ಯಾಂಕುಗಳ ವಿಲೀನ ವಿರೋಧಿಸಿ ಇಂದು ದೇಶಾದ್ಯಂತ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಖಾಸಗಿ ಬ್ಯಾಂಕುಗಳ...

ದೇಶಾದ್ಯಂತ ಬ್ಯಾಂಕ್ ಸಿಬ್ಬಂದಿ ಮುಷ್ಕರ; ಎಂದಿನಂತೆ ನಡೆಯುತ್ತಿರುವ ಖಜಾನೆ ಕಾರ್ಯಗಳು
ಸಾಂದರ್ಭಿಕ ಚಿತ್ರ
Published On :
ಮುಂಬೈ: ಎಸ್ ಬಿಐ ಜತೆಗೆ 5 ಸಹವರ್ತಿ ಬ್ಯಾಂಕುಗಳ ವಿಲೀನ ವಿರೋಧಿಸಿ ಇಂದು ದೇಶಾದ್ಯಂತ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಖಾಸಗಿ ಬ್ಯಾಂಕುಗಳ ನೌಕರರು ಕರೆ ನೀಡಿರುವ ಮುಷ್ಕರದಿಂದ ಸಾರ್ವಜನಿಕ ವಹಿವಾಟು ಕೆಲಸಗಳಾದ ಚೆಕ್ ಕ್ಲೀಯರೆನ್ಸ್, ಕ್ಯಾಶ್ ಡೆಪಾಸಿಟ್ ಮೊದಲಾದವಗಳ ಮೇಲೆ ಪರಿಣಾಮ ಬೀರಬಹುದು. ಆದರೆ ಖಜಾನೆ ಕಾರ್ಯಕೆಲಸಗಳು ಜೊತೆಗೆ 150 ಕೋಟಿ ರೂಪಾಯಿಯ ಸರ್ಕಾರದ ಬಾಂಡ್ ಹರಾಜಿನ ಮೇಲೆ, ಷೇರು ವಹಿವಾಟಿನ ಮೇಲೆ ಯಾವುದೇ ಪರಿಣಾಮ ಬೀರಲಾರದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬ್ಯಾಂಕಿನ ಖಜಾನೆಗಳಲ್ಲಿ ಸಿಬ್ಬಂದಿ ಉಳಿದ ದಿನಗಳಿಗಿಂತ ಕಡಿಮೆಯಿರುತ್ತಾರೆ. ಆದರೆ ಹರಾಜು ಪ್ರಕ್ರಿಯೆಯಲ್ಲಿ ಬಿಡ್ಡಿಂಗ್ ನಂತಹ ಕೆಲಸಗಳು ಎಂದಿನಂತೆ ನಡೆಯುತ್ತವೆ ಎಂದು ರಾಷ್ಟ್ರೀಕೃತ ಬ್ಯಾಂಕಿನ ತಜ್ಞರು ಹೇಳಿದ್ದಾರೆ.
ಆದರೆ ಸಿಬ್ಬಂದಿ ಕೊರತೆಯಿಂದಾಗಿ ಕೆಲವು ಬ್ಯಾಂಕುಗಳಲ್ಲಿ ಹಿಂದಿನ ದಿನದ ವಹಿವಾಟಿಗೆ ಸ್ವಲ್ಪ ತೊಂದರೆಯುಂಟಾಗಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ದೇಶಾದ್ಯಂತ ಸುಮಾರು 1 ದಶಲಕ್ಷ ಬ್ಯಾಂಕ್ ನೌಕರರು ಇಂದು ಮುಷ್ಕರನಿರತರಾಗಿದ್ದು, ಎಸ್ ಬಿಐ ಜೊತೆ ಇತರ 5 ಬ್ಯಾಂಕುಗಳ ವಿಲೀನ ಮತ್ತು ಐಡಿಬಿಐ ಬ್ಯಾಂಕನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಬ್ಯಾಂಕ್ ನೌಕರರ ಒಕ್ಕೂಟದಿಂದ ಮುಷ್ಕರ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.