ವಾಣಿಜ್ಯ

ಬ್ರಿಟನ್ ಉಕ್ಕು ಕಾರ್ಖಾನೆ ಮಾರಾಟದ ಯೋಜನೆಯಿಂದ ಹಿಂದೆ ಸರಿದ ಟಾಟಾ

ಬ್ರೆಕ್ಸಿಟ್ ಪರಿಣಾಮದಿಂದಾಗಿ ಯುಕೆಯಲ್ಲಿರುವ ಟಾಟಾ ಉಕ್ಕು ಕಾರ್ಖಾನೆಯನ್ನು ಮಾರಾಟ ಮಾಡುವ ಪ್ರಸ್ತಾವನೆಯನ್ನು ಸಂಸ್ಥೆ ತಡೆಹಿಡಿದಿದ್ದು ಜಂಟಿ ಸಹಯೋಗದಲ್ಲಿ ಮುನ್ನಡೆಸುವ ಚಿಂತನೆ ನಡೆಸಿದೆ.

ಬ್ರಿಟನ್ ಉಕ್ಕು ಕಾರ್ಖಾನೆ ಮಾರಾಟದ ಯೋಜನೆಯಿಂದ ಹಿಂದೆ ಸರಿದ ಟಾಟಾ
ಟಾಟಾ ಸ್ಟೀಲ್
Published On :

ಲಂಡನ್: ಬ್ರೆಕ್ಸಿಟ್ ಪರಿಣಾಮದಿಂದಾಗಿ ಯುಕೆಯಲ್ಲಿರುವ ಟಾಟಾ ಉಕ್ಕು ಕಾರ್ಖಾನೆಯನ್ನು ಮಾರಾಟ ಮಾಡುವ ಪ್ರಸ್ತಾವನೆಯನ್ನು ಸಂಸ್ಥೆ ತಡೆಹಿಡಿದಿದ್ದು ಜಂಟಿ ಸಹಯೋಗದಲ್ಲಿ ಮುನ್ನಡೆಸುವ ಚಿಂತನೆ ನಡೆಸಿದೆ.

ಜಂಟಿ ಸಹಯೋಗದಲ್ಲಿ ಸಂಸ್ಥೆಯನ್ನು ಮುನ್ನಡೆಸುವ ಯೋಜನೆ ಹೊಂದಿರುವ ಟಾಟಾ ಕಂಪನಿ ಪಾಲುದಾರನಿಗಾಗಿ ಹುಡುಕಾಟ ನಡೆಸಿದೆ. ಬ್ರಿಟನ್ ನ ಸ್ಟೀಲ್ ಸಂಸ್ಥೆ 3 ಬಿಲಿಯನ್ ಡಾಲರ್ ನಷ್ಟ ಅನುಭವಿಸಿರುವುದರಿಂದ ಅಲ್ಲಿನ ಉಕ್ಕು ಕಾರ್ಖಾನೆ ಘಟಕವನ್ನು ಮಾರಾಟ ಮಾಡಲು ಮಾರ್ಚ್ ನಲ್ಲಿ ಟಾಟಾ ಸಂಸ್ಥೆ ನಿರ್ಧರಿಸಿತ್ತು. ಆದರೆ ರಾಯಟರ್ಸ್ ಪ್ರಕಟಿಸಿರುವ ಮಾಹಿತಿ ಪ್ರಕಾರ ಉಕ್ಕು ಕಾರ್ಖಾನೆಯನ್ನು ಮಾರಾಟ ಮಾಡುವ ಪ್ರಸ್ತಾವನೆಯನ್ನು ಟಾಟಾ ತಡೆಹಿಡಿದಿದೆ ಎಂದು ತಿಳಿದುಬಂದಿದೆ.

ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬಂದಿರುವುದರಿಂದ ಇಂಗ್ಲೆಂಡ್ ಪಿಂಚಣಿ ಯೋಜನೆಯಲ್ಲಿ ಬದಲಾವಣೆ ನಿರೀಕ್ಷಿಸಲಾಗಿದ್ದು, ಇದರಿಂದ ಟಾಟಾ ಸ್ಟೀಲ್​ನ ಉದ್ಯೋಗಿಗಳಿಗೆ ಪಿಂಚಣಿ ಪಾವತಿ ಮೊತ್ತವೂ ಕಡಿಮೆಯಾಗಲಿದೆ. ಈ ಹಿನ್ನೆಲೆಯಲ್ಲಿ ನಷ್ಟದಲ್ಲಿರುವ ಸಂಸ್ಥೆಗೆ ಆರ್ಥಿಕ ಹೊರೆ ತಗ್ಗಲಿರುವುದು ಮಾರಾಟದ ಚಿಮ್ತಾನೇಮದ ಹಿಂದೆಸರಿಯಲು ಪ್ರಮುಖ ಕಾರಣವಾಗಿದೆ. ಸಂಪೂರ್ಣವಾಗಿ ಮಾರಾಟ ಮಾಡುವ ಬಾಡಲು ಪಾಲುದಾರಿಕೆಯಲ್ಲಿ ಉಕ್ಕು ಘಟಕವನ್ನು ನಡೆಸಲು ಟಾಟಾ ಸಂಸ್ಥೆ ಉತ್ಸಾಹ ತೋರಿದ್ದು ಟಿಸ್ಸನ್ ಕ್ರುಪ್ ಸಂಸ್ಥೆ ಸೇರಿದಂತೆ ಹಲವು ಕಂಪನಿಗಳೊಂದಿಗೆ ಪಾಲುದಾರಿಕೆ ವಿಷಯವಾಗಿ ಮಾತುಕತೆ ನಡೆಸುತ್ತಿದ್ದು, ಜರ್ಮನಿ ಮೂಲದ ಸಂಸ್ಥೆಯು ಟಾಟಾದೊಂದಿಗೆ ಪಾಲುದಾರಿಕೆ ಒಪ್ಪಂದಕ್ಕೆ ಮುಂದಾಗಲು ಉತ್ಸಾಹ ತೋರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.