ಷೇರುಪೇಟೆ ಕುಸಿತಕ್ಕೆ ಪ್ರಮುಖ ಕಾರಣಗಳು
ದೇಶೀಯ ಮಾರುಕಟ್ಟೆ ಸೂಚ್ಯಂಕಗಳ ಕುಸಿತ ಮುಂದುವರೆದಿದ್ದು, ಬುಧವಾರ ಮತ್ತೆ ಪಾತಾಳಕ್ಕೆ ಕುಸಿದಿದೆ. ಬುಧವಾರ ನಡೆದ ವಹಿವಾಟಿನಲ್ಲಿ ಸೆನ್ಸೆಕ್ಸ್ 417.80 ಅಂಕ ಕಳೆದುಕೊಂಡಿದ್ದು, ಷೇರುಪೇಟೆ ಕುಸಿತಕ್ಕೆ ಹಲವು ಪ್ರಮುಖ ಕಾರಣಗಳಿವೆ...

ಮುಂಬೈ: ದೇಶೀಯ ಮಾರುಕಟ್ಟೆ ಸೂಚ್ಯಂಕಗಳ ಕುಸಿತ ಮುಂದುವರೆದಿದ್ದು, ಬುಧವಾರ ಮತ್ತೆ ಪಾತಾಳಕ್ಕೆ ಕುಸಿದಿದೆ. ಬುಧವಾರ ನಡೆದ ವಹಿವಾಟಿನಲ್ಲಿ ಸೆನ್ಸೆಕ್ಸ್ 417.80 ಅಂಕ ಕಳೆದುಕೊಂಡಿದ್ದು, ಷೇರುಪೇಟೆ ಕುಸಿತಕ್ಕೆ ಹಲವು ಪ್ರಮುಖ ಕಾರಣಗಳಿವೆ.
1. ಇಳಿದ ಕಚ್ಚಾ ತೈಲ:
ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾತೈಲ ದಾಸ್ತಾನು ಬರಲಿದೆ ಎಂದು ಸಂಶೋಧನಾ ವರದಿ ಪ್ರಕಟವಾದ ಹಿನ್ನಲೆಯಲ್ಲಿ ದರಗಳು ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಾ ಸಾಗಿವೆ. ಬ್ರೆಂಟ್ ಕ್ರೂಡ್ ಪ್ರತಿ ಬ್ಯಾರಲ್ ದರ 28.21 ಡಾಲರ್ ಆಸುಪಾಸಿನಲ್ಲಿ ವಹಿವಾಟು ಕಾಣುತ್ತಿದೆ.
2.ಅಮೆರಿಕ ಆರ್ಥಿಕತೆಯ ಹಿನ್ನಡೆ:
ಡೌಜೋನ್ಸ್ ಕೈಗಾರಿಕಾ ಸರಾಸರಿ ಸೂಚ್ಯಂಕ ಶೇ.2.23ರಷ್ಟು ಕುಸಿದಿದೆ. 2008ರ ನಂತರ ಇದು ಗರಿಷ್ಠ ಹಿನ್ನಡೆಯಾಗಿದೆ. 2008ರ ನಂತರ ಇದು ಗರಿಷ್ಠ ಹಿನ್ನಡೆಯಾಗಿದೆ. 2016ರಲ್ಲಿ ಇದುವರೆಗೂ ಶೇ.8ಕ್ಕಿಂತಲೂ ಹೆಚ್ಚು ಕುಸಿದಿದೆ. ಎಚ್ಚರಿಕೆ ವಹಿಸಲು ಆರ್ಥಿಕ ವಿಶ್ಲೇಷಕರು ಸೂಚನೆ ನೀಡಿದ್ದಾರೆ.
3.ರುಪಾಯಿ ಅಪಮೌಲ್ಯ:
ಎಫ್ ಐಐಗಳು ಷೇರುಪೇಟೆಯಲ್ಲಿ ಹೂಡಿಕೆ ಹಿಂಪಡೆಯುತ್ತಿರುವುದರಿಂದ ರುಪಾಯಿ ಮೌಲ್ಯದಲ್ಲಿ ಕುಸಿತ ಕಾಣುತ್ತಿದೆ. 2013ರ ಸೆಪ್ಟೆಂಬರ್ 4ರಂ ನಂತರ ರುಪಾಯಿ ಮೌಲ್ಯ ಕನಿಷ್ಠ ಹಂತಕ್ಕೆ ಬಂದು ತಲುಪಿದೆ.
4.ಜಾಗತಿಕ ಆರ್ಥಿಕ ಹಿಂಜರಿತ:
ಪ್ರಸಕ್ತ ವರ್ಷ ಜಾಗತಿಕ ಆರ್ಥಿಕ ಪ್ರಗತಿ ಕುಸಿಯಲಿದೆ ಎಂದು ಐಎಂಎಫ್ ಮಂಗಳವಾರ ಹೇಳಿತ್ತು. ಇದು ಜಗತ್ತಿನಾದ್ಯಂತ ಎಲ್ಲ ಷೇರುಪೇಟೆಗಳ ಮೇಲೆ ಪರಿಣಾಮ ಬೀರಿತು.
5.ಚೀನಾ ಜಿಡಿಪಿ ಕುಸಿತ:
ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಚೀನಾ ಜಿಡಿಪಿ ಶೇ.6.8ಕ್ಕೆ ಕುಸಿದಿದೆ. ಇದು ಕಳೆದ 254 ವರ್ಷಗಳಲ್ಲೇ ಕನಿಷ್ಠ ಮಟಚ್ಟವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


