ಟಿಸಿಎಸ್ ಲಾಭ ಶೇ.14 ಏರಿಕೆ
ಡಿಸೆಂಬರ್‍ಗೆ ಅಂತ್ಯಗೊಂಡ ಪ್ರಸಕ್ತ ಸಾಲಿನ ಮೂರನೆ ತ್ರೈಮಾಸಿಕದಲ್ಲಿ ಟಾಟಾ ಕನ್ಸಲ್ಟೆನ್ಸಿ ನಿವ್ವಳ ಲಾಭ ಶೇ.14.18ರಷ್ಟು ಏರಿಕೆ ಕಂಡಿದ್ದು ರು.6,083.39 ಕೋಟಿಗೆ ತಲುಪಿದೆ...

ಮುಂಬೈ: ಡಿಸೆಂಬರ್‍ಗೆ ಅಂತ್ಯಗೊಂಡ ಪ್ರಸಕ್ತ ಸಾಲಿನ ಮೂರನೆ ತ್ರೈಮಾಸಿಕದಲ್ಲಿ ಟಾಟಾ ಕನ್ಸಲ್ಟೆನ್ಸಿ ನಿವ್ವಳ ಲಾಭ ಶೇ.14.18ರಷ್ಟು ಏರಿಕೆ ಕಂಡಿದ್ದು ರು.6,083.39 ಕೋಟಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿ ರು.5,327.55 ಕೋಟಿ ಗಳಿಸಿತ್ತು. ಆದರೂ ತ್ರೈಮಾಸಿಕದಿಂದ ತ್ರೈಮಾಸಿಕ ಅವಧಿಗೆ ಹೋಲಿಸಿದರೆ ಶೇ.0.02ರಷ್ಟು ಇಳಿಮುಖ ಕಂಡಿದೆ. ಕಂಪನಿ ಆದಾಯದಲ್ಲೂ ಶೇ.11.7ರಷ್ಟು ಏರಿಕೆ ಕಂಡಿದ್ದು ರು.27,364 ಕೋಟಿಗೆ ತಲುಪಿದೆ. ಇದೇ ಸಂದರ್ಭದಲ್ಲಿ ಕಂಪನಿ ಪ್ರತಿ ಷೇರಿಗೆ ರು.5.50 ಮಧ್ಯಂತರ ಲಾಭಾಂಶ ಘೋಷಿಸಿದೆ. ಚೆನ್ನೈನಲ್ಲಿ ಸಂಭವಿಸಿದ ಪ್ರವಾಹ ಕಂಪನಿ ಆದಾಯಕ್ಕೆ ಹಿನ್ನಡೆಯುಂಟು ಮಾಡಬಹುದು ಎಂದು ಕಂಪನಿ ಈ ಹಿಂದೆ ಹೇಳಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


