ವಾಣಿಜ್ಯ

ಭಾರತದ ಆರ್ಥಿಕತೆ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ವೃದ್ಧಿಯಾಗುತ್ತಿದೆ: ಆರ್ಥಿಕ ಸಮೀಕ್ಷೆ

ಶುಕ್ರವಾರ ಸಂಸತ್ತಿನಲ್ಲಿ 2015-16ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಯಿತು. ಅದರಲ್ಲಿ ದೇಶದ ಬೃಹತ್ ಆರ್ಥಿಕ ಸ್ಥಿರತೆಯ ಸಾಧನೆಗೆ ಸುಧಾರಣೆಯ...

ಭಾರತದ ಆರ್ಥಿಕತೆ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ವೃದ್ಧಿಯಾಗುತ್ತಿದೆ: ಆರ್ಥಿಕ ಸಮೀಕ್ಷೆ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಶುಕ್ರವಾರ ಸಂಸತ್ತಿನಲ್ಲಿ 2015-16ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಯಿತು. ಅದರಲ್ಲಿ ದೇಶದ ಬೃಹತ್ ಆರ್ಥಿಕ ಸ್ಥಿರತೆಯ ಸಾಧನೆಗೆ ಸುಧಾರಣೆಯ ಪ್ರಕ್ರಿಯೆಯನ್ನು ಮುಂದುವರಿಸುವ ಬಗ್ಗೆಯೂ ಸ್ಪಷ್ಟತೆ ಸಿಕ್ಕಿದೆ ಎಂದು ಹೇಳಬಹುದು. ಸಮೀಕ್ಷೆಯಲ್ಲಿ ಹಲವು ವಿಷಯಗಳ ಕುರಿತು ಬೆಳಕು ಚೆಲ್ಲಲಾಗಿದೆ.

2014-15ರಲ್ಲಿ ಇದ್ದ ಶೇಕಡಾ 7.2 ಆರ್ಥಿಕ ಪ್ರಗತಿ ಈ ವರ್ಷ ಶೇಕಡಾ 7.6ಕ್ಕೆ ತಲುಪಿದ್ದು, ವಿಶ್ವದಲ್ಲಿಯೇ ವೇಗವಾಗಿ ಅಭಿವೃದ್ಧಿಗೊಂಡ ಆರ್ಥಿಕ ಬೆಳವಣಿಗೆಯಾಗಿದೆ. ಆದರೆ ವಿಶ್ವದ ಆರ್ಥಿಕತೆ ಕ್ಷೀಣವಾಗಿ ಉಳಿದರೆ ಭಾರತದ ಆರ್ಥಿಕ ಬೆಳವಣಿಗೆ ಕೂಡ ಕುಂಠಿತವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಆರ್ಥಿಕ ತಜ್ಞರು.

ದೇಶೀಯ ಮಟ್ಟದಲ್ಲಿ ಎರಡು ಅಂಶಗಳು ಬಳಕೆಯನ್ನು ವೃದ್ಧಿಸುತ್ತವೆ. 7ನೇ ವೇತನ ಆಯೋಗದ ಶಿಫಾರಸುಗಳು ಜಾರಿಯಾದರೆ ಹೆಚ್ಚಿನ ವೇತನ ಮತ್ತು ಭತ್ಯೆಗಳು ಸರ್ಕಾರಿ ನೌಕರರಿಗೆ ಸಿಗುವುದರಿಂದ ಉತ್ಪನ್ನಗಳ ಬಳಕೆ ಹೆಚ್ಚಿಸುವುದು ಮತ್ತು ಮಾನ್ಸೂನ್ ನಿಗದಿತ ಸಮಯದಲ್ಲಿ ಬಂದರೆ ಉತ್ಪನ್ನಗಳ ಉತ್ಪಾದನೆ ಹೆಚ್ಚಳ ಮಾಡುವುದು ಆಗಿದೆ.

ಸಮೀಕ್ಷೆಯಲ್ಲಿ ಮೂರು ಮುಖ್ಯ ಅಪಾಯಗಳ ಕುರಿತು ಹೇಳಲಾಗಿದೆ. ಜಾಗತಿಕ ಆರ್ಥಿಕ ವಲಯದಲ್ಲಿ ಪ್ರಕ್ಷುಬ್ಧತೆ ಉಂಟಾಗುವ ಸಾಧ್ಯತೆಯಿರುವುದರಿಂದ ರಫ್ತಿನ ಹೊರನೋಟ ಹದಗೆಡಲಿದೆ. ಎರಡನೆಯದಾಗಿ ನಿರೀಕ್ಷೆಗೆ ವಿರುದ್ಧವಾಗಿ ತೈಲ ಬೆಲೆ ಹೆಚ್ಚಳವಾದರೆ ಗ್ರಾಹಕರ ಮೇಲೆ ಹೊರೆ ಬೀಳುತ್ತದೆ. ಇನ್ನೊಂದು ಮುಖ್ಯ ಗಂಭೀರ ಅಪಾಯವೆಂದರೆ ಈ ಎರಡು ಅಂಶಗಳು ಒಂದಾದರೆ ಆರ್ಥಿಕ ಸ್ಥಿತಿಗತಿ ಮೇಲೆ ಪರಿಣಾಮ ಬೀರುವುದು.

ಭಾರತದ ಆರ್ಥಿಕತೆ ಎದುರಿಸುತ್ತಿರುವ ಅತ್ಪಾವಧಿಯ ಗಂಭೀರ ಸವಾಲು ಅವಳಿ ಆಯವ್ಯಯ ಸಮಸ್ಯೆ. ಸಾರ್ವಜನಿಕ ವಲಯ ಬ್ಯಾಂಕುಗಳು ಮತ್ತು ಕಾರ್ಪೊರೇಟ್ ಉದ್ದಿಮೆಗಳ ದುರ್ಬಲಗೊಂಡ ಹಣಕಾಸು ಸ್ಥಿತಿ. ಖಾಸಗಿ ಹೂಡಿಕೆಗಳಿಗೆ ಪೂರ್ಣ ಪ್ರಮಾಣದ ಆರ್ಥಿಕ ಚೇತರಿಕೆಗೆ ಅವಳಿ ಆಯವ್ಯಯ ವ್ಯವಸ್ಥೆಯ ಸವಾಲುಗಳು ಪ್ರಮುಖ ಅಡ್ಡಿಯಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.