ಚೇತರಿಸಿಕೊಂಡ ಷೇರುಪೇಟೆ ಸೆನ್ಸೆಕ್ಸ್ 568 ಅಂಕ ಏರಿಕೆ
ಕಳೆದ ವಾರದಿಂದ ಗಣನೀಯ ಇಳಿಕೆ ಕಂಡಿದ್ದ ಮುಂಬೈ ಶೇರು ಪೇಟೆ ಇಂದು 568 ಅಂಕಗಳ ಭರ್ಜರಿ ಮುನ್ನಡೆಯನ್ನು ಕಂಡು ದಿನದ ವಹಿವಾಟನ್ನು 23,554.12 ಅಂಕಗಳ...

ಮುಂಬೈ: ಕಳೆದ ವಾರದಿಂದ ಗಣನೀಯ ಇಳಿಕೆ ಕಂಡಿದ್ದ ಮುಂಬೈ ಶೇರು ಪೇಟೆ ಇಂದು 568 ಅಂಕಗಳ ಭರ್ಜರಿ ಮುನ್ನಡೆಯನ್ನು ಕಂಡು ದಿನದ ವಹಿವಾಟನ್ನು 23,554.12 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 182 ಅಂಕಗಳ ಮುನ್ನಡೆಯನ್ನು ದಾಖಲಿಸಿ ದಿನದ ವಹಿವಾಟನ್ನು 7,162.95 ಅಂಕಗಳ ಮಟ್ಟದಲ್ಲಿ ಮುಕ್ತಾಯಗೊಂಡಿತು.
ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.2.6ರ ಏರಿಕೆಯನ್ನು ಸಾಧಿಸಿರುವುದು ಹೂಡಿಕೆದಾರರಲ್ಲಿ ಹೊಸ ಹುರುಪು ತುಂಬಿಸಿದೆ. ಇಂದು ಕ್ಯಾಪಿಟಲ್ ಗೂಡ್ಸ್, ಮೆಟಲ್ಸ್, ಆಟೋ ಉತ್ತಮ ಖರೀದಿಯನ್ನು ಕಂಡವು.
ಏಶ್ಯನ್ ಶೇರು ಮಾರುಕಟ್ಟೆಗಳ ಸ್ಥಿರತೆ ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 400 ಅಂಕಗಳ ಮುನ್ನಡೆಯನ್ನು ಸಾಧಿಸಿ 23,000 ಅಂಕಗಳ ಮಟ್ಟವನ್ನು ಮರಳಿ ಸಂಪಾದಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


