1 ಬಿಲಿಯನ್ ಕ್ಲಬ್ ಸೇರಿದ ವಾಟ್ಸ್ ಅಪ್, ಜಿಮೇಲ್
2 ವರ್ಷಗಳ ಹಿಂದಷ್ಟೇ ಫೇಸ್ ಬುಕ್ ಖರೀದಿಸಿದ್ದ ವಾಟ್ಸ್ ಅಪ್ ಇದೀಗ ಒಂದು ಬಿಲಿಯನ್ ಬಳಕೆದಾರರನ್ನು ಹೊಂದುವ ಮೂಲಕ ಮಹತ್ವದ ಸಾಧನೆಯೊಂದನ್ನು ಮಾಡಿದೆ...

ನ್ಯೂಯಾರ್ಕ್: 2 ವರ್ಷಗಳ ಹಿಂದಷ್ಟೇ ಫೇಸ್ ಬುಕ್ ಖರೀದಿಸಿದ್ದ ವಾಟ್ಸ್ ಅಪ್ ಇದೀಗ ಒಂದು ಬಿಲಿಯನ್ ಬಳಕೆದಾರರನ್ನು ಹೊಂದುವ ಮೂಲಕ ಮಹತ್ವದ ಸಾಧನೆಯೊಂದನ್ನು ಮಾಡಿದೆ.
ಇದೀಗ ವಾಟ್ಸ್ ಅಪ್ ಹಾಗೂ ಜಿಮೇಲ್ ಎರಡೂ 1 ಬಿಲಿಯನ್ ರಷ್ಟು ಬಳಕೆದಾರರನ್ನು ಹೊಂದಿದ್ದು, ಗೂಗಲ್ ಸೇವೆಯಲ್ಲಿ 1 ಬಿಲಿಯನ್ ಬಳಕೆದಾರರನ್ನು ಹೊಂದಿರುವವರಲ್ಲಿ 6ನೇ ಸ್ಥಾನವನ್ನು ಜಿಮೇಲೆ ಪಡೆದಿದೆ. ಇದರಂತೆ ವಾಟ್ಸ್ ಅಪ್ ಕೂಡ ಫೇಸ್ ಬುಕ್ ನ ಎರಡೇ ಅತ್ಯಂತ ಬಳಕೆಯಲ್ಲಿರುವ ಅಪ್ಲಿಕೇಶನ್ ಎಂಬ ಖ್ಯಾತಿಗೆ ಪಾತ್ರವಾಗಿದೆ.
ವಾರ್ಟ್ ಅಪ್ 1 ಬಿಲಿಯನ್ ಬಳಕೆದಾರರನ್ನು ಹೊಂದಿರುವ ಕುರಿತಂತೆ ಮಾರ್ಕ್ ಝಕರ್ ಘೋಷಣೆಯನ್ನು ಮಾಡಿದ್ದು, ವಾಟ್ಸ್ ಅಪ್'ನ ಸಹ ಸಂಸ್ಥಾಪಕರಾದ ಜಾನ್ ಕೌಮ್ ಮತ್ತು ಬ್ರಿಯಾನ್ ಅಕ್ಟನ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
2014ರಲ್ಲಿ ಫೇಸ್'ಬುಕ್ 19 ಬಿಲಿಯನ್ ಡಾಲರ್'ಗೆ ವಾರ್ಟ್ ಅಪ್'ನ್ನು ಖರೀದಿ ಮಾಡಿತ್ತು. ಖರೀದಿಸಿದ ಕೇವಲ 2 ವರ್ಷಗಳಲ್ಲೇ ಇದೀಗ ವಾಟ್ಸ್ ಅಪ್ ಜಗತ್ತಿನ ಅತೀ ಹೆಚ್ಚು ಬಳಕೆಯಲ್ಲಿರುವ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ಹೊರಹೊಮ್ಮಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


