ಈಎಸ್ಐ ಸೌಲಭ್ಯ ಪಡೆಯಲು ತಿಂಗಳ ವೇತನ ಮಿತಿ ರೂ. 21 ಸಾವಿರಕ್ಕೆ ಏರಿಕೆ
ಈಎಸ್ಐ ಸೌಲಭ್ಯ ಪಡೆಯಲು ನೌಕರರ ತಿಂಗಳ ವೇತನ ಮಿತಿಯನ್ನು ಕೇಂದ್ರ ಸರ್ಕಾರ ರೂ. 15 ಸಾವಿರದಿಂದ ರೂ. 21 ಸಾವಿರಕ್ಕೆ ಏರಿಸಿದೆ.

ಈಎಸ್ಐ ಸೌಲಭ್ಯ ಪಡೆಯಲು ನೌಕರರ ತಿಂಗಳ ವೇತನ ಮಿತಿಯನ್ನು ಕೇಂದ್ರ ಸರ್ಕಾರ ರೂ. 15 ಸಾವಿರದಿಂದ ರೂ. 21 ಸಾವಿರಕ್ಕೆ ಏರಿಸಿದೆ. ಇದರಿಂದಾಗಿ ರೂ. 21 ಸಾವಿರದವರಗೆ ತಿಂಗಳ ವೇತನ ಪಡೆಯುವ ಎಲ್ಲಾ ನೌಕರರು ಐಎಸ್ಆ ಸೌಲಭ್ಯ ಪಡೆಯಬಹುದಾಗಿದೆ.
ಜನವರಿ 1, 2017 ರಿಂದ ಇದು ಜಾರಿಗೆ ಬರಲಿದ್ದು, ಈಗಾಗಲೆ ಈಎಸ್ಐ ಸೌಲಭ್ಯ ಹೊಂದಿರುವವರು ತಮ್ಮ ತಿಂಗಳ ಸಂಬಳ ರೂ. 21,000 ದ ಮಿತಿ ತಲುಪುವವರೆಗೂ ತಮ್ಮ ಸದಸ್ಯತ್ವವನ್ನು ಮುಂದುವರಿಸಬಹುದು.
ಇದಲ್ಲದೆ, ಈಎಸ್ಈ ಸೌಲಭ್ಯಕ್ಕೆ ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳ ಉದ್ಯೋಗದಾತರಿಗೆ ನೋಂದಣಿ ಮಾಡಿಕೊಳ್ಳಲು ವಿಶೇಷ ರಿಯಾಯಿತಿಯನ್ನು ನೀಡಲಾಗಿದೆ. ಈಗ ಅವರು ಸಂಬಳದ 4% ರಷ್ಟು ಹಣವನ್ನು ಮಾತ್ರ ತಮ್ಮ ಕೊಡುಗೆಯಾಗಿ ನೀಡಬೇಕಾಗುವುದು. ಇತರೆ ಪ್ರದೇಶಗಳ ಉದ್ಯೋಗದಾತರಿಗೆ ಅದು 6.5% ಇರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


