ವಾಣಿಜ್ಯ

25 ಕೋಟಿ ಮೌಲ್ಯದ ನೋಟು ಬದಲಾವಣೆಗೆ ಯತ್ನಿಸಿದ ಉದ್ಯಮಿ ಪರಸ್ಮಲ್ ಲೋಧಾ ವಿವರ

25 ಕೋಟಿ ಮೌಲ್ಯದ ಹಳೇಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಲು ಯತ್ನಿಸುತ್ತಿದ್ದ ಕೊಲ್ಕತಾ ಮೂಲದ ಪರಸ್ಮಲ್ ಲೋಧಾ ಎಂಬ ಉದ್ಯಮಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

25 ಕೋಟಿ ಮೌಲ್ಯದ ನೋಟು ಬದಲಾವಣೆಗೆ ಯತ್ನಿಸಿದ ಉದ್ಯಮಿ ಪರಸ್ಮಲ್ ಲೋಧಾ ವಿವರ
Published On :
25 ಕೋಟಿ ಮೌಲ್ಯದ ಹಳೇಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಲು ಯತ್ನಿಸುತ್ತಿದ್ದ ಕೊಲ್ಕತಾ ಮೂಲದ  ಪರಸ್ಮಲ್ ಲೋಧಾ ಎಂಬ ಉದ್ಯಮಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. 
ವಿವಾದಾತ್ಮಕ ಉದ್ಯಮಿ ಪರಸ್ಮಲ್ ಲೋಧಾ ಅವರ ಬಗೆಗಿನ ವಿವರಣೆ ಇಲ್ಲಿದೆ. 
  • ಕೋಲ್ಕತಾ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಲೋಧಾ ಗಣಿ, ಫೈನಾನ್ಸ್, ಸಲಹಾ ಮತ್ತು ರೆಸ್ಟೋರೆಂಟ್ ಸಂಸ್ಥೆಗಳಲ್ಲಿ ಪಾಲುದಾರಿಕೆ ಹೊಂದಿದ್ದಾರೆ. 
  • ಭಾರತದ ಅತಿ ದೊಡ್ಡ ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿದ್ದ ಪಿಯರ್‍ಲೆಸ್ ಜನರಲ್ ಫೈನಾನ್ಸ್ ಲಿಮಿಟೆಡ್‍ ನ್ನು 1991 ರಲ್ಲಿ ಆಕ್ರಮಣಕಾರಿಯಾಗಿ ಸ್ವಾಧೀನ ಪಡಿಸಿಕೊಂಡು ಸುದ್ದಿಯಾಗಿದ್ದರು ಪರಸ್ಮಲ್ ಲೋಧಾ. ಒಂದಷ್ಟು ವರದಿಗಳ ಪ್ರಕಾರ  ಪಿಯರ್‍ಲೆಸ್  ಜನರಲ್ ಫೈನಾನ್ಸ್ ಲಿಮಿಟೆಡ್‍ ನ ಹೆಚ್ಚಿನ ಭಾಗದ ಷೇರುಗಳನ್ನು ಲೋಧಾ ಸಂಸ್ಥೆಗೆ ಮಾರಾಟ ಮಾಡುವಂತೆ ಪಿಯರ್‍ಲೆಸ್ ಜನರಲ್ ಫೈನಾನ್ಸ್ ನ ಎಂ ಡಿಗೆ ಬೆದರಿಕೆ ಹಾಕಲು ಲೋಧಾಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಿಂದ ಸೂಚನೆ ಇತ್ತು ಎಂದೂ ಹೇಳಲಾಗಿತ್ತು. 
  • ಪರಸ್ಮಲ್ ಲೋಧಾ ಈಗ ಪಿಯರ್‍ಲೆಸ್ ಜನರಲ್ ಫೈನಾನ್ಸ್ ಲಿಮಿಟೆಡ್ ಸೇರಿದಂತೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ನೋಂದಣಿಯಾಗಿರುವ 7 ಸಂಸ್ಥೆಗಳ ಮಾಲಿಕ
  • 2010 ರಲ್ಲಿ ಕೋಲ್ಕತಾದ ಸ್ಟೀಫನ್ ಕೋರ್ಟ್ ಅಗ್ನಿ ಅವಗಢ ಪ್ರಕರಣದಲ್ಲಿ ಪರ್ಸಮಾಲ್ ಲೋಧಾ ಹೆಸರೂ ಕೇಳಿಬಂದಿತ್ತು. ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದರಾದರೂ ತನಿಖೆ ವೇಳೆ ಲೋಧಾ ನಾಪತ್ತೆಯಾಗಿದ್ದರು. 
  • ಲೋಧಾ ಮಗಳ ಅದ್ಧೂರಿ ಮದುವೆಯಲ್ಲಿ ಹಲವು ರಾಜಕಾರಣಿಗಳು ಭಾಗಿಯಾಗಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.