ಎಸ್ ಬಿಐ ಗ್ರಾಹಕರಿಗೆ ಸಿಹಿ ಸುದ್ದಿ: ಡಿಜಿಟಲ್ ವಹಿವಾಟಿನ ಶುಲ್ಕದಲ್ಲಿ ಕಡಿತ!
ನಗದುರಹಿತ ವಹಿವಾಟು ಉತ್ತೇಜನಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವಂತೆಯೇ ಖ್ಯಾತ ಬ್ಯಾಂಕಿಂಗ್ ಸಂಸ್ಥೆ ಎಸ್ ಬಿಐ ಕೂಡ ತನ್ನ ಡಿಜಿಟಲ್ ವಹಿವಾಟಿನ ಶುಲ್ಕದಲ್ಲಿ ಕಡಿತಗೊಳಿಸಲು ಮುಂದಾಗಿದೆ.

ನವದೆಹಲಿ: ನಗದುರಹಿತ ವಹಿವಾಟು ಉತ್ತೇಜನಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವಂತೆಯೇ ಖ್ಯಾತ ಬ್ಯಾಂಕಿಂಗ್ ಸಂಸ್ಥೆ ಎಸ್ ಬಿಐ ಕೂಡ ತನ್ನ ಡಿಜಿಟಲ್ ವಹಿವಾಟಿನ ಶುಲ್ಕದಲ್ಲಿ ಕಡಿತಗೊಳಿಸಲು ಮುಂದಾಗಿದೆ.
ಇಂಟರ್ ನೆಂಟ್ ಮತ್ತು ಮೊಬೈಲ್ ಮೂಲಕ ಪಾವತಿ ಮಾಡುವ ವಹಿವಾಟಿನ ಎಂಡಿಆರ್ (Merchant Discount Rate)ನಲ್ಲಿ ಎಸ್ ಬಿಐ ಕಡಿತಗೊಳಿಸಿದೆ. ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡುವ ಯಾವುದೇ ವಹಿವಾಟಿನ ಮೇಲಿನ ಎಂಡಿಆರ್ ಶುಲ್ಕದಲ್ಲಿ ಎಸ್ ಬಿಐ 0.25ರಿಂದ 1.0 ರಷ್ಟು ಶುಲ್ಕ ಕಡಿತ ಮಾಡಿದೆ. ಮೂಲಗಳ ಪ್ರಕಾರ 1 ಸಾವಿರ ರು.ವರೆಗಿನ ಖರೀದಿ ಮೇಲಿನ ಶುಲ್ಕದಲ್ಲಿ ಎಸ್ ಬಿಐ 0.25ರಷ್ಚು, 1 ಸಾವಿರದಿಂದ 2 ಸಾವಿರ ರು.ವರೆಗಿನ ವಹಿವಾಟಿನ ಶುಲ್ಕದಲ್ಲಿ 0.50ರಷ್ಟು ಮತ್ತು 2 ಸಾವಿರ ರು. ಮೇಲ್ಪಟ್ಟ ಖರೀದಿ ಅಥವಾ ಪಾವತಿ ಮೇಲಿನ ಶುಲ್ಕದಲ್ಲಿ ಶೇ.1ರಷ್ಟು ಶುಲ್ಕ ವಿನಾಯಿತಿ ನೀಡಿದೆ.
ಈ ನೂತನ ದರಗಳು ಜನವರಿ 1ರಿಂದ ಆರಂಭವಾಗಲಿದ್ದು, ಮಾರ್ಚ್ 31ರವರೆಗೂ ಜಾರಿಯಲ್ಲಿರುತ್ತದೆ ಎಂದು ಎಸ್ ಬಿಐ ಮೂಲಗಳು ತಿಳಿಸಿವೆ. ಇದೇ ವೇಳೆ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ನಗದು ರಹಿತ ವಹಿವಾಟನ್ನು ಉತ್ತೇಜಿಸುವ ದೃಷ್ಟಿಯಿಂದ ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಜನವರಿ 1ರಿಂದ ಅಂದರೆ ಹೊಸ ವರ್ಷದಿಂದಲೇ ನಗದು ವಹಿವಾಟನ್ನು ತಹಬದಿಗೆ ತರಲು ಮುಂದಾಗಿದೆ. ಅದರಂತೆ ನಗದು ರಹಿತ ವಹಿವಾಟಿಗೆ ಬೇಕಾದ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ.
ಉದಾಹರಣೆಗೆ ಡಿಜಿಟಲ್ ವಹಿವಾಟ ಅವಕಾಶವಿರದ ಅಂಗಡಿ ಮತ್ತು ಮಾರುಕಟ್ಟೆಗೆ ತೆರಳಿ ವ್ಯಾಪಾರಸ್ಥರಲ್ಲಿ ಡಿಜಿಟಲ್ ವಹಿವಾಟಿನ ಮಾಹಿತಿ ನೀಡಿ ಅವರೂ ಕೂಡ ಡಿಜಿಟಲ್ ಮೂಲಕ ವಹಿವಾಟು ನಡೆಸುವಂತೆ ಮತ್ತು ಅವರಿಗೆ ಪೂರಕ ಸ್ವೈಪಿಂಗ್ ಯಂತ್ರಗಳನ್ನು ನೀಡುವಂತೆ ಸೂಚಿಸಿದೆ. ಅಂತೆಯೇ ಈಗಾಗಲೇ ಅಸ್ತಿತ್ವದಲ್ಲಿರುವ ಡಿಜಿಟಲ್ ವಹಿವಾಟಿನ ಯಂತ್ರಗಳು ಸುಸ್ತಿತಿಯಲ್ಲಿವೆ ಎಂಬ ವಿಚಾರವಾಗಿ ಗಮನ ಹರಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ನೋಟು ನಿಷೇಧವಾಗುತ್ತಿದ್ದಂತೆಯೇ ಎಚ್ ಡಿಎಫ್ ಸಿ, ಐಸಿಐಸಿಐ ಹಾಗೂ ಎಕ್ಸಿಸ್ ಬ್ಯಾಂಕ್ ನಂತಹ ಖಾಸಗಿ ಬ್ಯಾಂಕುಗಳು ತಮ್ಮ ಎಂಡಿಆರ್ ಶುಲ್ಕವನ್ನು ಕಡಿತಗೊಳಿಸಿದ್ದವು. ಅಲ್ಲದೆ ದೇಶಾದ್ಯಂತ ಇರುವ ಪ್ರಮುಖ ಮಾರುಕಟ್ಟೆಗಳಿಗೆ ತೆರಳಿ ಡಿಜಿಟಲ್ ಪಾವತಿಯ ಸ್ವೈಪಿಂಗ್ ಯಂತ್ರಗಳ ಬಗ್ಗೆ ಮಾರಾಟಗಾರರಿಗೆ ಮಾಹಿತಿ ನೀಡುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


