ಪ್ರಸಕ್ತ ವರ್ಷದ ದ್ವೈಮಾಸಿಕದಲ್ಲಿ ಬಿ ಎಸ್ ಎನ್ ಎಲ್ ಗೆ ೧೭೨೧ ಕೋಟಿ ನಷ್ಟ: ಕೇಂದ್ರ ಸರ್ಕಾರ
ಸರ್ಕಾರಿ ಒಡೆತನದ ಭಾರತ್ ಸಂಚಾರ ನಿಗಮ ಲಿಮಿಟೆಡ್ ಸಂಸ್ಥೆ, ಏಪ್ರಿಲ್ ಮತ್ತು ಜೂನ್ ನಡುವೆ ೧೭೨೧ ಕೋಟಿ ರೂ ನಷ್ಟ ಅನುಭವಿಸಿದೆ ಮತ್ತು ಈ ಸಮಯದಲ್ಲಿ ಒಟ್ಟು ಆದಾಯ ೭೩೩೧ ಕೋಟಿ ರೂ

Published On :
ನವದೆಹಲಿ: ಸರ್ಕಾರಿ ಒಡೆತನದ ಭಾರತ್ ಸಂಚಾರ ನಿಗಮ ಲಿಮಿಟೆಡ್ ಸಂಸ್ಥೆ, ಏಪ್ರಿಲ್ ಮತ್ತು ಜೂನ್ ನಡುವೆ ೧೭೨೧ ಕೋಟಿ ರೂ ನಷ್ಟ ಅನುಭವಿಸಿದೆ ಮತ್ತು ಈ ಸಮಯದಲ್ಲಿ ಒಟ್ಟು ಆದಾಯ ೭೩೩೧ ಕೋಟಿ ರೂ ಎಂದು ರಾಜ್ಯಸಭೆಗೆ ಕೇಂದ್ರ ಸರ್ಕಾರ ತಿಳಿಸಿದೆ.
"೨೦೧೩-೧೪ ರಲ್ಲಿ ಒಟ್ಟು ಆದಾಯ ೨೬,೧೫೩ ಕೋಟಿ ಇದ್ದು, ಇದು ೨೦೧೪-೨೦೧೫ ಕ್ಕೆ ೨೭,೨೪೨ ಕೋಟಿಗೆ ಹೆಚ್ಚಳಗೊಂಡಿತ್ತು ಮತ್ತು ೨೦೧೫-೧೬ ನೇ ಸಾಲಿನಲ್ಲಿ ೨೮,೪೪೯ ಕೋಟಿಗೆ ವೃದ್ಧಿಸಿದೆ" ಎಂದು ಸಂಪರ್ಕ ಸಚಿವ ಮನೋಜ್ ಸಿಂಹ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
೨೦೧೬-೧೭ ರ ದ್ವೈಮಾಸಿಕದಲ್ಲಿ (ಏಪ್ರಿಲ್ ನಿಂದ ಜೂನ್ ನಡುವೆ) ಬಿ ಎಸ್ ಎನ್ ಎಲ್ ಚಟುವಟಿಕೆಗಳಿಂದ ೭೧೮೩ ಕೋಟಿ ಆದಾಯ ಬಂದಿದೆ. ಈ ಸಮಯದಲ್ಲೇ ೧೭೨೧ ಕೋಟಿ ರೂ ನಷ್ಟ ಅನುಭವಿಸಿದೆ.
ಸಾರ್ವಜನಿಕ ಕ್ಷೇತ್ರದ ಟೆಲೆಕಾಂ ಸಂಸ್ಥೆ ೨೦೧೩-೧೪ ರಲ್ಲಿ ೭೦೧೯ ಕೋಟಿ ನಷ್ಟ, ೨೦೧೪-೧೫ ರಲ್ಲಿ ೮,೨೩೪ ಕೋಟಿ ನಷ್ಟ ಅನುಭವಿಸಿದ್ದರೆ, ೨೦೧೫-೧೬ ರ ನಷ್ಟ ಅರ್ಧಕ್ಕೆ ಇಳಿದು, ೩೮೮೦ ಕೋಟಿ ಎಂದು ಸಚಿವರು ತಿಳಿಸಿದ್ದಾರೆ.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವ, ಹೆಚ್ಚಳ ಬಿಲ್ ಕಳುಹಿಸಿದ್ದಕ್ಕೆ ಏರ್ಟೆಲ್ ವಿರುದ್ಧ ೫೧೨ ದೂರುಗಳು, ವೊಡಾಫೋನ್ ವಿರುದ್ಧ ೩೯೩, ಐಡಿಯಾ ವಿರುದ್ಧ ೧೭೨ ಮತ್ತು ರಿಲಾಯೆನ್ಸ್ ವಿರುದ್ಧ ೧೯೭ ದೂರುಗಳು, ೨೦೧೬ ರಲ್ಲಿ ಟೆಲೆಕಾಂ ನಿಯಂತ್ರಣ ಮಂಡಳಿ ಟಿ ಆರ್ ಎ ಐ ಗೆ ಬಂದಿವೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


