ವಾಣಿಜ್ಯ

ನಗದು ಬಿಕ್ಕಟ್ಟು, ಡಿಸೆಂಬರ್ 30ರ ನಂತರವೇ ಸಹಜ ಸ್ಥಿತಿಗೆ: ಅರುಣ್ ಜೇಟ್ಲಿ

500 ಹಾಗೂ 1000 ರುಪಾಯಿ ನೋಟ್ ನಿಷೇಧದಿಂದ ಉಂಟಾಗಿರುವ ನಗದು ಸಮಸ್ಯೆ ಇನ್ನೂ ಕೆಲವು ದಿನ ಮುಂದುವರೆಯಲಿದೆ ಎಂದು...

ನಗದು ಬಿಕ್ಕಟ್ಟು, ಡಿಸೆಂಬರ್ 30ರ ನಂತರವೇ ಸಹಜ ಸ್ಥಿತಿಗೆ: ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
Published On :
ನವದೆಹಲಿ: 500 ಹಾಗೂ 1000 ರುಪಾಯಿ ನೋಟ್ ನಿಷೇಧದಿಂದ ಉಂಟಾಗಿರುವ ನಗದು ಸಮಸ್ಯೆ ಇನ್ನೂ ಕೆಲವು ದಿನ ಮುಂದುವರೆಯಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ ಹೇಳಿದ್ದಾರೆ.
ಜೇಟ್ಲಿಯ ಪ್ರಕಾರ, ಡಿಸೆಂಬರ್ 30ರ ನಂತರವೇ ನಗದು ಬಿಕ್ಕಟ್ಟು ಸಹಜ ಸ್ಥಿತಿಗೆ ಬರಲಿದೆ ಮತ್ತು ನೋಟ್ ನಿಷೇಧ ಮುಂದಿನ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗುವ ಸಾಧ್ಯತೆಯೂ ಇದೆ ಎಂದು ಹೇಳಿದ್ದಾರೆ.
ಆದಾಗ್ಯೂ, ಒಂದು ಬಾರಿ ನಗದು ಬಿಕ್ಕಟ್ಟು ಪರಿಹಾರವಾದರೆ ನೋಟ್ ನಿಷೇಧದಿಂದ ಮತ್ತು ಜಿಎಸ್ ಟಿ ಜಾರಿಯಿಂದ ಭಾರಿ ಪ್ರಮಾಣದಲ್ಲಿ ಲಾಭವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೇಟ್ಲಿ, ಈಗ ಉಂಟಾಗಿರುವ ನಗದು ಬಿಕ್ಕಟ್ಟು ಕೇವಲ ತಾತ್ಕಾಲಿಕ. ಇದರಿಂದ ಒಂದು ಅಥವಾ ಎರಡು ತ್ರೈಮಾಸಿಕದ ಮೇಲೆ ಪರಿಣಾಮವಾಗಬಹುದು. ಆದರೆ ಮುಂದಿನ 12-15 ತ್ರೈಮಾಸಿಕಕ್ಕೆ ಲಾಭವಾಗಲಿದೆ ಎಂದರು.
ಇದೇ ವೇಳೆ ಮುಂದಿನ ವರ್ಷದ ಸೆಪ್ಟೆಂಬರ್ 16ಕ್ಕೂ ಮುನ್ನವೇ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಕಾಯ್ದೆಯನ್ನು ಸಂವಿಧಾನದ ಪ್ರಕಾರ ಕಡ್ಡಾಯವಾಗಿ ಜಾರಿಗೊಳಿಸಲಾಗುವುದು. ತೆರಿಗೆ ಸಂಗ್ರಹಿಸದೇ ದೇಶ ನಡೆಸುವುದು ಅಸಾಧ್ಯ ಎಂದು ಹಣಕಾಸು ಸಚಿವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.