ವಾಣಿಜ್ಯ

10 ಸಾವಿರ ಕೋಟಿ ದಾಟಲಿರುವ ಪತಂಜಲಿ ಸಂಸ್ಥೆಯ ಆದಾಯ?

2016-17 ನೇ ಸಾಲಿನಲ್ಲಿ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆ 10 ,000 ಕೋಟಿ ಆದಾಯ ಗಳಿಸುವ ಸಾಧ್ಯತೆ ಇದೆ.

10 ಸಾವಿರ ಕೋಟಿ ದಾಟಲಿರುವ ಪತಂಜಲಿ ಸಂಸ್ಥೆಯ ಆದಾಯ?
ಬಾಬಾ ರಾಮ್ ದೇವ್
Published On :

ನವದೆಹಲಿ: 2016-17 ನೇ ಸಾಲಿನಲ್ಲಿ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆ 10 ,000 ಕೋಟಿ ಆದಾಯ ಗಳಿಸುವ ಸಾಧ್ಯತೆ ಇದ್ದು, ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆ ಹಾಗೂ ಸಂಸ್ಕರಣ ಘಟಕಗಳಿಗಾಗಿ 1 ,150 ಕೋಟಿ ರೂ ವಿನಿಯೋಗಿಸುವ ಸಾಧ್ಯತೆ ಇದೆ.

ಪತಂಜಲಿ ಆಯುರ್ವೇದದ ಸಂಸ್ಥೆಯೊಂದಿಗೆ ದೇಶಿ ಸಂಸ್ಥೆಯಾಗಿರುವ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ (ಎಫ್ಎಂಸಿಜಿ) ಸಹ ನೆಸ್ಲೆ, ಪಿ&ಜಿ ಹಾಗೂ ಹಿಂದೂಸ್ಥಾನ್ ಯುನಿಲಿವರ್ ನಂತಹ ಬಹುರಾಷ್ಟ್ರೀಯ ಕಂಪನಿಗಳಿಗೆ ಪೈಪೋಟಿ ನೀಡಿದೆ.

ಪತಂಜಲಿ ಸಂಸ್ಥೆ 4,000 ವಿತರಕರು, 10 ,000 ಮಳಿಗೆಗಳು ಹಾಗೂ 100 ಪತಂಜಲಿ ಮೆಗಾ ಮಾರ್ಟ್ ಹೊಂದಿದ್ದು ಗುರಿ ತಲುಪಲು ಸಹಕಾರಿಯಾಗಲಿದೆ ಎಂಬ ನಿರೀಕ್ಷೆಯಲ್ಲಿದೆ. ಪತಂಜಲಿ ಆಯುರ್ವೇದ ಸಂಸ್ಥೆ ಅಂತಾರಾಷ್ಟ್ರೀಯ ಮಾರುಕಟ್ಟೆಗೂ ಲಗ್ಗೆ ಇಡುವ ಮಹತ್ವಾಕಾಂಕ್ಷೆ ಹೊಂದಿದೆ ಎಂದು ಪತಂಜಲಿ ಸಂಸ್ಥೆಯ ಸ್ಥಾಪಕ ಬಾಬಾ ರಾಮ್ ದೇವ್ ತಿಳಿಸಿದ್ದಾರೆ. ಇನ್ನು ಆಧುನಿಕ ವಿಭಾಗಗಳಾದ ಡೈರಿ, ಪಶು ಆಹಾರ, ಯೋಗಕ್ಕಾಗಿ ಖಾದಿ ವಸ್ತ್ರಗಳನ್ನು ತಯಾರಿಸುವ ಉದ್ಯಮದಲ್ಲೂ ಪತಂಜಲಿ ಬ್ರಾಂಡ್ ಪರಿಚಯವಾಗಲಿದೆಯಂತೆ. ಉದ್ಯಮ ವಿಸ್ತರಣೆಗೆ ಬಂಡವಾಳದ ಬಗ್ಗೆಯೂ ಮಾಹಿತಿ ನೀಡಿರುವ ಪತಂಜಲಿ ಸಂಸ್ಥೆ ಮುಖ್ಯಸ್ಥ ಬಾಬಾ ರಾಮ್ ದೇವ್, ಸಾಲ ನೀಡಲು ಬ್ಯಾಂಕ್ ಗಳು ಸಿದ್ಧವಾಗಿವೆ. ಉದ್ಯಮವನ್ನು ವಿಸ್ತರಿಸಲು ಹಣಕಾಸಿನ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.