ವಾಣಿಜ್ಯ

ಆರ್ ಬಿಐ ಗವರ್ನರ್ ಆಗಿದ್ದರೂ ರಾಜನ್'ಗೆ ಕಡಿಮೆ ವೇತನ!

ರಘುರಾಮ್ ರಾಜನ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ ನ ಮುಖ್ಯಸ್ಧರಾಗಿದ್ದಾರೆ. ಅವರು ಎಲ್ಲರಿಗಿಂತಲೂ ಹೆಚ್ಚಿನ ವೇತನ ಪಡೆಯುತ್ತಿರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಮುಖ್ಯಸ್ಥನಾಗಿದ್ದರೂ ಹಿರಿಯ...

ಆರ್ ಬಿಐ ಗವರ್ನರ್ ಆಗಿದ್ದರೂ ರಾಜನ್'ಗೆ ಕಡಿಮೆ ವೇತನ!
ಆರ್ ಬಿಐ ಗವರ್ನರ್ ರಘುರಾಮ್ ರಾಜನ್ (ಸಂಗ್ರಹ ಚಿತ್ರ)
Published On :

ನವದೆಹಲಿ: ರಘುರಾಮ್ ರಾಜನ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ ನ ಮುಖ್ಯಸ್ಧರಾಗಿದ್ದಾರೆ. ಅವರು ಎಲ್ಲರಿಗಿಂತಲೂ ಹೆಚ್ಚಿನ ವೇತನ ಪಡೆಯುತ್ತಿರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಮುಖ್ಯಸ್ಥನಾಗಿದ್ದರೂ ಹಿರಿಯ ಅಧಿಕಾರಿಗಿಂತಲೂ ಕಡಿಮೆ ವೇತನ ಪಡೆಯುತ್ತಿದ್ದಾರೆಂಬ ಸತ್ಯ ಸೋಮವಾರ ಬಯಲಾಗಿದೆ.

ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಆರ್‌ಬಿಐ ಪ್ರಕಟಿಸಿರುವ ಅಧಿಕಾರಿಗಳ ಮಾಸಿಕ ವೇತನ ಪಟ್ಟಿಯಲ್ಲಿ ಈ ವಿಚಾರ ಉಲ್ಲೇಖವಾಗಿದ್ದು, ರಾಜನ್ ಮಾಸಿಕ 1,98,700 ರೂ. ವೇತನ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.

ಇದರಲ್ಲಿ ಮೂಲವೇತನ ರು. 90 ಸಾವಿರ, ತುಟ್ಟಿ ಭತ್ಯೆ 1,01,700 ಹಾಗೂ ಇತರೆ ಭತ್ಯೆಗಳ ರೂಪದಲ್ಲಿ 7 ಸಾವಿರ ಸಿಗುತ್ತದೆ. ರಾಜನ್‌ಗೆ ಹೋಲಿಸಿದರೆ ಆರ್‌ಬಿಐನ ಇತರ ಅಧಿಕಾರಿಗಳು ಹೆಚ್ಚಿನ ವೇತನ ಪಡೆಯುತ್ತಿದ್ದಾರೆ.

ಗೋಪಾಲಕೃಷ್ಣ ಸೀತಾರಾಂ ಹೆಗ್ಡೆ (4 ಲಕ್ಷ ರೂ.) ಅಣ್ಣಾಮಲೈ ಅರಾಪ್ಪುಲಿ ಗೌಂಡರ್ (2,20,355 ರೂ.) ಹಾಗೂ ವಿ.ಕಂದಸ್ವಾಮಿ (2.1ಲಕ್ಷ ರೂ) ವೇತನ ಪಡೆಯುತ್ತಿದ್ದಾರೆ. 2015ರ ಜೂನ್-ಜುಲೈ  ವೇತನ ಮಾಹಿತಿ ಇದಾಗಿದೆ. ಮೂವರು ಹಿರಿಯ ಅಧಿಕಾರಿಗಳ ಹೆಸರು, ವೇತನದ ಮಾಹಿತಿ ನೀಡಲಾಗಿದ್ದರೂ ಅವರ ಹುದ್ದೆ ಕುರಿತು ಸ್ಪಷ್ಟ ವಿವರಣೆ ಸಿಕ್ಕಿಲ್ಲ. ಸೀತಾರಾಂ ಹೆಗ್ಡೆ ಈ ಹಿಂದೆ ‘ಕಾನೂನು ಸಲಹೆಗಾರರಾಗಿ’ದ್ದರು ಎನ್ನಲಾಗಿದೆ. ಆರ್‌ಬಿಐನ ವಕ್ತಾರ ಅಲ್ಪಾನಾ ಕಿಲ್ಲಾವಾಲಾ ವೇತನ ಸಂಸ್ಥೆಯ ನಾಲ್ವರು ಡೆಪ್ಯುಟಿ ಗವರ್ನರ್,  ಕಾರ್ಯಕಾರಿ ನಿರ್ದೇಶಕರಿಗಿಂತ ಹೆಚ್ಚಿದೆ.   

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.