ರೆಪೊ ದರ ಇಳಿಕೆ: 250 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್
ಭಾರತೀಯ ರಿಸರ್ವ್ ಬ್ಯಾಂಕ್ ಅಧ್ಯಕ್ಷ ರಘುರಾಮ್ ರಾಜನ್ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ರೆಪೋ ದರವನ್ನು ಕಡಿತಗೊಳಿಸುತ್ತಿದ್ದಂತೆಯೇ ಷೇರುಮಾರುಕಟ್ಟೆ ಚೇತರಿಸಿಕೊಂಡಿದ್ದು, ಬಿಎಸ್ಇ ಸೆನ್ಸೆಕ್ಸ್ 250 ಅಂಕಗಳ ಏರಿಕೆ ಕಂಡಿದೆ...

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಅಧ್ಯಕ್ಷ ರಘುರಾಮ್ ರಾಜನ್ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ರೆಪೋ ದರವನ್ನು ಕಡಿತಗೊಳಿಸುತ್ತಿದ್ದಂತೆಯೇ ಷೇರುಮಾರುಕಟ್ಟೆ ಚೇತರಿಸಿಕೊಂಡಿದ್ದು, ಬಿಎಸ್ಇ ಸೆನ್ಸೆಕ್ಸ್ 250 ಅಂಕಗಳ ಏರಿಕೆ ಕಂಡಿದೆ.
ಸಕಾರತ್ಮಕ ವಹಿವಾಟು ಬೆಳವಣಿಗೆಯೊಂದಿಗೇ ದಿನದ ವಹಿವಾಟು ಆರಂಭಿಸಿದ ಸೆನ್ಸೆಕ್ಸ್ ಬೆಳಗ್ಗೆ ಸುಮಾರು 308 ಅಂಕಗಳ ಕುಸಿತಕಂಡಿತ್ತು. ಆದರೆ ಇಂದು ಆರ್ ಬಿಐನ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ ರಾಜನ್ ರೆಪೊ ದರವನ್ನು ಶೇ.0.5ರಷ್ಟು (50 ಬೇಸಿಸ್ ಪಾಯಿಂಟ್) ಕಡಿತಗೊಳಿಸುವುದಾಗಿ ಘೋಷಣೆ ಮಾಡಿದ್ದರು. ಶೇ.4 ರಷ್ಟಿದ್ದ ಸಿ.ಆರ್.ಆರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಶೇ.7 .25 ರಷ್ಟಿದ್ದ ರೆಪೋದರ ರಿಸರ್ವ್ ಬ್ಯಾಂಕ್ ನೀತಿ ಪರಾಮರ್ಶೆ ನಂತರ ಶೇ.6 .75 ರಷ್ಟಾಗಿದ್ದು ವಾಹನ ಹಾಗೂ ಗೃಹ ಸಾಲ ದರ ಅಗ್ಗವಾಗಿದೆ. ಇದು ಭಾರತೀಯ ಷೇರುಮಾರುಕಟ್ಟೆಯ ಚೇತರಿಕೆಗೆ ಕಾರಣ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
250 ಅಂಕಗಳ ಏರಿಕೆಯೊಂದಿಗೆ ಬಿಎಸ್ಇ ಸೆನ್ಸೆಕ್ಸ್ ಒಟ್ಟು 25, 886 ಅಂಕಗಳಿಗೇರಿದ್ದು, ನಿಫ್ಟಿ ಕೂಡ ಅಲ್ಪ ಚೇತರಿಕೆ ಕಂಡಿದೆ. ಇನ್ನು ಹೆಚ್ ಡಿಎಫ್ ಸಿ, ಮಾರುತಿ, ಮಹೀಂದ್ರ ಅಂಡ್ ಮಹೀಂದ್ರ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಶೇ.4.19ರಷ್ಟು ಏರಿಕೆ ಕಂಡುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


