ಸ್ಯಾಮ್ಸಂಗ್ ಹಳೇ ಫೋನುಗಳ ಮಾರಾಟಕ್ಕೆ ತಡೆ
ಆ್ಯಪಲ್ ಹಾಗೂ ಸ್ಯಾಮ್ಸಂಗ್ ನಡುವೆ ನಡೆಯುತ್ತಿರುವ ದೀರ್ಘ ಕಾಲದ ಕಾನೂನು ಹೋರಾಟ ಹೊಸ ಮಗ್ಗುಲಿಗೆ ಹೊರಳಿದೆ. ..

ವಾಷಿಂಗ್ಟನ್ : ಆ್ಯಪಲ್ ಹಾಗೂ ಸ್ಯಾಮ್ಸಂಗ್ ನಡುವೆ ನಡೆಯುತ್ತಿರುವ ದೀರ್ಘ ಕಾಲದ ಕಾನೂನು ಹೋರಾಟ ಹೊಸ ಮಗ್ಗುಲಿಗೆ ಹೊರಳಿದೆ. ಸ್ಯಾಮ್ಸಂಗ್‌ನ ಕೆಲವೊಂದು ಹಳೆಯ ಫೋನ್ ಮಾಡೆಲ್‌ಗಳನ್ನು ಅಮೆರಿಕದಲ್ಲಿ ಮಾರಾಟ ಮಾಡುವಂತಿಲ್ಲ ಎಂದು ಅಮೆರಿಕಾದ ಫೆಡರಲ್ ನ್ಯಾಯಾಲಯ ತೀರ್ಪು ನೀಡಿದೆ.
ಆ್ಯಪಲ್ ಐಫೋನ್‌ನ ತಂತ್ರಜ್ಞಾನವನ್ನೇ ನಕಲಿಸಿ ಅವುಗಳನ್ನು ರಚಿಸಲಾಗಿದೆ ಎಂಬುದು ನ್ಯಾಯಾಲಯದಲ್ಲಿ ದೃಢಪಟ್ಟ ಸಂಗತಿ. ಇದರಿಂದ ಆ್ಯಪಲ್ ಹೋರಾಟಕ್ಕೆ ಜಯ ದೊರೆತಂತಾಗಿದೆಯಾದರೂ, ಸ್ಯಾಮ್ಸಂಗ್ ಮೇಲೆ ಅಷ್ಟೇನೂ ದೊಡ್ಡ ಮಟ್ಟದ ಪ್ರಭಾವ ಬೀರಲಾರದು. ಪ್ರಮುಖ ಕಾರಣವೆಂದರೆ, ಈ ತೀರ್ಪು ಹಳೆಯ ಫೋನುಗಳು ಅಂದರೆ ಈಗ ಜನಪ್ರಿಯತೆ ಕಳೆದುಕೊಂಡಿರುವ ಫೋನುಗಳಿಗೆ ಸಂಬಂಧಿಸಿದ್ದಾಗಿದೆ.
ತೀರಾ ಇತ್ತೀಚಿನ ಫೋನ್ ಎಂದರೆ ಗ್ಯಾಲಕ್ಸಿ ಎಸ್3. ಆ ಬಳಿಕ ಅದರ ಮುಂದಿನ ಆವೃತ್ತಿಗಳು ಸಾಕಷ್ಟು ಬಂದಿದ್ದು, ಈಗ ಗ್ಯಾಲಕ್ಸಿ ಎಸ್6 ಮಾರುಕಟ್ಟೆಯಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


