ವಾಣಿಜ್ಯ

ಪ್ರಸಕ್ತ ಸಾಲಿನಲ್ಲಿ ಶೇ.8ರಷ್ಟು ಆರ್ಥಿಕ ಅಭಿವೃದ್ಧಿ ಅಂದಾಜು: ಅರವಿಂದ್ ಸುಬ್ರಮಣಿಯನ್

ದೇಶದ ಆರ್ಥಿಕತೆ ಮುಂದೆ ಸದ್ಯ ಇರುವುದು ಹಣದುಬ್ಬರ ಇಳಿಕೆ ಸವಾಲು. ಆದರೂ ಪ್ರಸಕ್ತ ಸಾಲಿನಲ್ಲಿ ಆರ್ಥಿಕ ಪ್ರಗತಿ ಶೇ.8ರಷ್ಟು...

ಪ್ರಸಕ್ತ ಸಾಲಿನಲ್ಲಿ ಶೇ.8ರಷ್ಟು ಆರ್ಥಿಕ ಅಭಿವೃದ್ಧಿ ಅಂದಾಜು: ಅರವಿಂದ್ ಸುಬ್ರಮಣಿಯನ್
ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್
Published On :

ನವದೆಹಲಿ: ದೇಶದ ಆರ್ಥಿಕತೆ ಮುಂದೆ ಸದ್ಯ ಇರುವುದು ಹಣದುಬ್ಬರ ಇಳಿಕೆ ಸವಾಲು. ಆದರೂ ಪ್ರಸಕ್ತ ಸಾಲಿನಲ್ಲಿ ಆರ್ಥಿಕ ಪ್ರಗತಿ ಶೇ.8ರಷ್ಟು ಇರಲಿದೆ ಎಂಬ ವಿಶ್ವಾಸವನ್ನು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ವ್ಯಕ್ತಪಡಿಸಿದ್ದಾರೆ.

ಹಣದುಬ್ಬರ ಎಂದರೆ ವ್ಯವಸ್ಥೆಯಲ್ಲಿ ಹಣದ ಚಲಾವಣೆ ಹೆಚ್ಚಾಗಿರಲಿದ್ದು ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿ ದರಗಳು ಮೇಲೇರಲಿವೆ. ಹಣದುಬ್ಬರ ಇಳಿತ ಎಂದರೆ ವ್ಯವಸ್ಥೆಯಲ್ಲಿ ಹಣದ ಲಭ್ಯತೆ ಕಡಿಮೆ ಇದ್ದು ಉತ್ಪನ್ನಗಳಿಗೆ ಬೇಡಿಕೆಯೆೀ ಇರುವುದಿಲ್ಲ. ಆಗ ದರಗಳು ಇಳಿಮುಕ ಕಾಣಲಿವೆ.

ದೇಶದ ಒಟ್ಟಾರೆ ಆರ್ಥಿಕ ಪ್ರಗತಿ ಸರಿಯಾದ ದಾರಿಯಲ್ಲಿ ಸಾಗುತ್ತಿದೆ. ಹಾಗಿದ್ದರೂ ಬೆಳವಣಿಗೆ ವೇಗ ಅದರ ಸಾಮಥ್ರ್ಯಕ್ಕಿಂತ ಕಡಿಮೆ ಇದೆ. ಆರ್ಥಿಕ ಕ್ಷೇತ್ರದಲ್ಲಿನ ಪ್ರಮುಖ ಸುಧಾರಣೆಗಳನ್ನು ಕೈಗೊಳ್ಳುವುದರಿಂದ ವೇಗ ಹೆಚ್ಚಲಿದೆ ಎಂದಿದ್ದಾರೆ.

ಪ್ರಸಕ್ತ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಪ್ರಗತಿ ನಿರೀಕ್ಷೆಗಿಂತಲೂ ಕಡಿಮೆಯಾಗಿರುವ ಕುರಿತು ಮಾತನಾಡಿದ ಅವರು, ಆರ್ಥಿಕತೆ ಪ್ರಗತಿಯಲ್ಲಿರುವುದನ್ನು ಅಂಕಿಅಂಶಗಳು ತೋರಿಸುತ್ತಿವೆ. ತೆರಿಗೆ ಸಂಗ್ರಹ, ಸಾಲ ಬೆಳವಣಿಗೆ ಹೆಚ್ಚಾಗಿದೆ ಎಂದಿದ್ದಾರೆ.

ಈ ಸಾಲಿನಲ್ಲಿ ದೇಶದ ಆರ್ಥಿಕತೆ ಶೇ.8ರಿಂದ 8.5ರಷ್ಟು ಅಭಿವೃದ್ಧಿ ಕಾಣಲಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಜಿಡಿಪಿ ಅಂಕಿ ಶಗಳನ್ನು ಮರುಮೌಲ್ಯೀಕರಿಸಿದರೆ ಪ್ರಗತಿ ಶೇ.8ರ ಸನಿಹದಲ್ಲಿರಲಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.