ವಿನಿಮಯ ವ್ಯಾಪಾರ ನಿಧಿಗಳ ನಿಯಮ ಬದಲಾವಣೆಗೆ ಸಿದ್ಧ: ಸೆಬಿ ಅಧ್ಯಕ್ಷ ಯು.ಕೆ.ಸಿನ್ಹಾ
ವ್ಯಾಪಾರ ವಿನಿಮಯದಲ್ಲಿ ಹೆಚ್ಚು ಪಾರದರ್ಶಕತೆ ತರಲು ಅಗತ್ಯಬಿದ್ದರೆ ವಿನಿಮಯ ಕೇಂದ್ರದಿಂದ ಮಾರಾಟವಾದ ನಿಧಿಗಳು...

ಮುಂಬೈ: ವ್ಯಾಪಾರ ವಿನಿಮಯದಲ್ಲಿ ಹೆಚ್ಚು ಪಾರದರ್ಶಕತೆ ತರಲು ಅಗತ್ಯಬಿದ್ದರೆ ವಿನಿಮಯ ಕೇಂದ್ರದಿಂದ ಮಾರಾಟವಾದ ನಿಧಿಗಳು ಸಂಬಂಧಿಸಿದ ನಿಯಂತ್ರಕ ನಿಯಮಗಳನ್ನು ಬದಲಾಯಿಸಲಾಗುವುದು ಎಂದು ಷೇರು ಮಾರುಕಟ್ಟೆ ನಿಯಂತ್ರಕ ಕೇಂದ್ರ ಸೆಬಿಯ ಅಧ್ಯಕ್ಷ ಯು.ಕೆ.ಸಿನ್ಹಾ ತಿಳಿಸಿದ್ದಾರೆ.
ಇಟಿಎಫ್(ವಿನಿಮಯ ಕೇಂದ್ರದಿಂದ ಮಾರಾಟವಾದ ನಿಧಿಗಳು) ಎಂದರೆ, ಸೂಚ್ಯಂಕ, ಸರಕು ಅಥವಾ ಸೂಚ್ಯಂಕ ನಿಧಿಯ ರೀತಿ ಆಸ್ತಿ-ಪಾಸ್ತಿಗಳ ಪತ್ತೆಯ ಒಂದು ಮಾರುಕಟ್ಟೆ ಭದ್ರತಾ ಕೇಂದ್ರವಾಗಿದೆ.
ತಜ್ಞರು ಮತ್ತು ಷೇರು ಹೂಡಿಕೆದಾರರು ಬಯಸಿದರೆ ಇಟಿಎಫ್ ಗೆ ಅಗತ್ಯ ಬದಲಾವಣೆಗಳನ್ನು ತರಲು ಸೆಬಿ ಸಿದ್ಧವಿದೆ ಎಂದು ಸಿನ್ಹಾ ತಿಳಿಸಿದರು. ಹೂಡಿಕೆದಾರರ ಪ್ರಯೋಜನಕ್ಕಾಗಿ ನಿಧಿಗಳ ಮಾಹಿತಿಗಳನ್ನು ಹೆಚ್ಚು ಹೆಚ್ಚು ನೀಡುವುದು ಉತ್ತಮ ಎಂದು ಅವರು ಹೇಳಿದರು.
ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕದ ಭಾರತ ಇಟಿಎಫ್ ಸಮ್ಮೇಳನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಟಿಎಫ್ ಮಾಹಿತಿಗಳನ್ನು ಸರಿಯಾಗಿ ಬಹಿರಂಗಪಡಿಸಿದರೆ ಭಾರತದ ಅಭಿವೃದ್ಧಿಗೆ ಇದು ಪ್ರಮುಖ ಅವಕಾಶವಾಗುತ್ತದೆ. ಹೂಡಿಕೆದಾರರ ಮತ್ತು ಮಾರುಕಟ್ಟೆ ಅಪಾಯಗಳನ್ನು ನಿವಾರಿಸಲು ಕ್ರಿಯಾಶೀಲ ರೀತಿಯಲ್ಲಿ ಉತ್ಪಾದನೆ ಮಾಡಬೇಕೆಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


