ತೊಗರಿ ಬೇಳೆ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ
ಮಹಾರಾಷ್ಟ್ರ ಸರ್ಕಾರ ಕಳೆದ ವಾರ ವಿಧಿಸಿದ್ದ ದಾಸ್ತಾನು ಮಿತಿ ನೀತಿಯನ್ನು ಮುಂದುವರೆಸಿದರೆ ಆಮದುಮಾಡಿಕೊಳ್ಳುವುದಕ್ಕೆ ಅಡಚಣೆ ಉಂಟಾಗಲಿದೆ.

ಮುಂಬೈ: ಅಕ್ಟೋಬರ್ ನಿಂದ ಜನವರಿ ವರೆಗಿನ ಬಳಕೆಗೆ ಭಾರತ 2 .5 ಮಿಲಿಯನ್ ಟನ್ ತೊಗರಿಬೇಳೆ ಆಮದು ಮಾಡಿಕೊಳ್ಳಲು ಭಾರತ ಸರ್ಕಾರ ನಿರ್ಧರಿಸಿದೆ. ಆದರೆ ಮಹಾರಾಷ್ಟ್ರ ಸರ್ಕಾರ ಕಳೆದ ವಾರ ವಿಧಿಸಿದ್ದ ದಾಸ್ತಾನು ಮಿತಿ ನೀತಿಯನ್ನು ಮುಂದುವರೆಸಿದರೆ ಆಮದುಮಾಡಿಕೊಳ್ಳುವುದಕ್ಕೆ ಅಡಚಣೆ ಉಂಟಾಗಲಿದೆ.
ಕೆನಡಾ, ಮಯಾನ್ಮಾರ್, ಆಸ್ಟ್ರೇಲಿಯಾ ಮುಂತಾದ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಿದರೆ ತೊಗರಿ ಬೇಳೆ ಕೊರತೆ ಹೆಚ್ಚಾಗಲಿದ್ದು ಬೆಲೆ ಏರಿಕೆ ಮುಂದುವರೆಯಲಿದೆ ಎಂದು ವ್ಯಾಪಾರ ಅಂಗ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
ಮಾಹಾರಾಷ್ಟ್ರದಲ್ಲಿರುವ ಮುಂಬೈ ಬಂದರು ಅರ್ಧ ಭಾಗದಷ್ಟು ಆಮದನ್ನು ನಿರ್ವಹಿಸುತ್ತದೆ. ಅಕ್ರಮ ದಾಸ್ತಾನನ್ನು ತಡೆಗಟ್ಟಲು ಮಹಾರಾಷ್ಟ್ರ ಸರ್ಕಾರ ಕಳೆದ ವಾರದಿಂದ ಆಮದು ಮಿತಿಯನ್ನು 350 ಟನ್ ಗಳಿಗೆ ನಿಗದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


