ವಾಣಿಜ್ಯ

ಟಿಸಿಎಸ್ ಲಾಭ ರು. 6,085 ಕೋಟಿ

ದೇಶದ ಅತಿದೊಡ್ಡ ಸಾಫ್ಟ್ ವೇರ್ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಸೆಪ್ಟೆಂಬರ್‍ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ರು6,084.66 ಕೋಟಿ ನಿವ್ವಳ ಲಾಭಗಳಿಸಿದೆ...

ಟಿಸಿಎಸ್ ಲಾಭ ರು. 6,085 ಕೋಟಿ
ಟಿಸಿಎಸ್ (ಸಂಗ್ರಹ ಚಿತ್ರ)
Published On :

ನವದೆಹಲಿ: ದೇಶದ ಅತಿದೊಡ್ಡ ಸಾಫ್ಟ್ ವೇರ್ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಸೆಪ್ಟೆಂಬರ್‍ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ರು. 6,084.66 ಕೋಟಿ ನಿವ್ವಳ  ಲಾಭಗಳಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಗಳಿಸಿದ್ದ ರು. 5,244.28 ಕೋಟಿಗೆ ಹೋಲಿಸಿದರೆ ಶೇ.16ರಷ್ಟು ಏರಿಕೆ ಕಂಡಿದೆ. ಭಾರತೀಯ ಆಡಿಟಿಂಗ್  ಪದ್ಧತಿಯಂತೆ ವರದಿಗಳನ್ನು ಮಂಡಿಸಲಾಗಿದ್ದು  ಕಾರ್ಯಾಚರಣೆಯಿಂದ ಕಂಪನಿಯ ಒಟ್ಟಾರೆ ಆದಾಯದಲ್ಲಿ ಶೇ.14.06ರಷ್ಟು ಏರಿಕೆ ಕಂಡು ರು.27,165.48 ಕೋಟಿಗೆ ತಲುಪಿದೆ. ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು, ರಿಟೇಲ್, ವಿಮೆ ಸೇರಿದಂತೆ ಹಲವು ಕಂಪನಿಗಳಿಗೆ ನಮ್ಮ ಸೇವೆಗಳನ್ನು ವಿಸ್ತರಿಸಿದ್ದೇವೆ. ಕರೆನ್ಸಿ ಮೌಲ್ಯ ನಿಶ್ಚಿತ ದರದಲ್ಲಿ ಇಟ್ಟುಕೊಂಡು ವಹಿವಾಟು ನಡೆಸಿದ್ದು ಪ್ರಗತಿಯನ್ನು ಹೆಚ್ಚಿಸಿದೆ ಎಂದು ಕಂಪನಿ ಸಿಇಒ  ಮತ್ತು ಎಂಡಿ ಎನ್.ಚಂದ್ರಶೇಖರನ್ ಹೇಳಿದ್ದಾರೆ.

ವೇಗವಾಗಿ ಆರ್ಥಿಕ ಅಭಿವೃದ್ಧಿ ಕಾಣುತ್ತಿರುವ ಲ್ಯಾಟಿನ್ ಅಮೆರಿಕ, ಭಾರತ ಮತ್ತು ಪೂರ್ವ ಏಷ್ಯಾ ದೇಶಗಳ ಜೊತೆಗೆ ಉತ್ತರ ಅಮೆರಿಕ, ಬ್ರಿಟನ್ ಮತ್ತು ಯೂರೊಪ್ ವಲಯಗಳು ಪ್ರಗತಿಯತ್ತ  ಸಾಗಿರುವುದು ಕಂಪೆನಿ ನೆರವಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ. ಸಿಬ್ಬಂದಿ ಸೇರಿದಂತೆ ಸಾಮರ್ಥ್ಯ ಬಳಕೆ ಪ್ರಮಾಣ ಶೇ.86ರಷ್ಟಿದ್ದು ಮಧ್ಯದಲ್ಲೇ ಕಂಪನಿ ಬಿಡುವವರ ಸಂಖ್ಯೆ  ಶೇ.16.2ರಷ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.