ವಾಣಿಜ್ಯ

ಕಿಂಗ್‌ಫಿಷರ್ ವಿರುದ್ಧ ಇನ್ನಷ್ಟು ಎಫ್ಐಆರ್?

ಕಿಂಗ್‌ಫಿಷರ್ ಕಂಪನಿ ಸುಮಾರು 20 ಕೋಟಿ ಡಾಲರ್‍ಗಳನ್ನು ವಿದೇಶಗಳಿಗೆ ವರ್ಗಾಯಿಸಿದೆ ಎಂಬ ಆರೋಪಗಳತ್ತ...

ಕಿಂಗ್‌ಫಿಷರ್ ವಿರುದ್ಧ ಇನ್ನಷ್ಟು ಎಫ್ಐಆರ್?
ವಿಜಯ್ ಮಲ್ಯ
Published On :
ನವದೆಹಲಿ: ಕಿಂಗ್‌ಫಿಷರ್ ಕಂಪನಿ ಸುಮಾರು 20 ಕೋಟಿ ಡಾಲರ್‍ಗಳನ್ನು ವಿದೇಶಗಳಿಗೆ ವರ್ಗಾಯಿಸಿದೆ ಎಂಬ ಆರೋಪಗಳತ್ತ ತನಿಖೆ ನಡೆಸಲು ಸಿಬಿಐ ನೋಟ ಹರಿಸಿರುವ ನಡುವೆಯೇ ಸಾಲ ಹಿಂದಿರುಗಿಸುವುದಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಎಫ್ ಐಆರ್‍ಗಳನ್ನು ಸಿಬಿಐ ದಾಖಲಿಸುವ ಸಾಧ್ಯತೆಗಳಿವೆ. 
ಐಡಿಬಿಐ ಬ್ಯಾಂಕ್‍ಗೆ ರು.900 ಕೋಟಿ ಪಾವತಿಗೆ ಸಂಬಂಧಿಸಿದಂತೆ ಈಗಾಗಲೆ ಎಫ್ಐಆರ್ ದಾಖಲಿಸಲಾಗಿದೆ. 
ಕಂಪನಿ 10 ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ರು.3,100 ಕೋಟಿ ಸಾಲ ಪಾವತಿಸಬೇಕಾಗಿದ್ದು, ಎಲ್ಲ ಪ್ರಕರಣಗಳನ್ನು ತನಿಖೆ ವ್ಯಾಪ್ತಿಗೆ ತರಲು ಇನ್ನಷ್ಟು ಎಫ್ ಐಆರ್ ಗಳನ್ನು ದಾಖಲಿಸಲಾಗುವುದು ಎಂದು ಸಿಬಿಐ ಮೂಲಗಳು ತಿಳಿಸಿವೆ. ಈ ಮಧ್ಯಯೇ ಹಣವನ್ನು ವಿದೇಶಗಳಿಗೆ ವರ್ಗಾಯಿಸಿರುವ ಕುರಿತೂ ತನಿಖೆ ನಡೆಸಲಾಗುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.