ಕಪ್ಪು ಹಣ ಹೊಂದಿದವರ ವಿರುದ್ಧ ಕ್ರಮ ಖಚಿತ : ಜೇಟ್ಲಿ
ವಿದೇಶ ರಾಷ್ಟ್ರಗಳಲ್ಲಿ ಅಕ್ರಮ ಠೇವಣಿ ಹೊಂದಿರುವ ಖಾತೆದಾರರು ಶಿಕ್ಷೆಯನ್ನು ಎದುರಿಸಲೇಬೇಕಾಗುತ್ತದೆ ಎಂದು ಗೃಹ ಸಚಿವ...

Published On :
ನವದೆಹಲಿ: ವಿದೇಶ ರಾಷ್ಟ್ರಗಳಲ್ಲಿ ಅಕ್ರಮ ಠೇವಣಿ ಹೊಂದಿರುವ ಖಾತೆದಾರರು ಶಿಕ್ಷೆಯನ್ನು ಎದುರಿಸಲೇಬೇಕಾಗುತ್ತದೆ ಎಂದು ಗೃಹ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಕಪ್ಪು ಹಣ ಪಿಡುಗಿನ ತಡೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪುನರುಚ್ಚರಿಸಿರುವ ಹಣಕಾಸು ಸಚಿವಾಲಯ ವಿದೇಶದಲ್ಲಿರುವ ಕಪ್ಪು ಹಣವನ್ನು ಘೋಷಿಸಲು ಸರ್ಕಾರ ನೀಡಿರುವ ಗಡುವನ್ನು ಬಳಸಿಕೊಳ್ಳದವರು ವಿಷಾದಿಸಬೇಕಾಗುತ್ತದೆ ಎಂದು ಹೇಳಿದೆ. ಕಪ್ಪು ಹಣ ಮತ್ತು ತೆರಿಗೆ ಹೇರಿಕೆ ಕಾಯ್ದೆ 2015ರ ಅಡಿಯಲ್ಲಿ ವಿದೇಶಗಳಲ್ಲಿರುವ ಕಪ್ಪು ಹಣ ಘೋಷಿಸುವುದಕ್ಕೆ ಸರ್ಕಾರ 90 ದಿನಗಳ ಅವಕಾಶ ನೀಡಿತ್ತು. ಈ ಅವಧಿ ಸೆ. 30ಕ್ಕೆ ಕೊನೆಯಾಗಿದೆ. ಈ ಅವಧಿಯಲ್ಲಿ ಕೇವಲ 638 ಮಂದಿ ಮಾತ್ರ ರು. 3,770 ಕೋಟಿ ಮೊತ್ತದ ಕಪ್ಪು ಹಣವನ್ನು ಘೋಷಿಸಿದ್ದಾರೆ.
ಅವಧಿ ಮುಗಿದ ನಂತರ ಕಪ್ಪು ಹಣ ಘೋಷಿಸುವವರು ಡಿಸೆಂಬರ್ 31, 2015ರೊಳಗೆ ಶೇ. 30 ರಷ್ಟು ತೆರಿಗೆ ಮತ್ತು ಅದಕ್ಕೆ ಶೇ. 30 ರಷ್ಟು ಜುಲ್ಮಾನೆಯನ್ನೂ ಪಾವತಿಸಬೇಕಾಗುತ್ತದೆ.
ಒಂದು ವೇಳೆ ಕಪ್ಪು ಹಣ ಹೊಂದಿದವರು ತಮ್ಮ ಆಸ್ತಿಯನ್ನು ಘೋಷಿಸದೇ ಇದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜೇಟ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


