ವಾಣಿಜ್ಯ

ಕ್ವಿಂಟಲ್ ಕಬ್ಬಿಗೆ ರು.4.50 ಸಬ್ಸಿಡಿ

ಕಬ್ಬು ಬೆಳೆಗಾರರಿಗೆ ಈ ಸೀಸನ್‍ನಲ್ಲಿ ಪ್ರತಿ ಕ್ವಿಂಟಾಲ್ ಕಬ್ಬಿಗೆ ರು.4.50 ಸಹಾಯಧನ ಪಾವತಿ ಸೇರಿದಂತೆ...

ಕ್ವಿಂಟಲ್ ಕಬ್ಬಿಗೆ ರು.4.50 ಸಬ್ಸಿಡಿ
ಸಂಗ್ರಹ ಚಿತ್ರ
Published On :
ನವದೆಹಲಿ: ಕಬ್ಬು ಬೆಳೆಗಾರರಿಗೆ ಈ ಸೀಸನ್‍ನಲ್ಲಿ ಪ್ರತಿ ಕ್ವಿಂಟಾಲ್ ಕಬ್ಬಿಗೆ ರು.4.50 ಸಹಾಯಧನ ಪಾವತಿ ಸೇರಿದಂತೆ ಏಳು ಪ್ರಮುಖ ಪ್ರಸ್ತಾವನೆಗಳಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. 
ಇದರೊಂದಿಗೆ ಕೇಂದ್ರ ಸರ್ಕಾರ ಹಣಕಾಸು ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಆರ್ಥಿಕ ಸುಧಾರಣೆಗಳನ್ನು ಕೈಗೊಳ್ಳುವುದನ್ನು ಮುಂದುವರೆಸಿದೆ. ಪ್ರಧಾನ ಮಂತ್ರಿಗಳ ಸಿಂಗಾಪುರ ಪ್ರವಾಸ ನಿಗದಿಗೊಂಡಿದ್ದು ಅವರು ಪ್ರಯಾಣ ಬೆಳೆಸುವ ಮುನ್ನ ಸಚಿವ ಸಂಪುಟ ಸಭೆ ಅಧ್ಯಕ್ಷತೆ ವಹಿಸಿದ್ದರು. 
ಸರ್ಕಾರಿ ಸ್ವಾಮ್ಯದ ಗಣಿಗಾರಿಕೆ ಕಂಪನಿ ಕೋಲ್ ಇಂಡಿಯಾದಲ್ಲಿ ಸರ್ಕಾರದ ಪಾಲನ್ನು ಶೇ.10ರಷ್ಟು ಹಿಂಪಡೆಯಲೂ ಸಚಿವ ಸಂಪುಟ ಅನುಮೋದನೆ ನೀಡಿದೆ. ಕೇರಳದ ಕೊಚ್ಚಿನ್ ಬಂದರನ್ನು ಅಭಿವೃದ್ಧಿಪಡಿಸಲು ಬಂಡವಾಳ ಕ್ರೋಡೀಕರಿಸಲು ಮುಂದಾಗಿದೆ. 
ಇದಕ್ಕಾಗಿ ಸಾರ್ವಜನಿಕರಿಂದ ಬಂಡವಾಳ ಕ್ರೋಡೀಕರಿಸಲು ಸಾರ್ವಜನಿಕ ಷೇರು ವಿತರಣೆ (ಐಪಿಒ)ಗೆ ಸಂಪುಟ ಅನುಮೋದನೆ ನೀಡಿತು. ಜಾಗತಿಕ ಆರ್ಥಿಕತೆ ಮಂದಗತಿಯಲ್ಲಿ ಸಾಗಿರುವುದರಿಂದ ದೇಶದ ರಫ್ತು ಗಣನೀಯವಾಗಿ ಕುಸಿತ ಕಾಣುತ್ತಿದೆ. 
ಹೀಗಾಗಿ ರಫ್ತು ಉತ್ತೇಜಿಸಲು ರಫ್ತು ಕಂಪನಿಗಳಿಗೆ ಶೇ.3ರಷ್ಟು ಬಡ್ಡಿ ವಿನಾಯಿತಿ ನೀಡಲೂ ಸಭೆ ಅನುಮತಿ ನೀಡಿದೆ. ಕೋಲ್ ಇಂಡಿಯಾದಲ್ಲಿನ ಶೇ.10ರಷ್ಟು ಪಾಲು ಮಾರಾಟದಿಂದ ಬೊಕ್ಕಸಕ್ಕೆ ರು.20,000 ಕೋಟಿ ಸಂಗ್ರಹವಾಗುವ ಅಂದಾಜಿದೆ ಎಂದು ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯತ್ ಸಚಿವ ಪಿಯುಷ್ ಗೋಯಲ್ ಹೇಳಿದ್ದಾರೆ.
ಪ್ರಸ್ತುತ ಸಿಐಎಲ್‍ನ ಷೇರು ದರದಂತೆ ಶೇ.10ರಷ್ಟು ಷೇರಿನ ಮೌಲ್ಯ ರು.21,137.71 ಕೋಟಿಗಳಾಗಲಿದೆ. ಸಿಐಎಲ್‍ನಲ್ಲಿ ಸರ್ಕಾರ ಶೇ.79.65ರಷ್ಟು ಪಾಲು ಹೊಂದಿದೆ. ಪ್ರಸಕ್ತ ಹಣಕಾಸು ಸಾಲಿನಲ್ಲೇ ಸಿಐಎಲ್ ನಲ್ಲಿ ಬಂಡವಾಳ ಹಿಂಪಡೆಯಲಾಗುವುದು ಎಂದು ಕೇಂದ್ರ ಸರ್ಕಾರ ಈ ಹಿಂದೆಯೇ ಪ್ರಕಟಿಸಿದೆ. 
ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ಸರ್ಕಾರಿ ಕಂಪನಿಗಳಲ್ಲಿ ಬಂಡವಾಳ ವಾಪಸಾತಿಯಿಂದ ರು.69,500 ಕೋಟಿ ಕ್ರೋಡೀಕರಿಸುವ ಗುರಿ ಹೊಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.