ತೆರಿಗೆ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸದಿದ್ದರೆ 2 ಲಕ್ಷ ದಂಡ..!
ಹೌದು..ಇನ್ನು ಮುಂದೆ ತೆರಿಗೆ ಅಧಿಕಾರಿಗಳು ಕೇಳುವ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದೇ ಇದ್ದರೆ 2 ಲಕ್ಷದವರೆಗೂ ದಂಡ ಹಾಕುವ ಸಾಧ್ಯತೆ ಇದೆ...

ನವದೆಹಲಿ: ಹೌದು..ಇನ್ನು ಮುಂದೆ ತೆರಿಗೆ ಅಧಿಕಾರಿಗಳು ಕೇಳುವ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದೇ ಇದ್ದರೆ 2 ಲಕ್ಷದವರೆಗೂ ದಂಡ ಹಾಕುವ ಸಾಧ್ಯತೆ ಇದೆ.
ಕಪ್ಪುಹಣ ಕುರಿತಂತೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವ ನೂತನ ತೆರಿಗೆ ಕಾಯ್ದೆಯ ಅನ್ವಯ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ತೆರಿಗೆ ಅಧಿಕಾರಿಗಳು ಕೇಳುವ ಎಲ್ಲ ಪ್ರಶ್ನೆಗಳಿಗೂ ಸಮರ್ಪಕ ಉತ್ತರ ನೀಡಬೇಕು. ಹಾಗೊಂದು ವೇಳೆ ಸರಿಯಾದ ಉತ್ತರ ಅಥವಾ ದಾಖಲೆಗಳನ್ನು ಸಮರ್ಪಿಸದಿದ್ದರೆ 50 ಸಾವಿರ ರುಪಾಯಿಯಿಂದ ಹಿಡಿದು 2 ಲಕ್ಷದ ವರೆಗೂ ಅಧಿಕಾರಿಗಳು ದಂಡ ವಿಧಿಸಬಹುದಾಗಿದೆ.
ಈ ನೂತನ ತಿದ್ದುಪಡಿ ಕಾಯ್ದೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಈಗಾಗಲೇ ಅಂಕಿತ ಹಾಕಿದ್ದು, 2016 ಏಪ್ರಿಲ್ 1 ದೇಶಾದ್ಯಂತ ಜಾರಿಯಾಗಲಿದೆ. ಕಳೆದ ಮೇ 13ರಂದು ಈ ತಿದ್ದುಪಡಿ ಕಾಯ್ದೆಯನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿತ್ತು. ಎರಡು ದಿನಗಳ ಬಳಿಕ ಅಂದರೆ ಮೇ 16 ರಂದು ಲೋಕಸಭೆಯಲ್ಲಿಯೂ ಇದಕ್ಕೆಅಂಗೀಕಾರ ದೊರೆತಿತ್ತು.
ಈ ಕಾಯ್ದೆಯ ಅನ್ವಯ ತೆರಿಗೆ ಅಧಿಕಾರಿಗಳು ಅಥವಾ ತೆರಿಗೆ ಇಲಾಖೆ ತನ್ನ ವ್ಯಾಪ್ತಿಯಲ್ಲಿ ನಡೆಸುವ ದಾಳಿ ಅಥವಾ ಕಾರ್ಯಾಚಾರಣೆ ವೇಳೆ ಆಯಾ ಆಸ್ತಿಗಳಿಗೆ ಸಂಬಧಪಟ್ವವರು ಅಧಿಕಾರಿಗಳಿಗೆ ಸೂಕ್ತ ಉತ್ತರ ಮತ್ತು ಸಮರ್ಪಕ ದಾಖಲೆಗಳನ್ನು ಒದಗಿಸಬೇಕು. ಒಂದು ವೇಳೆ ದಾಖಲೆಗಳನ್ನು ನೀಡುವಲ್ಲಿ ವಿಫಲರಾದರೆ ಅಧಿಕಾರಿಗಳು ಯಾವುದೇ ನೋಟಿಸ್ ನೀಡದಯೇ ಅವರಿಗೆ ದಂಡ ಹಾಕುವ ಅಧಿಕಾರ ಹೊಂದಿರುತ್ತಾರೆ. ದಂಡದ ಮೊತ್ತ 50 ಸಾವಿರದಿಂದ 2 ಲಕ್ಷದವರೆಗೂ ವಿಧಿಸಬಹುದುದಾಗಿದೆ.
ಪ್ರಕರಣದ ಗಂಭೀರತೆಯ ಆಧಾರದ ಮೇಲೆ ದಂಡ ಹಾಕುವ ಅಧಿಕಾರವನ್ನು ಅಧಿಕಾರಿಗಳೇ ಹೊಂದಿರುತ್ತಾರೆ. ಅಲ್ಲದೆ ಅಧಿಕಾರಿಗಳು ನೇರವಾಗಿ ಅಲ್ಲದೇ ನೋಟಿಸ್, ಸಮನ್ಸ್, ಅಪ್ಪಣೆ, ಕೊರಿಯರ್ ಅಥವಾ ಇನ್ನಾವುದೇ ಸಂಪರ್ಕ ಸಮೂಹದ ಮೂಲಕ ದಾಖಲೆ ಅಥವಾ ಪ್ರಶ್ನೆಗಳನ್ನು ಕೇಳಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


