ದೇಶಾದ್ಯಂತ ಮ್ಯಾಗಿ ನೂಡಲ್ಸ್ ಗೆ ನಿಷೇಧ ಸಾಧ್ಯತೆ..?
ಸೀಸ ಮತ್ತಿತರ ಅಪಾಯಕಾರಿ ರಾಸಾಯನಿಕ ಅಂಶಗಳನ್ನು ಒಳಗೊಂಡಿರುವ ಕುರಿತು ಇತ್ತೀಚೆಗೆ ದೇಶಾದ್ಯಂತ್ಯ ತೀವ್ರ ಸುದ್ದಿಗೆ ಗ್ರಾಸವಾಗಿದ್ದ ನೆಸ್ಟೆ ಸಂಸ್ಥೆಯ ಜನಪ್ರಿಯ ಫಾಸ್ಟ್ ಫುಡ್ ಮ್ಯಾಗಿ ನ್ಯೂಡಲ್ಸ್..

ನವದೆಹಲಿ: ಸೀಸ ಮತ್ತಿತರ ಅಪಾಯಕಾರಿ ರಾಸಾಯನಿಕ ಅಂಶಗಳನ್ನು ಒಳಗೊಂಡಿರುವ ಕುರಿತು ಇತ್ತೀಚೆಗೆ ದೇಶಾದ್ಯಂತ್ಯ ತೀವ್ರ ಸುದ್ದಿಗೆ ಗ್ರಾಸವಾಗಿದ್ದ ನೆಸ್ಟೆ ಸಂಸ್ಥೆಯ ಜನಪ್ರಿಯ ಫಾಸ್ಟ್ ಫುಡ್ ಮ್ಯಾಗಿ ನ್ಯೂಡಲ್ಸ್ ಮೇಲೆ ದೇಶಾದ್ಯಂತ ನಿಷೇಧ ಹೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನೆಸ್ಲೆ ಸಂಸ್ಥೆಯ ಈ ಉಪಾಹಾರದ ವಿರುದ್ಧ ದೇಶದ ವಿವಿಧ ರಾಜ್ಯಗಳಲ್ಲಿ ಆರೋಪಗಳು ಕೇಳಿಬಂದಿರುನವ ಹಿನ್ನಲೆಯಲ್ಲಿ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ (Food Safety and Standards Authority of India-FSSAI) ದೇಶದ ವಿವಿಧೆಡೆಗಳಿಂದ ಮ್ಯಾಗಿ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಗುರಿಪಡಿಸಲಿದೆ ಎಂದು ತಿಳಿದುಬಂದಿದೆ. ಈ ಪರೀಕ್ಷೆಯಲ್ಲಿ ರಾಸಾಯನಿಕ ಅಂಶಗಳು ಇರುವುದು ದೃಢಪಟ್ಟರೆ ಮ್ಯಾಗಿ ನೂಡಲ್ಸ್ ಗೆ ದೇಶಾದ್ಯಂತ ನಿಷೇಧ ಹೇರುವ ಸಾಧ್ಯತೆಯಿದೆ. ಈಗಾಗಲೇ ಉತ್ತರ ಪ್ರದೇಶ ರಾಜ್ಯದಲ್ಲಿ ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ಗೆ ನಿಷೇಧ ಹೇರಲಾಗಿದೆ.
ಉತ್ತರ ಪ್ರದೇಶದ ಕೆಲವು ಪ್ರದೇಶಗಳಿಂದ ಸಂಗ್ರಹಿಸಿದ ಮ್ಯಾಗಿ ನೂಡಲ್ಸ್ ಮಾದರಿಯಲ್ಲಿ ಸೀಸ ಮತ್ತು ಮೊನೊಸೋಡಿಯಂ ಗುಟ್ಲಮೇಟ್ ಎಂಬ ರಾಸಾಯನಿಕ ಪದಾರ್ಥಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿರುವುದು ಪತ್ತೆಯಾಗಿತ್ತು. ಈ ಎರಡು ರಾಸಾಯನಿಕಗಳಿಂದ ಕ್ಯಾನ್ಸರ್ ರೋಗ ಬರುವ ಸಾಧ್ಯತೆಯಿದೆ ಎಂದು ವೈದ್ಯಕೀಯ ವರದಿ ನೀಡಲಾಗಿತ್ತು. ಆಹಾರದಲ್ಲಿ ದಶಲಕ್ಷಕ್ಕೆ 0.01 ಭಾಗ ಸೀಸದ ಅಂಶ ಸೇರಿಸಲು ಅನುಮತಿಯಿದೆ. ಆದರೆ ಮ್ಯಾಗಿಯಲ್ಲಿ ಶೇ. 17 ರಷ್ಟು ಸೀಸವಿರುವುದು ಉತ್ತರ ಪ್ರದೇಶದ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಿಂದ ಪತ್ತೆಯಾಗಿತ್ತು. ಅಂತೆಯೇ ಮೊನಸೋಡಿಯಂ ಗುಟ್ಲಮೇಟ್ ಅಂಶವೂ ಅಪಾಯದ ಮಟ್ಟಕ್ಕಿಂತ ಹೆಚ್ಚಿದೆ ಎಂದು ಹೇಳಲಾಗಿತ್ತು.
ಒಟ್ಟಾರೆ ಪುಟ್ಟಮಕ್ಕಳನ್ನು ಗುರಿಯಾಗಿಸಿಕೊಂಡು ನೆಸ್ಲೆ ಸಂಸ್ಥೆ ಹೊರತಂದಿದ್ದ ಮ್ಯೂಗಿ ನ್ಯೂಡಲ್ಸ್ ನ ಭವಿಷ್ಯ ಇದೀಗ ಡೋಲಾಯಮಾನವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


