ವಾಣಿಜ್ಯ

ಯೂನಿವರ್ಸಲ್ ನ್ಯೂಟ್ರೀಷಿಯಸ್ ಪ್ರಾಡಕ್ಟ್ಸ್ ಪ್ರೈ. ಲಿ. ಬ್ರ್ಯಾಂಡ್ ಲೋಗೋ ಬದಲಾವಣೆ

ಎನಜರ್ಜಿ ಡ್ರಿಂಕ್ (ಶಕ್ತಿ ಪಾನೀಯ) ತಯಾರಿಕಾ ಕಂಪನಿ, ಯೂನಿವರ್ಸಲ್ ನ್ಯೂಟ್ರೀಷಿಯಸ್ ಪ್ರಾಡಕ್ಟ್ಸ್ ಪ್ರೈ. ಲಿ., ತನ್ನ ಬ್ರ್ಯಾಂಡ್ ಎಕ್ಸ್ಟ್ರಾ ಪವರ್...

ಯೂನಿವರ್ಸಲ್ ನ್ಯೂಟ್ರೀಷಿಯಸ್ ಪ್ರಾಡಕ್ಟ್ಸ್ ಪ್ರೈ. ಲಿ. ಬ್ರ್ಯಾಂಡ್ ಲೋಗೋ ಬದಲಾವಣೆ
ಯೂನಿವರ್ಸಲ್ ನ್ಯೂಟ್ರೀಷಿಯಸ್ ಪ್ರಾಡಕ್ಟ್ಸ್ಎಕ್ಸ್ಟ್ರಾ ಪವರ್ ಪ್ರೀಮಿಯಂ ಎನರ್ಜಿ ಡ್ರಿಂಕ್ನ
Published On :

ಬೆಂಗಳೂರು: ಎನಜರ್ಜಿ ಡ್ರಿಂಕ್ (ಶಕ್ತಿ ಪಾನೀಯ) ತಯಾರಿಕಾ ಕಂಪನಿ, ಯೂನಿವರ್ಸಲ್ ನ್ಯೂಟ್ರೀಷಿಯಸ್ ಪ್ರಾಡಕ್ಟ್ಸ್ ಪ್ರೈ. ಲಿ., ತನ್ನ ಬ್ರ್ಯಾಂಡ್ ಎಕ್ಸ್ಟ್ರಾ ಪವರ್ ಪ್ರೀಮಿಯಂ ಎನರ್ಜಿ ಡ್ರಿಂಕ್ನ ಕ್ಯಾನ್ ವಿನ್ಯಾಸ ಹಾಗೂ ಲೋಗೊಗಳನ್ನು ಬದಲಾಯಿಸಲು ನಿರ್ಧರಿಸಿದೆ.

ಆಸ್ಟ್ರಿಯಾದ ರೆಡ್ ಬುಲ್ ಎಜಿ ಕಂಪನಿ, ಯೂನಿವರ್ಸಲ್ ನ್ಯೂಟ್ರಿಷಿಯಸ್ ಪ್ರಾಡಕ್ಟ್ಸ್ ಪ್ರೈ. ಲಿ. ವಿರುದ್ಧ ದೆಹಲಿ ಉಚ್ಛ ನ್ಯಾಯಾಲಯದಲ್ಲಿ ಲೋಗೊ ಹಾಗೂ ಕ್ಯಾನ್ ವಿನ್ಯಾಸಕ್ಕೆ ಸಂಬಂಧಿಸಿದಂತೆ ತನ್ನ ಉತ್ಪನ್ನದ ಜೊತೆ ಭಾರತದ ಬ್ರ್ಯಾಂಡ್ ಎಕ್ಸ್ಟ್ರಾ ಪವರ್ ಸಾಮ್ಯತೆಗಳನ್ನು ಹೊಂದಿರುವ ಬಗ್ಗೆ ಪ್ರಕರಣವನ್ನು ದಾಖಲಿಸಿತ್ತು. ಹಾಗಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಮಾನ್ಯ ಉಚ್ಛ ನ್ಯಾಯಾಲಯವು, ಹಾರುತ್ತಿರುವ ಘೇಂಡಾಮೃಗ ಅಥವಾ ಸೂರ್ಯನ ಉಪಕರಣ ಅಥವಾ ನೀಲಿ ಹಾಗೂ ಸಿಲ್ವರ್ ಬಣ್ಣದ ಟ್ರಾಪೆಝಾಯ್ಡ್ಗಳಿರುವ ಎಕ್ಸ್ಟ್ರಾ ಪವರ್ ಎನರ್ಜಿ ಡ್ರಿಂಕ್ ಉತ್ಪನ್ನವನ್ನು, ತನ್ನದೇ ಆದ ಹೊಸ ಲೋಗೊ ವಿನ್ಯಾಸ ಮಾಡುವವರೆಗೂ ನಿಲ್ಲಿಸುವಂತೆ ಸೂಚಿಸಿತ್ತು. ಅದ್ದರಿಂದ ಕಂಪನಿಯು ತನ್ನ ಉತ್ಪನ್ನದ ಲೋಗೊ ಹಾಗೂ ಕ್ಯಾನ್ ವಿನ್ಯಾಸವನ್ನು ಬದಲಾಯಿಸಲು ನಿರ್ಧರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.