ನೂಡಲ್ಸ್ ಹಿಂಪಡೆಯಲು ಆದೇಶ ನೀಡಿಲ್ಲ
ಮ್ಯಾಗಿ ನೂಡಲ್ಸ್ ನಲ್ಲಿ ಸೀಸದ ಅಂಶ ಹೆಚ್ಚಾಗಿ ಎಂಬ ಕಾರಣಕ್ಕಾಗಿ ಮಾರುಕಟ್ಟೆಯಿಂದ ಅದನ್ನು ಹಿಂಪಡೆಯಲು ಆಹಾರ ಇಲಾಖೆ ಹೊರಡಿಸಿದ ಆದೇಶವನ್ನು ನೆಸ್ಲೆ ಪ್ರಶ್ನಿಸಿದೆ...

ಮುಂಬೈ: ಮ್ಯಾಗಿ ನೂಡಲ್ಸ್ ನಲ್ಲಿ ಸೀಸದ ಅಂಶ ಹೆಚ್ಚಾಗಿ ಎಂಬ ಕಾರಣಕ್ಕಾಗಿ ಮಾರುಕಟ್ಟೆಯಿಂದ ಅದನ್ನು ಹಿಂಪಡೆಯಲು ಆಹಾರ ಇಲಾಖೆ ಹೊರಡಿಸಿದ ಆದೇಶವನ್ನು ನೆಸ್ಲೆ ಪ್ರಶ್ನಿಸಿದೆ.
ಈ ಬಗ್ಗೆ ಮುಂಬೈನಲ್ಲಿ ಹೇಳಿಕೆ ನೀಡಿದ ಸಂಸ್ಥೆ ``ಉತ್ತರ ಪ್ರದೇಶದ ಆಹಾರ ಭದ್ರತೆ ಮತ್ತು ಔಷಧ ಇಲಾಖೆ ಅಧಿಕಾರಿಗಳ ಆದೇಶವನ್ನು ನಾವು ಪ್ರಶ್ನಿಸುತ್ತೇವೆ'' ಎಂದು ಹೇಳಿಕೆ ನೀಡಿದೆ.
ಮತ್ತೊಂದು ಬೆಳವಣಿಗೆಯಲ್ಲಿ ಮಾರ್ಚ್ 2014 ಬ್ಯಾಚ್ ನ ಮ್ಯಾಗಿ ನೂಡಲ್ಸ್ ಗಳಲ್ಲಿ ಅಪಾಯಕಾರಿ ಪ್ರಮಾಣದ ಸೀಸ ಮತ್ತು ಮಾನೋಸೋಡಿಯಂ ಗ್ಲುಟಮೇಟ್ ಪತ್ತೆಯಾಗಿದ್ದು, ಆ ಬ್ಯಾಚ್‍ನ ಅಷ್ಟೂ ಪ್ಯಾಕೆಟ್‍ಗಳನ್ನು ಹಿಂಪಡೆಯಲು ಆದೇಶವನ್ನು ಆಹಾರ ನಿರೀಕ್ಷಕರು ನಿರಾಕರಿಸಿದ್ದಾರೆ.
``ಸದ್ಯಕ್ಕೆ ನಾವು ಹಿಂಪಡೆಯುವ ಆದೇಶ ನೀಡಿಲ್ಲ. ಉತ್ತರ ಪ್ರದೇಶ ಆಹಾರ ಭದ್ರತೆ ಮತ್ತು ಔಷಧ ನಿಯಂತ್ರಣ ಇಲಾಖೆಯಿಂದ ಈ ಬಗ್ಗೆ ವಿವರಣೆ ಕೇಳಿದ್ದು, ಅದನ್ನು ಪರಿಶೀಲಿಸಿದ ನಂತರ ದೇಶಾದ್ಯಂತ ಆದೇಶ ನೀಡುವ ಬಗ್ಗೆ ಯೋಚಿಸಲಾಗುವುದು'' ಎಂದು ಹಿರಿಯ ಅಧಿಕಾರಿಗಳೊಬ್ಬರು ತಿಳಿಸಿದ್ದಾರೆ. ನೆಸ್ಲೆಯ ಬಾತ್ಮಿದಾರ ಕೂಡ ತಾವು ಪ್ಯಾಕೆಟ್‍ಗಳನ್ನು ಹಿಂಪಡೆಯುವ ಬಗ್ಗೆ ಯಾವುದೇ ಆದೇಶ ಪಡೆದಿಲ್ಲವೆಂದು ದೃಢಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


