ಕೇಂದ್ರ ಸರ್ಕಾರದ ನಿರೀಕ್ಷೆಗಳು ಅವಾಸ್ತವಿಕ: ರಾಜನ್
ಕಳೆದ ವರ್ಷ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ನಿರೀಕ್ಷೆಗಳು ‘ಬಹುಶಃ ಅವಾಸ್ತವಿಕ’ ಎನಿಸಿದ್ದವು.

ನ್ಯೂಯಾರ್ಕ್: ಕಳೆದ ವರ್ಷ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ನಿರೀಕ್ಷೆಗಳು ‘ಬಹುಶಃ ಅವಾಸ್ತವಿಕ’ ಎನಿಸಿದ್ದವು. ಆದರೆ ಸರ್ಕಾರ ಹೂಡಿಕೆಯ ವಾತಾವರಣ ಸೃಷ್ಟಿಸಲು ಕ್ರಮಕೈಗೊಂಡಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್ ಅವರು ಹೇಳಿದ್ದಾರೆ.
'ನ್ಯೂಯಾರ್ಕ್‌ನ ಎಕನಾಮಿಕ್ ಕ್ಲಬ್' ಉದ್ದೇಶಿಸಿ ಮಾತನಾಡಿದ ಬಳಿಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಜನ್, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಹೊಸ ಸರ್ಕಾರ ಭಾರಿ ನಿರೀಕ್ಷೆಗಳನ್ನು ಹೊಂದಿತ್ತು. ಆದರೆ ಯಾವುದೇ ಸರ್ಕಾರಕ್ಕೆ ಆ ಮಟ್ಟಿಗಿನ ನಿರೀಕ್ಷೆಗಳು ಪೂರೈಸಲು ಸಾಧ್ಯವಿಲ್ಲ ಎಂದು ತಮಗನಿಸಿತ್ತು ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಜನ ಹೇಗೆ ಭಾವಿಸಿದ್ದರು ಎಂದರೆ, ಮಾರುಕಟ್ಟೆ ವಿರೋಧಿ ಶಕ್ತಿಗಳ ಸಂಹಾರಕ್ಕೆ ‘ಬಿಳಿ ಕುದುರೆ ಸವಾರಿ ಮಾಡಿ ಬರುವ ರೊನಾಲ್ಡ್ ರೇಗನ್’ ಅವರಂತೆ ಮನಸ್ಸಿನಲ್ಲಿ ಚಿತ್ರಿಸಿಕೊಂಡಿದ್ದರು. ಅಂಥ ಹೋಲಿಕೆ ‘ಪ್ರಾಯಶಃ ಸಮಂಜಸವಲ್ಲ’ ಎಂದು ರಾಜನ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಹೂಡಿಕೆ ವಾತಾವರಣ ನಿರ್ಮಿಸಲು ಬೇಕಾದ ಕ್ರಮಗಳನ್ನು ಕೈಗೊಂಡಿದೆ. ಅದು ನನಗೆ ಮುಖ್ಯ ಎನಿಸುತ್ತದೆ. ಸರ್ಕಾರ ಹೂಡಿಕೆದಾರರ ಆತಂಕಗಳಿಗೆ ಸ್ಪಂದಿಸುತ್ತಿದೆ ಮತ್ತು ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತಿದೆ ಎಂದ ರಾಜನ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


