ವಾಣಿಜ್ಯ

ವಿಧೇಯಕ ವಿಳಂಬಕ್ಕೆ ರು. 2 ಲಕ್ಷ ಕೋಟಿ ನಷ್ಟ

ಸುಧಾರಣಾ ವಿಧೇಯಕಗಳು ಮತ್ತೆ ಷೇರುಪೇಟೆಗೆ ಆಘಾತ ನೀಡಿದೆ. ವಿಧೇಯಕಗಳ ಅಂಗೀಕಾರದಲ್ಲಿ ಆಗುತ್ತಿರುವ ವಿಳಂಬವು...

ವಿಧೇಯಕ ವಿಳಂಬಕ್ಕೆ  ರು. 2 ಲಕ್ಷ ಕೋಟಿ ನಷ್ಟ
ಷೇರುಪೇಟೆ
Published On :

ಮುಂಬೈ: ಸುಧಾರಣಾ ವಿಧೇಯಕಗಳು ಮತ್ತೆ ಷೇರುಪೇಟೆಗೆ ಆಘಾತ ನೀಡಿದೆ. ವಿಧೇಯಕಗಳ ಅಂಗೀಕಾರದಲ್ಲಿ ಆಗುತ್ತಿರುವ ವಿಳಂಬವು ಹೂಡಿಕೆದಾರರ ನಿದ್ದೆಗೆಡಿಸಿದೆ. ಪರಿಣಾಮ ಹೂಡಿಕೆದಾರರು ಷೇರುಗಳ ಭಾರಿ ಮಾರಾಟದಲ್ಲಿ ತೊಡಗಿದ್ದಾರೆ. ಹೀಗಾಗಿ, ಕಳೆದ ಎರಡು ದಿನಗಳಲ್ಲಿ ಏರಿಕೆಯ ಹಾದಿಯಲ್ಲಿ ಸಾಗಿದ್ದ ಷೇರುಪೇಟೆ ಮಂಗಳವಾರ ನೆಲಕಚ್ಚಿದ್ದು,
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬರೋಬ್ಬರಿ 630 ಅಂಕಗಳ ಕುಸಿತ ದಾಖಲಿಸಿ ದಿನಾಂತ್ಯಕ್ಕೆ 26,877ರಲ್ಲಿ ಕೊನೆಗೊಂಡಿತು. ನಿಫ್ಟಿ ಕೂಡ 198 ಅಂಕ ಕುಸಿದು, 8,126ರಲ್ಲಿ ವಹಿವಾಟು ಅಂತ್ಯಗೊಳಿಸಿತು.
ಈ ಬೆಳವಣಿಗೆಯಿಂದ ಹೂಡಿಕೆದಾರರಿಗೆ ಬರೋಬ್ಬರಿ ರು. 2 ಲಕ್ಷ ಕೋಟಿ ನಷ್ಟವಾಗಿದೆ.
ಕನಿಷ್ಠ ಪರ್ಯಾಯ ತೆರಿಗೆ ಸಮಸ್ಯೆಯನ್ನು ಪರಿಹರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ್ದರೂ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರು ಖರೀದಿಯಲ್ಲಿ ನಿರಾಸಕ್ತಿ ವಹಿಸಿರುವುದೂ ಸೆನ್ಸೆಕ್ಸ್ ಈ ಪರಿ ಕುಸಿಯಲು ಕಾರಣ ಎಂದು ಹೇಳಲಾಗಿದೆ. ಚಿಲ್ಲರೆ ಹಣದುಬ್ಬರ 4 ತಿಂಗಳಲ್ಲೇ ಕನಿಷ್ಠ ಏಪ್ರಿಲ್ ತಿಂಗಳಲ್ಲಿ ಗ್ರಾಹಕ ದರ ಸೂಚ್ಯಂಕವು ಶೇ.4.87ಕ್ಕೆ ತಲುಪಿದ್ದು, ಇದು 4 ತಿಂಗಳಲ್ಲೇ ಕನಿಷ್ಠ ಪ್ರಮಾಣ ಎಂದು ಸರ್ಕಾರ ಮಾಹಿತಿ ನೀಡಿದೆ. ಆಹಾರ ವಸ್ತುಗಳ ವಾರ್ಷಿಕ ದರ ಹೆಚ್ಚಳವು ನಿಧಾನಗತಿಯಲ್ಲಿ ಸಾಗಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಮಾರ್ಚ್‍ನಲ್ಲಿ ಶೇ.6.14 ಆಗಿದ್ದ ಗ್ರಾಹಕ ಆಹಾರ ದರ ಹಣದುಬ್ಬರವು ಏಪ್ರಿಲ್‍ನಲ್ಲಿ ಶೇ.5.11 ಆಗಿತ್ತು.


ಪಾತಾಳಕ್ಕಿಳಿಯಲು ಕಾರಣವೇನು?

 ಜಿಎಸ್‍ಟಿ, ಭೂಸ್ವಾಧೀನ ಸೇರಿದಂತೆ ಹಲವು ಸುಧಾರಣಾ ವಿಧೇಯಕಗಳು ಅಂಗೀಕಾರವಾಗದೆ ಬಾಕಿ ಉಳಿದಿರುವುದು.

ಏಷ್ಯಾ ಮಾರುಕಟ್ಟೆಯಲ್ಲಿನ ಸ್ಥಿತಿ

  •  ಡಾಲರ್ ಎದುರು ರುಪಾಯಿ ಮೌಲ್ಯ ಮತ್ತೆ ರು. 64.27ಕ್ಕೆ ತಲುಪಿರುವುದು.
  • ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳ ಭಾರಿ ಮಾರಾಟದಲ್ಲಿ ತೊಡಗಿರುವುದು
  •  ಅಮೆರಿಕದ ಉದ್ಯೋಗ ಪ್ರಗತಿ ದರ ಹೆಚ್ಚಿರುವುದರಿಂದ ಅಲ್ಲಿನ
  • ಕೇಂದ್ರ ಬ್ಯಾಂಕ್ ಬಡ್ಡಿ ದರ ಏರಿಕೆ ಮಾಡಬಹುದು. ಆಗ ಭಾರತದಂತಹ ಮಾರುಕಟ್ಟೆಗಳಿಂದ ಬಂಡ ವಾಳದ ಹರಿವು ಅಮೆರಿಕದತ್ತ ಚಲಿಸುತ್ತದೆಂಬ ಭೀತಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.