ವಾಣಿಜ್ಯ

ಸ್ನ್ಯಾಪ್‍ಡೀಲ್‍ ವಿರುದ್ಧ ಎಫ್ ಐಆರ್ ದಾಖಲು

ಜನಪ್ರಿಯ ಆನ್‍ಲೈನ್ ಶಾಪಿಂಗ್ ತಾಣ ಸ್ನ್ಯಾಪ್ ಡೀಲ್ ಸಂಕಷ್ಟಕ್ಕೆ ಸಿಲುಕಿದೆ. ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ...

ಸ್ನ್ಯಾಪ್‍ಡೀಲ್‍ ವಿರುದ್ಧ ಎಫ್ ಐಆರ್ ದಾಖಲು
ಸಂಗ್ರಹ ಚಿತ್ರ
Published On :

ಮುಂಬೈ: ಜನಪ್ರಿಯ ಆನ್‍ಲೈನ್ ಶಾಪಿಂಗ್ ತಾಣ ಸ್ನ್ಯಾಪ್ ಡೀಲ್ ಸಂಕಷ್ಟಕ್ಕೆ ಸಿಲುಕಿದೆ.
ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (ಎಫ್ ಡಿಎ) ಸ್ನ್ಯಾಪ್‍ಡೀಲ್ ವಿರುದ್ಧ ಮೊಕದ್ದಮೆ ಹೂಡಿದೆ.

ಆನ್‍ಲೈನ್‍ನಲ್ಲಿ ಔಷಧಗಳ ಅಕ್ರಮ ಮಾರಾಟದ ಬಗ್ಗೆ ವೆಬ್‍ಸೈಟ್‍ನ ಸಿಇಓ ಕುನಾಲ್ ಬೆಹ್ಲ್ ಹಾಗೂ ಕಂಪನಿ ನಿರ್ದೇಶಕರ ವಿರುದ್ಧ ದೂರು ಸಲ್ಲಿಸಲಾಗಿದ್ದು, ಎಫ್ ಐಆರ್ ದಾಖಲಿಸಲಾಗಿದೆ ಎಂದು ಎಫ್ ಡಿಎ ಕಮಿಷನರ್ ಹರ್ಷದೀಪ್ ಕಾಂಬ್ಳೆ ತಿಳಿಸಿದ್ದಾರೆ.

ಏಪ್ರಿಲ್ ನಲ್ಲಿ ಎಫ್ ಡಿಎ ಸ್ನ್ಯಾಪ್‍ಡೀಲ್ ಮೇಲೆ ದಾಳಿ ನಡೆಸಿ ಡ್ರಗ್ಸ್ ವಶಪಡಿಸಿ ಕೊಳ್ಳಲು ಮುಂದಾದಾಗ, ಪಟ್ಟಿಯಿಂದ ಎಲ್ಲ ಔಷಧಗಳನ್ನು ತೆಗೆದುಹಾಕುವುದಾಗಿಯೂ, ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿಯೂ ಕಂಪನಿ ಭರವಸೆ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.