ಟ್ವಿಟ್ಟರ್ ಸಿಇಒ ಭೇಟಿ ಮಾಡಿದ ಮೋದಿ; ತಮ್ಮ ಯೋಜನೆಗಳನ್ನು ಪ್ರಚಾರ ಮಾಡಲು ಮನವಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಟ್ವಿಟ್ಟರ್ ಸಿಇಒ ಡಿಕ್ ಕಸ್ಟಾಲೊ ಅವರನ್ನು ಭೇಟಿ ಮಾಡಿ ಮೈಕ್ರೋಬ್ಲಾಗಿಂಗ್ ತಾಣದ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಟ್ವಿಟ್ಟರ್ ಸಿಇಒ ಡಿಕ್ ಕಸ್ಟಾಲೊ ಅವರನ್ನು ಭೇಟಿ ಮಾಡಿ ಮೈಕ್ರೋಬ್ಲಾಗಿಂಗ್ ತಾಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡದ್ದಲ್ಲದೆ, ಟ್ವಿಟ್ಟರ್ ಅಂತರ್ಜಾಲದ ಮೂಲಕ ತಮ್ಮ ನೆಚ್ಚಿನ ಯೋಜನೆಗಳಾದ 'ಸ್ವಚ್ಛ ಭಾರತ ಅಭಿಯಾನ', 'ಭೇಟಿ ಬಚಾವೋ, ಭೇಟಿ ಪಡಾವೊ' ಮತ್ತು ಭಾರತದ ಪ್ರವಾಸೋದ್ಯಮವನ್ನು ಪ್ರಚಾರ ಮಾಡಲು ಕೋರಿದ್ದಾರೆ.
"ಟ್ವಿಟ್ಟರ್ ತನ್ನ ಜಾಲತಾಣದ ಮೂಲಕ ಪ್ರಧಾನ ಮಂತ್ರಿಯವರ ಯೋಜನೆಗಳಾದ 'ಸ್ವಚ್ಛ ಭಾರತ ಅಭಿಯಾನ', 'ಭೇಟಿ ಬಚಾವೋ, ಭೇಟಿ ಪಡಾವೊ' ಇವುಗಳಿಗೆ ವೇದಿಕೆ ನೀಡುವುದಲ್ಲದೆ, ಪ್ರಚಾರ ಬೆಂಬಲ ನೀಡುವ ಬಗ್ಗೆ ಮಾತುಕತೆ ನಡೆಸಿದರು" ಎಂದು ಪ್ರಧಾನಮಂತ್ರಿ ಕಾರ್ಯಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
"ಭಾರತದ ಪ್ರವಾಸೋದ್ಯಮವನ್ನು ಪ್ರಪಂಚದಾದ್ಯಂತ ಪ್ರಚಾರ ಮಾಡಲು ಕೂಡ ಪ್ರಧಾನಿ ಟ್ವಿಟ್ಟರ್ ಜೊತೆ ಮಾತುಕತೆ ನಡೆಸಿದರು."
ಮೋದಿ ಅಂತರಾಷ್ಟ್ರೀಯ ಯೋಗ ದಿನದ ಬಗ್ಗೆಯೂ ಚರ್ಚಿಸಿ, ಜಾಗತಿಕವಾಗಿ ಇದರ ಬಗ್ಗೆ ಹೇಗೆ ಹೆಚ್ಚು ಪ್ರಚುರಪಡಿಸಬಹುದು ಎಂದು ಕೂಡ ಚರ್ಚಿಸಿದರು ಎಂದು ಹೇಳಿಕೆ ತಿಳಿಸಿದೆ.
ಭಾರತದ ಭಾಷಾ ವೈವಿಧ್ಯತೆಯನ್ನು ಟ್ವಿಟ್ಟರ್ ಪರಿಗಣಿಸಿ ವಿವಿಧ ಭಾಷೆಗಳಲ್ಲಿ ತನ್ನ ಸೇವೆಯನ್ನು ಟ್ವಿಟ್ಟರ್ ನೀಡಬಹುದು ಎಂದು ಸಲಹೆ ನೀಡಿದ್ದರೆ ಪ್ರಧಾನಿ.
ಟ್ವಿಟ್ಟರ್ ತ್ವರಿತವಾಗಿ ಭಾರತದಲ್ಲಿ ಏಳಿಗೆ ಕಾಣುತ್ತಿದೆ ಎಂದು ಕಾಸ್ಟಾಲೊ ತಿಳಿಸಿದ್ದಾರೆ. ಟ್ವಿಟ್ಟರ್ ನ ಕೆಲವು ಸೇವೆಗಳು ಹೇಗೆ ಜನರ ಮಧ್ಯೆ ಸಂಪರ್ಕ ಕ್ರಾಂತಿಯನ್ನು ಉಂಟು ಮಾಡಿದೆ ಎಂಬ ವಿಷಯವನ್ನು ಅವರು ಪ್ರಧಾನಿಯೊಂದಿಗೆ ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


