ಐಟಿ ರಿಟನ್ರ್ಸ್ ಇ-ಸಲ್ಲಿಕೆ ಶೀಘ್ರ ಆರಂಭ
ಪ್ರಸಕ್ತ ಹಣಕಾಸು ವರ್ಷದಲ್ಲಿ ಆನ್‍ಲೈನ್ ಮೂಲಕ ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಸಲು ಸಿದ್ದರಾಗಿರುವ ತೆರಿಗೆದಾರರು ಇನ್ನಷ್ಟು ದಿನ ಕಾಯಬೇಕಾಗಿದೆ...

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಆನ್‍ಲೈನ್ ಮೂಲಕ ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಸಲು ಸಿದ್ದರಾಗಿರುವ ತೆರಿಗೆದಾರರು ಇನ್ನಷ್ಟು ದಿನ ಕಾಯಬೇಕಾಗಿದೆ. ಹೊಸದಾಗಿ ಅಧಿಸೂಚನೆ ಹೊರಡಿಸಿರುವ ಐಟಿಆರ್-2 ಮತ್ತು ಐಟಿಆರ್-2ಎ ನಮೂನೆಗಳನ್ನು ತನ್ನ ಅಧಿಕೃತ ವೆಬ್ ಸೈಟ್‍ನಲ್ಲಿ ಬಿಡುಗಡೆ ಮಾಡುವ ಪ್ರಕ್ರಿಯೆಯಲ್ಲಿ ತೆರಿಗೆ ಇಲಾಖೆ ನಿರತವಾಗಿದೆ.
ಇತರೆ ಎರಡು ನಮೂನೆಗಳಾದ ಐಟಿಆರ್-1 ಮತ್ತು ಐಟಿಆರ್ -4ಎಸ್ ಈಗಾಗಲೆ ಸಿದ್ಧವಾಗಿದ್ದು ಇ-ಫೈಲಿಂಗ್ ವೆಬ್‍ಸೈಟ್ http://incometaxindiaefiling.gov.in ನಲ್ಲಿ ಸಲ್ಲಿಸಬಹುದಾಗಿದೆ.
ಈ ವೆಬ್‍ಸೈಟ್ ಬಳಕೆ ಮಾಡಲು ಅಗತ್ಯವಾದ ಲಿಂಕ್‍ಗಳನ್ನು ಶೀಘ್ರದಲ್ಲಿ ಕಲ್ಪಿಸಲಾಗುವುದು.
ಸರಳಗೊ ಳಿಸಿದ ಮೂರು ಪುಟ ಸೇರಿದಂತೆ ಹೊಸ ಐಟಿಆರ್ ನಮೂನೆಗಳನ್ನು ಈ ವಾರದ
ಆರಂಭದಲ್ಲಿ ಬಿಡುಗಡೆ ಮಾಡಲಾ ಯಿತು. ಐಟಿಆರ್ ಇ-ಫೈಲಿಂಗ್‍ಗೆ ಆಗಸ್ಟ್ 31ರವರೆಗೆ ಅವಕಾಶ ನೀಡಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


