ತೆರಿಗೆಗಳ್ಳರಿಗೆ ಜೈಲಿನ ಭಯ ಹುಟ್ಟಿಸಿ: ಸಿಬಿಡಿಟಿ
ತೆರಿಗೆಗಳ್ಳರ ಕಚೇರಿ, ನಿವಾಸ ಗಳ ಮೇಲೆ ದಾಳಿ ನಡೆಸಿದರಷ್ಟೇ ಸಾಲದು.ಅವರಲ್ಲಿ ಜೈಲಿನ ಭಯ ಹುಟ್ಟಿಸಬೇಕು. ತ್ವರಿತ ವಿಚಾರಣೆ...

ನವದೆಹಲಿ: ``ತೆರಿಗೆಗಳ್ಳರ ಕಚೇರಿ, ನಿವಾಸ ಗಳ ಮೇಲೆ ದಾಳಿ ನಡೆಸಿದರಷ್ಟೇ ಸಾಲದು.ಅವರಲ್ಲಿ ಜೈಲಿನ ಭಯ ಹುಟ್ಟಿಸಬೇಕು. ತ್ವರಿತ ವಿಚಾರಣೆ, ಶಿಕ್ಷೆ, ದಂಡ ವಿಧಿಸುವ ಮೂಲಕ ಅವರಿಗೆ ಸಾಮಾಜಿಕವಾಗಿ ಕೆಟ್ಟ ಹೆಸರು ಬರುವಂತೆ ಮಾಡಬೇಕು''. ಇದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ)ಯು ತನ್ನ ಅಧಿಕಾರಿಗಳಿಗೆ ನೀಡಿದ ಖಡಕ್ ಸಲಹೆ. ತೆರಿಗೆಗಳ್ಳರ ಕಚೇರಿಗಳ ಮೇಲೆ ದಾಳಿ ನಡೆಸಿದರೆ ಸಾಕು ಎಂಬ ನಿಮ್ಮ ಮನಃಸ್ಥಿತಿಯನ್ನು ಮೊದಲು ಬದಲಾಯಿಸಿ. ಅದರ ಬದಲಾಗಿ ತ್ವರಿತ ವಿಚಾರಣೆ ನಡೆಸಿ ಕಳ್ಳರಿಗೆ ಶಿಕ್ಷೆಯಾಗುವಂತೆ ಮಾಡುವ ಮೂಲಕ, ಅವರು ಕೆಂಪು ಗೆರೆಯನ್ನು ದಾಟಲು ಹೆದರುವಂತೆ ಮಾಡ ಬೇಕು. ಷೆ ಶಿಕ್ಮತ್ತು ಸಮಾಜದಲ್ಲಿ ಕೆಟ್ಟ ಹೆಸರು ಬರುವ ಭಯ ಮೂಡಿದರೆ ಯಾರೂ ತೆರಿಗೆ ಕಳ್ಳತನ ಮಾಡುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಮುಂದು ವರಿಯಿರಿ ಎಂದೂ ಸಿಬಿಡಿಟಿ ತಿಳಿಸಿದೆ. ಇದೇ ವೇಳೆ, ಪ್ರತಿ ತಿಂಗಳು ಕನಿಷ್ಠ 25 ಲಕ್ಷ ಹೊಸ ತೆರಿಗೆದಾರರನ್ನು ಸೇರಿಸುತ್ತಾ ಹೋಗಿ ಎಂದೂ ತನ್ನ ಸಿಬ್ಬಂದಿಗೆ ಸಿಬಿಡಿಟಿ ಸೂಚಿಸಿದೆ ಎಂದು ದಿ ಇಂಡಿಯನ್ ಎಕ್ಸ್‍ಪ್ರೆಸ್ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


