ವಾಣಿಜ್ಯ

ಪಿ-ನೋಟ್ಸ್ ಬಗ್ಗೆ ಸರ್ಕಾರ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ: ಜೇಟ್ಲಿ

ದೇಶದ ಹೂಡಿಕೆ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುವ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂದು ಹಣಕಾಸು...

ಪಿ-ನೋಟ್ಸ್ ಬಗ್ಗೆ ಸರ್ಕಾರ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ: ಜೇಟ್ಲಿ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ದೇಶದ ಹೂಡಿಕೆ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುವ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಕಪ್ಪು ಹಣ ವಿಚಾರಣೆಗೆ ನಿಯೋಜನೆಗೊಂಡಿರುವ ಸುಪ್ರೀಂಕೋರ್ಟ್ ನೇತೃತ್ವದ ವಿಶೇಷ ತನಿಖಾ ತಂಡ, ಸೆಬಿ ಪಾರ್ಟಿಸಿಪೇಟರಿ ನೋಟ್ಸ್ ಗೆ ಸಂಬಂಧಪಟ್ಟ ನಿಯಮಗಳನ್ನು ಬಿಗಿಗೊಳಿಸಬೇಕೆಂದು ಕಳೆದ ವಾರ ಶಿಫಾರಸ್ಸು ಮಾಡಿತ್ತು. ಈ ಕುರಿತು ಸರ್ಕಾರ ಇನ್ನು ನಿರ್ಧಾರ ತೆಗೆದುಕೊಳ್ಳಬೇಕಿದೆ.

ಆದರೆ ಸರ್ಕಾರ ಪಿ-ನೋಟ್ಸ್ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವುದಿಲ್ಲ. ದೇಶದಲ್ಲಿ ಹಣ ಹೂಡಿಕೆದಾರರ ಮೇಲೆ ಯಾವುದೇ ಪರಿಣಾಮ ಬೀರಬಾರದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ಸಂಸತ್ ಭವನದ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪಿ ನೋಟ್ಸ್ ಹೊರಡಿಸುವ ಮೊದಲು ಸರ್ಕಾರ ಸೆಬಿ, ಆರ್ ಬಿಐ ಮತ್ತು ಮಾರುಕಟ್ಟೆ ತಜ್ಞರ ಅಭಿಪ್ರಾಯ ಸಂಗ್ರಹಿಸಲಿದೆ ಎಂದು ಹೇಳಿದರು.

ಷೇರು ಮಾರುಕಟ್ಟೆ ಮೂಲಕ ತೆರಿಗೆ ಕಟ್ಟುವುದನ್ನು ವಂಚಿಸುವುದನ್ನು ಮತ್ತು ಕಪ್ಪು ಹಣವನ್ನು ತಡೆಗಟ್ಟಲು ಸೆಬಿಯು ಬಿಗಿ ಕ್ರಮ ನಿಯಮ ಅಳವಡಿಸಬೇಕೆಂದು ವಿಶೇಷ ತನಿಖಾ ತಂಡ ಮೊನ್ನೆ ಶುಕ್ರವಾರ ಆದೇಶ ನೀಡಿತ್ತು.

ತೀವ್ರ ಕುಸಿತ ಕಂಡ ಮಾರುಕಟ್ಟೆ: ಆಗಲೇ ಷೇರು ಮಾರುಕಟ್ಟೆಯ ಇಂದಿನ ವಹಿವಾಟಿನಲ್ಲಿ ಸುಮಾರು 500 ಅಂಕಗಳ ಕುಸಿತ ಕಂಡುಬಂದಿದೆ. ಇದಕ್ಕೆ ಕಾರಣ ಸರ್ಕಾರದ ಪಿ-ನೋಟ್ಸ್ (Participatiory notes) ಮತ್ತು ಚೀನಾ ಮಾರುಕಟ್ಟೆ ಶೇಕಡಾ 8 ರಷ್ಟು ಕುಸಿತ ಕಂಡುಬಂದಿದ್ದು.

ಪಿ-ನೋಟ್ಸ್ ಎಂದರೇನು?: ಸೆಬಿಯಲ್ಲಿ ನೋಂದಣಿ ಆಗದೆ ಭಾರತೀಯ ಮಾರುಕಟ್ಟೆಗಳಲ್ಲಿ  ವಿದೇಶಿ ಹೂಡಿಕೆದಾರರು ತಮ್ಮ ಗುರುತನ್ನು ಬಹಿರಂಗಪಡಿಸದೆ ಹೂಡಿಕೆ ಮಾಡುವುದನ್ನು ಪಿ-ನೋಟ್ಸ್ ಎಂದು ಕರೆಯುತ್ತಾರೆ.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.