ಕ್ರಿಕೆಟ್ ಬೆಟ್ಟಿಂಗ್‌ಗೆ ಕಡಿವಾಣ, ದೇಣಿಗೆ ಬಗ್ಗೆ ನಿಗಾ: ಎಸ್‌ಐಟಿ
ಕಪ್ಪು ಹಣದ ನಿಯಂತ್ರಣಕ್ಕಾಗಿ ಸುಪ್ರೀಂ ಕೋರ್ಟ್ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ನಿಯೋಜನೆ ಮಾಡಿದೆ. ಕ್ರಿಕೆಟ್‌ನಲ್ಲಿ ಬೆಟ್ಟಿಂಗ್...

ನವದೆಹಲಿ: ಕಪ್ಪು ಹಣದ ನಿಯಂತ್ರಣಕ್ಕಾಗಿ ಸುಪ್ರೀಂ ಕೋರ್ಟ್ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ನಿಯೋಜನೆ ಮಾಡಿದೆ. ಕ್ರಿಕೆಟ್‌ನಲ್ಲಿ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕುವುದು, ಶಿಕ್ಷಣ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ದೇಣಿಗೆ ನೀಡುವವರ ಬಗ್ಗೆ ನಿಗಾವಹಿಸುವಂತೆಯೂ ಸುಪ್ರೀಂ ಎಸ್‌ಐಟಿಗೆ ಸೂಚಿಸಿದೆ.
ಕಪ್ಪು ಹಣ ನಿಯಂತ್ರಣದ ಹೊಣೆ ಹೊತ್ತಿರುವ ಎಸ್‌ಐಟಿ ತಂಡ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ)ಯನ್ನು ಕೂಡಾ ತಮ್ಮ ನಿಯಂತ್ರಣಾಧಿಕಾರಕ್ಕೆ ತರುವ ಮೂಲಕ ಷೇರುಗಳಲ್ಲಿನ ಅನಿರೀಕ್ಷಿತ ಏರುಪೇರುಗಳ ಬಗ್ಗೆ ಗಮನ ವಹಿಸಬಹುದಾಗಿದೆ ಎಂದು ಹೇಳಿದೆ.
ಕಪ್ಪು ಹಣಗಳನ್ನು ಹೆಚ್ಚಾಗಿ ಕ್ರಿಕೆಟ್ ಬೆಟ್ಟಿಂಗ್ ದಂಧೆಗಳಲ್ಲಿ, ಶಾಲೆ, ಕಾಲೇಜು ಮತ್ತು ಧಾರ್ಮಿಕ ಸಂಸ್ಥೆಗಳಿಗೆ ದೇಣಿಗೆ ನೀಡುವುದಕ್ಕೆ ಬಳಸಲಾಗುತ್ತದೆ ಎಂದು ಎಸ್‌ಐಟಿ ಹೇಳಿದೆ.
ಐಪಿಎಲ್ ನಡೆದಾಗ ಕಪ್ಪು ಹಣವನ್ನು ಯಥೇಚ್ಛವಾಗಿ ಬಳಸಲಾಗಿತ್ತು ಎಂದು ಎಸ್‌ಐಟಿ ತಮ್ಮ ವರದಿಯಲ್ಲಿ ಹೇಳಿದ್ದು, ಕಪ್ಪುಹಣಕ್ಕೆ ನಿಯಂತ್ರಣವೇರ್ಪಡಿಸಬೇಕಾದುದು ಅತ್ಯಗತ್ಯ ಎಂದು ಅಭಿಪ್ರಾಯ ಪಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


