ವಾಣಿಜ್ಯ

ಡ್ಯೂಶೆ ಬ್ಯಾಂಕ್ ಜೊತೆ ಇನ್ಫೋಸಿಸ್ ಮಲ್ಟಿ ಮಿಲಿಯನ್ ಒಪ್ಪಂದ

ದೇಶದ ಎರಡನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಇನ್ಫೋಸಿಸ್ ಡ್ಯೂಶೆ ಬ್ಯಾಂಕ್ ಜೊತೆ ಮಲ್ಟಿ ಮಿಲಿಯನ್ ಯೂರೋ ಒಪ್ಪಂದಕ್ಕೆ ಸಹಿ ಹಾಕಿದೆ...

ಡ್ಯೂಶೆ ಬ್ಯಾಂಕ್ ಜೊತೆ ಇನ್ಫೋಸಿಸ್ ಮಲ್ಟಿ ಮಿಲಿಯನ್ ಒಪ್ಪಂದ
ಇನ್ ಫೋಸಿಸ್ ಕಟ್ಟಡ
Published On :

ದೇಶದ ಎರಡನೇ ಅತಿ ದೊಡ್ಡ  ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಇನ್ಫೋಸಿಸ್ ಡ್ಯೂಶೆ ಬ್ಯಾಂಕ್ ಜೊತೆ ಮಲ್ಟಿ ಮಿಲಿಯನ್ ಯೂರೋ ಒಪ್ಪಂದಕ್ಕೆ ಸಹಿ ಹಾಕಿದೆ.

 ಈ ಒಪ್ಪಂದದ ಪ್ರಕಾರ ಇನ್ಫೋಸಿಸ್ ಡ್ಯೂಶೆ ಬ್ಯಾಂಕ್ ಸಮೂಹಕ್ಕೆ, ಅಭಿವೃದ್ಧಿ, ಅಪ್ಲಿಕೇಷನ್ ಮೈಂಟೆನೆನ್ಸ್, ಡಿಜಿಟಲ್ ಮೊಬಿಲಿಟಿ,  ಪ್ಯಾಕೇಜ್ ಇಂಪ್ಲಿಮಂಟೇಶನ್, ಪರೀಕ್ಷಾ ಸೇವೆ ಒದಗಿಸಲಿದೆ.

ಡ್ಯೂಶೆ ಬ್ಯಾಂಕ್ ಮತ್ತು ಇನ್ಫೋಸಿಸ್ ನಡುವಣ ಸಂಬಂಧವನ್ನು ಮತ್ತಷ್ಟು ಸದೃಢಗೊಳಿಸಲು, ಬ್ಯಾಂಕ್ ನ ಅಭಿವೃದ್ಧಿಗೆ  ಬೇಕಾದ ಎಲ್ಲಾ ಅಗತ್ಯ ಸೇವೆಗಳನ್ನು ಒದಗಿಸುವುದಾಗಿ  ಇನ್ಪೊಸಿಸ್ ನ ಜಾಗತಿಕ ಹಣಕಾಸು ಮುಖ್ಯಸ್ಥ ಮೋಹಿತ್  ಜೋಶಿ ತಿಳಿಸಿದ್ದಾರೆ.

ಡ್ಯೂಶೆ ಬ್ಯಾಂಕ್ ತನ್ನ ಗ್ರಾಹಕರಿಗೆ ನೂತನ ತಂತ್ರಜ್ಞಾನ ಹಾಗೂ ಸಮರ್ಥ ಸೇವೆ ಗಳನ್ನು ಒದಗಿಸಲು ಬದ್ದವಾಗಿದೆ. ಈ ನಿಟ್ಟಿನಲ್ಲಿ ಇನ್ ಪೋಸಿಸ್ ಸಹಭಾಗಿತ್ವದಲ್ಲಿ ಕೆಲಸ ಮಾಡುವುದರಿಂದ ತನ್ನ ಸಾಧನೆಯ ಗುರಿ ತಲುಪಲು ಬ್ಯಾಂಕ್ ಗೆ ಸಹಾಯವಾಗುತ್ತದೆ ಎಂದು ಡ್ಯೂಶೆ ಬ್ಯಾಂಕ್ ನ ಜಾಗತಿಕ ಮುಖ್ಯ ಮಾಹಿತಿ ಅಧಿಕಾರಿ ಕಿಮ್ ಹಾಮಂಡ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.