ವಾಣಿಜ್ಯ

ಬಡತನ ನಿರ್ಮೂಲನೆಗೆ ಶೇ. 8 ರಿಂದ 10ರಷ್ಟು ಆರ್ಥಿಕ ಪ್ರಗತಿ ಅಗತ್ಯ: ಜೇಟ್ಲಿ

ಬಡತನ ನಿರ್ಮೂಲನೆಗೆ ಶೇಕಡ 8ರಿಂದ 10ರಷ್ಟು ಆರ್ಥಿಕ ಪ್ರಗತಿ ಅಗತ್ಯ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ...

ಬಡತನ ನಿರ್ಮೂಲನೆಗೆ ಶೇ. 8 ರಿಂದ 10ರಷ್ಟು ಆರ್ಥಿಕ ಪ್ರಗತಿ ಅಗತ್ಯ: ಜೇಟ್ಲಿ
ಅರುಣ್ ಜೇಟ್ಲಿಶ್(ಸಂಗ್ರಹ ಚಿತ್ರ)
Published On :

ನವದೆಹಲಿ: ಬಡತನ ನಿರ್ಮೂಲನೆಗೆ ಶೇಕಡ 8ರಿಂದ 10ರಷ್ಟು ಆರ್ಥಿಕ ಪ್ರಗತಿ ಅಗತ್ಯ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಬಡತನ ನಿರ್ಮೂಲನೆಗೆ ಸುಧಾರಣೆಗಾಗಿ ಭೂಸ್ವಾಧೀನ ಹಾಗೂ ಸರಕು ಮತ್ತು ಸೇವಾ ತೆರಿಗೆ ಮಸೂದೆಗಳಿಗೆ ಸಂಸತ್ತಿನಲ್ಲಿ ಅನುಮೋದನೆ ದೊರೆಯಬೇಕು ಎಂದಿದ್ದಾರೆ.

 ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಗಣತಿ ವರದಿ ಗ್ರಾಮೀಣ ಭಾರತದ ಕರಾಳ ಚಿತ್ರಣದ ಕುರಿತಂತೆ ಕಳೆದ ಮೂರು ದಿನಗಳ ಹಿಂದೆ ವರದಿ ಬಿಡುಗಡೆಯಾಗಿತ್ತು. ಈ ಸಂಬಂಧ ಜೇಟ್ಲಿ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, ‘ಕೆಲವು ನಿರ್ದಿಷ್ಟ ಯೋಜನೆಗಳಿಗಿಂತಲೂ ಅಭಿವೃದ್ಧಿ ಹಾಗೂ ಆರ್ಥಿಕ ಸುಧಾರಣೆಗಳು ಬಡವರಿಗೆ ನೆರವಾಗುತ್ತವೆ’ ಎಂದು ಈ ವರದಿಯು ಸ್ಪಷ್ಟಪಡಿಸಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.

ಬಡತನ ನಿರ್ಮೂಲನೆ ನಿಟ್ಟಿನಲ್ಲಿ ‘ಎಲ್ಲಾ ಭಾರತೀಯರಿಗೆ ಉತ್ತಮ ಉದ್ಯೋಗಾವಕಾಶಗಳು ಸೃಷ್ಟಿಸಲು ಶೇಕಡ 8–10ರಷ್ಟು ಆರ್ಥಿಕ ಪ್ರಗತಿಯನ್ನು ತ್ವರಿತವಾಗಿ ಸಾಧಿಸಬೇಕಿದೆ. ಅದಕ್ಕಾಗಿಯೇ ಸರ್ಕಾರವು ಹೂಡಿಕೆಯನ್ನು ಉತ್ತೇಜಿಸುತ್ತಿದೆ. ಹೂಡಿಕೆ ಕ್ಷೇತ್ರ ಈಗ ಪ್ರಗತಿ ಪಥದತ್ತ ಹೊರಳುತ್ತಿದೆ ಎಂದು ಸಮೀಕ್ಷೆ ಹೇಳಿದ್ದು, ಈ ನಿಟ್ಟಿನಲ್ಲಿ ‘ಜಿಎಸ್‌ಟಿ ಜಾರಿ ಹಾಗೂ ಸುಧಾರಿತ ಭೂಸ್ವಾಧೀನ ಮಸೂದೆಯು ಅದಕ್ಕೆ ಮತ್ತಷ್ಟು ಪುಷ್ಟಿ ನೀಡಲಿದೆ’ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.