9 ಸಾವಿರದ ಗಡಿಯತ್ತ ನಿಫ್ಟಿ
ಮುಂಬೈ ಷೇರುಮಾರುಕಟ್ಟೆಯಲ್ಲಿ ದಾಖಲೆ ಏರಿಕೆ ಕಂಡುಬಂದಿದ್ದು, ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ 9 ಸಾವಿರ ಗಡಿಯತ್ತ ದಾಪುಗಾಲಿರಿಸಿದೆ.

ಮುಂಬೈ: ಮುಂಬೈ ಷೇರುಮಾರುಕಟ್ಟೆಯಲ್ಲಿ ದಾಖಲೆ ಏರಿಕೆ ಕಂಡುಬಂದಿದ್ದು, ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ 9 ಸಾವಿರ ಗಡಿಯತ್ತ ದಾಪುಗಾಲಿರಿಸಿದೆ.
ಇಂದು ಬೆಳಗ್ಗೆ ಷೇರುವಹಿವಾಟು ಆರಂಭವಾಗುತ್ತಿದ್ದಂತೆಯೇ ಏರಿಕೆಯತ್ತ ಮುಖಮಾಡಿದ ನಿಫ್ಟಿ ನೋಡ-ನೋಡುತ್ತಿದ್ದಂತೆಯೇ ದಾಖಲೆ ಪ್ರಮಾಣದಲ್ಲಿ ಏರಿಕೆಯಾಯಿತು. ಇದೇ ಮೊದಲ ಬಾರಿಗೆ ನಿಫ್ಟಿ 9 ಸಾವಿರ ಗಡಿಯತ್ತ ಸಾಗಿದ್ದು, ಪ್ರಸ್ತುತ ನಿಫ್ಟಿ 8,996.60 ಅಂಶಗಳಿಗೆ ಏರಿಕೆಯಾಗಿದೆ. ಸೆನ್ಸೆಕ್ಸ್ ಕೂಡ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದ್ದು, 29,844.16 ಅಂಶಗಳಿಗೆ ಸೆನ್ಸೆಕ್ಸ್ ಏರಿಕೆಯಾಗಿದೆ.
ಇನ್ನು ಷೇರುಮಾರುಕಟ್ಟೆಯಲ್ಲಿನ ಈ ಚೇತೋಹಾರಿ ಬೆಳವಣಿಗೆಗೆ ಕೇಂದ್ರ ಬಜೆಟ್ ಮತ್ತು ರಿಸರ್ವ್ ಬ್ಯಾಂಕ್‌ನ ಕೆಲ ನಿರ್ಧಾರಗಳೇ ಕಾರಣ ಎಂದು ಹೇಳಲಾಗುತ್ತಿದ್ದು, ಆರ್‌ಬಿಐ ಅಧ್ಯಕ್ಷರಾದ ರಘುರಾಮ್ ರಾಜನ್ ಅವರು ಈ ಹಿಂದೆ ಬಡ್ಡಿದರಗಳ ಇಳಿಕೆ ಕುರಿತು ತೆಗೆದುಕೊಂಡಿದ್ದ ಕೆಲ ನಿರ್ಧಾರಗಳು ಷೇರುಮಾರುಕಟ್ಟೆಯ ಚೇತರಿಕೆಗೆ ಕಾರಣವಾಗಿದೆ. ಇನ್ನು ಆರ್‌ಬಿಐ ಈ ನಿರ್ಧಾರಗಳು ಹೂಡಿಕೆದಾರರನ್ನು ಆಕರ್ಷಿಸಿದ್ದು, ಷೇರುಮಾರುಕಟ್ಟೆಗೆ ಭಾರಿ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಹರಿದುಬರುತ್ತಿದೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಮಾರುಕಟ್ಟೆ ಏರಿಕೆಯಾಗಿದೆ ಎಂದು ಅವಸರವಾಗಿ ಹೂಡಿಕೆ ಮಾಡುವುದನ್ನು ಬಿಟ್ಟು, ಹೂಡಿಕೆದಾರರು ಮಾರುಕಟ್ಟೆಯನ್ನು ಅಧ್ಯಯನ ಮಾಡಿ ವೈಜ್ಞಾನಿಕವಾಗಿ ಹೂಡಿಕೆ ಮಾಡಿದರೆ ಮಾತ್ರ ಲಾಭಾಂಶ ದೊರೆಯುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


