ವಾಣಿಜ್ಯ

ಸ್ಪೈಸ್ ಜೆಟ್ ರಿಯಾಯಿತಿ

ವಿನ್-ವಿನ್ ಫಾರ್ಮುಲಾ ರೈಲು ಪ್ರಯಾಣ ದರಕ್ಕಿಂತಲೂ ಕಡಿಮೆ ದರದಲ್ಲಿ (ರು.599) ವಿಮಾನ ಪ್ರಯಾಣಕ್ಕೆ ಅವಕಾಶ ನೀಡಿರುವ ಸ್ಪೈಸ್‍ಜೆಟ್‍ನ ಆಫರ್ ಎಲ್ಲರ ಮನಸೆಳೆದಿದೆ...

ಸ್ಪೈಸ್ ಜೆಟ್ ರಿಯಾಯಿತಿ
ವಿನ್-ವಿನ್ ಫಾರ್ಮುಲಾ (ಸಂಗ್ರಹ ಚಿತ್ರ)
Published On :

ವಿನ್-ವಿನ್ ಫಾರ್ಮುಲಾ ರೈಲು ಪ್ರಯಾಣ ದರಕ್ಕಿಂತಲೂ ಕಡಿಮೆ ದರದಲ್ಲಿ (ರು.599) ವಿಮಾನ ಪ್ರಯಾಣಕ್ಕೆ ಅವಕಾಶ ನೀಡಿರುವ ಸ್ಪೈಸ್‍ಜೆಟ್‍ನ ಆಫರ್ ಎಲ್ಲರ ಮನಸೆಳೆದಿದೆ. ಇದರ ಹಿಂದಿನ ಉದ್ದೇಶಗಳೇನು? ಈ ರೀತಿ ಮಾಡಿದಾಗ ಕಂಪನಿಗೆ ನಷ್ಟವಾಗುವುದಿಲ್ಲವೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕೆ ಸೂಕ್ತ ಎನ್ನುವ ವಿನ್ ವಿನ್ ಫಾರ್ಮುಲಾ ಬಗ್ಗೆ ಮಾಹಿತಿ ಇಲ್ಲಿದೆ.

ವೈಮಾನಿಕ ಇಂಧನವೂ ಅಗ್ಗ
ಈ ಹಿಂದೆ ವೈಮಾನಿಕ ಇಂಧನದ ಬೆಲೆ ದುಬಾರಿ ಇತ್ತು. ಈಗ ಅದರ ಬೆಲೆ ಒಂದು ಲೀಟರ್ ಡೀಸೆಲ್‍ನಷ್ಟೇ ಇದೆ. ಲೀಟರ್ ಪೆಟ್ರೋಲ್‍ಗೆ ಸರಾಸರಿ ರು.58.95 ಇದ್ದರೆ, ಲೀಟರ್ ಡೀಸೆಲ್‍ಗೆ ರು.52 ಆಗುತ್ತದೆ. ಅದೇ ರೀತಿ ವೈಮಾನಿಕ ಇಂಧನದ ದರ ಲೀ.ಗೆ ರು.52.42. ಇದು ಕಡಿಮೆ ದರದ ಪ್ರಯಾಣಕ್ಕೆ ಸಹಕಾರಿಯಾಗಿದೆ.

ಪ್ರಯಾಣಿಕರಿಗೆ ಹೇಗೆ ಲಾಭ?
ಕುಟುಂಬ ಅಥವಾ ಸ್ನೇಹಿತರ ಜೊತೆಗೂಡಿ ಪ್ರವಾಸ ಹೋಗಲು ಇದೊಂದು ಉತ್ತಮ ಅವಕಾಶ.

ಸಮಯ ಉಳಿತಾಯ
ರೈಲು ಅಥವಾ ಬಸ್‍ನಲ್ಲಿ ಪ್ರಯಾಣಿಸಿದರೆ ತಗಲುವ ಅವಧಿಗಿಂತಲೂ ಕಡಿಮೆ ಸಮಯದಲ್ಲಿ ನಿಗದಿತ ಸ್ಥಳ ತಲುಪಬಹುದು.

ಎಟಿಎಫ್ (ವೈಮಾನಿಕ ಇಂಧನ ದರ) ಕಡಿಮೆ ಆಗಿರುವುದರಿಂದ ರಿಯಾಯತಿ ದರದ ಅವಕಾಶ ಲಾಭದಾಯಕ ಆಗಲೂಬಹುದು. ಘೋಷಿಸಿರುವ ಪ್ರದೇಶಗಳೆಲ್ಲವೂ ಹತ್ತಿರದಲ್ಲೇ ಇರುವುದರಿಂದ ವೆಚ್ಚ ಕಡಿಮೆ ಆಗುವ ಸಾಧ್ಯತೆ.

(ಹೈದರಾಬಾದ್- ವಿಜಯವಾಡ, ಗುವಾಹಟಿ- ಕೋಲ್ಕತಾ, ಬೆಂಗಳೂರು- ಹೈದರಾಬಾದ್, ದೆಹಲಿ- ಡೆಹ್ರಾಡೂನ್, ಅಹಮದಾಬಾದ್- ಮುಂಬೈ) ಎಷ್ಟೋ ಸಂದರ್ಭಗಳಲ್ಲಿ ವಿಮಾನದಲ್ಲಿ ಪೂರ್ತಿ ಸೀಟುಗಳು ತುಂಬದೆ, ಖಾಲಿ ಸೀಟುಗಳೊಂದಿಗೆ ಸಾಗಬೇಕಾಗುತ್ತದೆ.

ಅದಕ್ಕಿಂತಲೂ ನಷ್ಟವಾಗದ ರೀತಿ ರಿಯಾಯಿತಿ ದರದಲ್ಲಿ ಪ್ರಯಾಣಕ್ಕೆ ಅವಕಾಶ ಒದಗಿಸುವುದು ಸೂಕ್ತ ಎನ್ನುವುದು ಸಂಸ್ಥೆ ಅಭಿಮತ. ಪ್ರಯಾಣಿಕರು ಸೀಮಿತ ಅವಧಿಯೊಳಗೆ ಮುಂಗಡವಾಗಿ ಪಾವತಿ ಮಾಡುತ್ತಾರೆ. ಇದರಿಂದ ಸಾಕಷ್ಟು ದೊಡ್ಡ ಮೊತ್ತದ ಹಣ ಸಂಸ್ಥೆಯ ಕೈ ಸೇರುತ್ತದೆ. ಇದು ಸಂಸ್ಥೆ ತನ್ನ ಮುಂದಿನ ಯೋಜನೆಗಳನ್ನು ರೂಪಿಸಲು ಅನುಕೂಲವಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.