ವಾಣಿಜ್ಯ

ಏರ್ ಇಂಡಿಯಾದಿಂದ ಹೊಸವರ್ಷಕ್ಕೆ ಆಕರ್ಷಕ ಕೊಡುಗೆಗಳು

ಹೊಸವರ್ಷದ ರಜಾ ದಿನಗಳ ಸಪ್ತಾಹಕ್ಕೆ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಮಂಗಳವಾರ ಎರಡು ಹೊಸ ಯೋಜನೆಗಳನ್ನು

ಏರ್ ಇಂಡಿಯಾದಿಂದ ಹೊಸವರ್ಷಕ್ಕೆ ಆಕರ್ಷಕ ಕೊಡುಗೆಗಳು
ಏರ್ ಇಂಡಿಯಾ ವಿಮಾನ
Published On :

ನವದೆಹಲಿ: ಹೊಸವರ್ಷದ ರಜಾ ದಿನಗಳ ಸಪ್ತಾಹಕ್ಕೆ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಮಂಗಳವಾರ ಎರಡು ಹೊಸ ಯೋಜನೆಗಳನ್ನು ಘೋಷಿಸಿದೆ.

'ಹೊಸ ವರ್ಷದ ವಿಶೇಷ' ಮತ್ತು 'ಲಕ್ಕಿ ಫರ್ಸ್ಟ್' ಎಂಬ ಎರಡು ಕೊಡುಗೆಗಳನ್ನು ಏರ್ ಇಂಡಿಯಾ ಘೋಷಿಸದೆ.

ಈ 'ಹೊಸ ವರ್ಷದ ವಿಶೇಷ' ಯೋಜನೆಯ ಪ್ರಕಾರ ಮೆಟ್ರೋಗಳ ನಡುವೆ ಓಡಾಡಲು ಎಲ್ಲವೂ ಓಳಗೊಂಡಂತೆ ೫೦೧೬ ರೂಗಳ ಒಂದು ಮಾರ್ಗದ ದರ ನಿಗದಿಪಡಿಸಿದೆ.

ಈ ಕೊಡುಗೆ ಡಿಸೆಂಬರ್ ೩೧ ೨೦೧೫ ರಾತ್ರಿ ೮ ಘಂಟೆಯಿಂದ ಜನವರಿ ೧ ೨೦೧೬ ಬೆಳಗ್ಗೆ ೮ ಘಂಟೆಯವರೆಗೆ ಜಾರಿಯಲ್ಲಿರುತ್ತದೆ.

ಮತ್ತೊಂದು ಕೊಡುಗೆ 'ಲಕ್ಕಿ ಫರ್ಸ್ಟ್' ನಲ್ಲಿ ದೆಹಲಿ-ಮುಂಬೈ-ದೆಹಲಿ ಮಾರ್ಗವಾಗಿ ಚಲಿಸುವ ವಿಮಾನಗಳ ಸಾಮಾನ್ಯ ದರ್ಜೆ ಟಿಕೆಟ್ ನಲ್ಲಿ ಪ್ರಯಾಣಿಸುವ ಮೊದಲ ಪ್ರಯಾಣಿಕನಿಗೆ ಅದೇ ವಿಮಾನದ ಮೊದಲ ದರ್ಜೆಗೆ ಮುಂಬಡ್ತಿ ಪಡೆಯುವ ಅದೃಷ್ಟದ ಅವಕಾಶ ಇರುತ್ತದೆ.

"ವಿಮಾನ ಹೊರಡುವುದಕ್ಕೂ ಮುಂಚಿತವಾಗಿ ದ್ವಾರದ ಬಳಿ ಲಕ್ಕಿ ಡ್ರಾ ತೆಗೆಯಲಾಗುತ್ತದೆ" ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಈ ಕೊಡುಗೆ ಜನವರಿ ೧ ರಿಂದ ೧೫ ರವರೆಗೆ ಜಾರಿಯಲ್ಲಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.