ವಾಣಿಜ್ಯ

ಚೀನಾ ರೇಷ್ಮೆ ತಡೆಗೆ ಆ್ಯಂಟಿ ಡಂಪಿಂಗ್ ತೆರಿಗೆ

ದೇಶೀಯ ಉತ್ಪಾದಕರ ಹಿತದೃಷ್ಟಿಯಿಂದ ಚೀನಾದಿಂದ ಆಮದಾಗುವ ಕಚ್ಚಾ ರೇಷ್ಮೆಗೆ ಆ್ಯಂಟಿಡಂಪಿಂಗ್ (ಸ್ಪರ್ಧೆ ತಡೆ ತೆರಿಗೆ) ತೆರಿಗೆ ವಿಧಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ...

ಚೀನಾ ರೇಷ್ಮೆ ತಡೆಗೆ ಆ್ಯಂಟಿ ಡಂಪಿಂಗ್ ತೆರಿಗೆ
ಚೈನಾ ಸಿಲ್ಕ್ ಮೇಲೆ ಆ್ಯಂಟಿ ಡಂಪಿಂಗ್ ತೆರಿಗೆ
Published On :

ನವದೆಹಲಿ: ದೇಶೀಯ ಉತ್ಪಾದಕರ ಹಿತದೃಷ್ಟಿಯಿಂದ ಚೀನಾದಿಂದ ಆಮದಾಗುವ ಕಚ್ಚಾ ರೇಷ್ಮೆಗೆ ಆ್ಯಂಟಿಡಂಪಿಂಗ್ (ಸ್ಪರ್ಧೆ ತಡೆ ತೆರಿಗೆ) ತೆರಿಗೆ ವಿಧಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಚೀನಾದಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ರೇಷ್ಮೆ ಬರುತ್ತಿದ್ದು ದೇಶದಲ್ಲಿ ರೇಷ್ಮೆ ದರ  ಕುಸಿಯುತ್ತಿದೆ. ಇದರಿಂದ ಚೀನಾದಿಂದ ಬರುವ ಪ್ರತಿ ಕೆಜಿ ಕಚ್ಚಾ ರೇಷ್ಮೆ ಮೇಲೆ ರು.122 ಆ್ಯಂಟಿಡಂಪಿಂಗ್  ತೆರಿಗೆ ವಿಧಿಸುವ ಯೋಜನೆ ಹೊಂದಿದೆ. ಚೀನಾ 3ಎ ಮತ್ತು ಅದಕ್ಕಿಂತಲೂ ಕಡಿಮೆ  ದರ್ಜೆಯ ಕಚ್ಚಾ ರೇಷ್ಮೆಯನ್ನು ಅಲ್ಲಿನ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ದರಕ್ಕೆ ರಫ್ತು ಮಾಡುತ್ತಿದೆ. ಇದರಿಂದ ದೇಶೀಯ ಉದ್ಯಮ ಹೆಚ್ಚಿನ ಸಂಕಷ್ಟಕ್ಕೆ ಸಿಲುಕಿದೆ ಎಂದು ಆ್ಯಂಟಿ ಡಂಪಿಂಗ್ ಮತ್ತು ಅಲೈಡ್ ಡ್ಯೂಟೀಸ್‍ನ ಪ್ರಧಾನ ನಿರ್ದೇಶನಾಲಯ (ಡಿಜಿಎಡಿ) ಇತ್ತೀಚೆಗೆ ನಡೆಸಿದ ತನಿಖಾ  ವರದಿಯಲ್ಲಿ ಹೇಳಿತ್ತು.

ಇದರ ವಿರುದ್ಧ ನಿರ್ದಿಷ್ಟ ಪ್ರಮಾಣದ ಆ್ಯಂಟಿಡಂಪಿಂಗ್ ತೆರಿಗೆಯನ್ನು ವಿಧಿಸಬೇಕೆಂತಲೂ ಶಿಫಾರಸು ಮಾಡಿದೆ. ಚೀನಾದಿಂದ ಆಮದು ಮಾಡಿಕೊಳ್ಳುವ ಕಚ್ಚಾ ರೇಷ್ಮೆ 2010-11ರಲ್ಲಿ 12.63   ಲಕ್ಷ ಕೆಜಿ ಇದ್ದದು, 2013ರ  ಏಪ್ರಿಲ್‍ನಿಂದ 2014ರ ಜೂನ್ ವೇಳೆಗೆ 22.17 ಲಕ್ಷ ಕೆಜಿಗೆ ಹೆಚ್ಚಿದೆ. ಡಿಜಿಎಡಿ ಈ ಕುರಿತು ತನಿಖೆ ನಡೆಸುವ ನೋಡಲ್ ಏಜೆನ್ಸಿಯಾಗಿದ್ಧು ಅದರ ಆಧಾರದಲ್ಲಿ ಹಣಕಾಸು ಸಚಿವಾಲಯ ತೆರಿಗೆ ವಿಧಿಸಲಿದೆ. ಆಯಾ ದೇಶಗಳಲ್ಲಿನ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ದರಕ್ಕೆ ರಫ್ತು ಮಾಡುವುದರಿಂದ ದೇಶೀಯ ಉತ್ಪನ್ನಗಳ ದರ ಕುಸಿಯಲಿದೆ. ಇಂತಹ   ಸಂದರ್ಭದಲ್ಲಿ ಆ್ಯಂಟಿ ಡಂಪಿಂಗ್ ತೆರಿಗೆ ವಿಧಿಸಲಾಗುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.