ಷೇರು ಮಾರುಕಟ್ಟೆ ಚೇತರಿಕೆ
ಸೋಮವಾರದ ಭಾರಿ ಕುಸಿತದಿಂದ ಚೇತರಿಸಿಕೊಂಡಿರುವ ಭಾರತದ ಷೇರು ಮಾರುಕಟ್ಟೆಗಳು ಮಂಗಳವಾರ ಗಣನೀಯ ಏರಿಕೆ ದಾಖಲಿಸಿದವು...

ಸೋಮವಾರದ ಭಾರಿ ಕುಸಿತದಿಂದ ಚೇತರಿಸಿಕೊಂಡಿರುವ ಭಾರತದ ಷೇರು ಮಾರುಕಟ್ಟೆಗಳು ಮಂಗಳವಾರ ಗಣನೀಯ ಏರಿಕೆ ದಾಖಲಿಸಿದವು. ಜಿಎಸ್‍ಟಿ ಮಸೂದೆ ಜಾರಿಗೆ ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ಕರೆಯಲಿದೆ ಎಂಬ ಆಶಾವಾದದೊಂದಿಗೆ ಹೂಡಿಕೆದಾರರು ರಿಯಾಲ್ಟಿ, ಲೋಹ, ಬ್ಯಾಂಕಿಂಗ್ ಷೇರುಗಳನ್ನು ಹೆಚ್ಚು ಖರೀದಿಸಿದರು. ಇದರಿಂದ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ 290.82 ಅಂಕ ಏರಿಕೆಯೊಂದಿಗೆ 26,032.38ಕ್ಕೆ ವಹಿವಾಟು ಮುಗಿಸಿತು. ದಿನದ ಮಧ್ಯಾವಧಿಯಲ್ಲಿ ಡಾಲರ್ ವಿರುದ್ಧ ರುಪಾಯಿ ಮೌಲ್ಯ 76 ಪೈಸೆ ಏರಿಕೆ ಕಂಡಿದೆ.
ವಹಿವಾಟು 826.35 ಅಂಕಗಳ ಏರಿಳಿತ ಕಂಡಿತು. ಅಂತಿಮವಾಗಿ 26 ಸಾವಿರಕ್ಕಿಂತಲೂ ಹೆಚ್ಚು ದಿನದಂತ್ಯ ಕಾಣುವಲ್ಲಿ ಸಫಲವಾಯಿತು. ಸೆನ್ಸೆಕ್ಸ್ ಗಳಿಕೆಯೊಂದಿಗೆ ವಹಿವಾಟು ಆರಂಭಿಸಿತು. ಒಂದು ಹಂತದಲ್ಲಿ ದಿನದ ಗರಿಷ್ಠ 26,124.83ರವರೆಗೂ ಏರಿಕೆ ಕಂಡಿತ್ತು. ನಂತರ ಕುಸಿಯುತ್ತಾ ಬಂದಿತು. ದಿನದ ಕನಿಷ್ಠ 25,298.42ರವರೆಗೂ ಇಳಿದಿತ್ತು. ದಿನದ ಮಧ್ಯಾವಧಿಯಲ್ಲಿ ಭಾರಿ ನೆಗೆತ ಕಂಡು ಗಳಿಕೆಯೊಂದಿಗೆ ವಹಿವಾಟು ಮುಗಿಯಿತು.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 71.70 ಅಂಕ ಏರಿಕೆಯೊಂದಿಗೆ 7,880.70ಕ್ಕೆ ತಲುಪಿತು. ಸೆನ್ಸೆಕ್ಸ್ ಗುಂಪಿನ ಷೇರುಗಳ ಪೈಕಿ ವೇದಾಂತ, ಟಾಟಾ ಮೋಟಾರ್ಸ್, ಕೋಲ್ ಇಂಡಿಯಾ ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಎನ್‍ಟಿಪಿಸಿ, ಟಾಟಾ ಸ್ಟೀಲ್, ಗೇಲ್, ಎಸ್ ಬಿಐ, ಆರ್‍ಐಎಲ್ ಸೇರಿದಂತೆ 22 ಷೇರುಗಳು ಗಳಿಕೆ ಕಂಡವು. ರಿಯಾಲ್ಟಿ, ಲೋಹ, ತೈಲ ಮತ್ತು ಅನಿಲ ಸಾರ್ವಜನಿಕ ವಲಯದ ಕಂಪನಿಗಳು ಮತ್ತು ಬ್ಯಾಂಕ್ ಸೂಚ್ಯಂಕಗಳು ಏರಿಕೆ ದಾಖಲಿಸಿದವು. ರಿಟೇಲ್ ಹೂಡಿಕೆದಾರರು ಮಧ್ಯಮ ಮತ್ತು ಸಣ್ಣ ಬಂಡವಾಳ ಷೇರುಗಳಲ್ಲಿ ಹಣ ಹೂಡಿಕೆ ಮಾಡಿದರು. ಇದರಿಂದ ಈ ಗುಂಪಿನ ಸೂಚ್ಯಂಕ ಶೇ.1.99ರಷ್ಟು ಏರಿತು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


