ವಾಣಿಜ್ಯ

ಆರ್ ಬಿಐ ಮಧ್ಯ ಪ್ರವೇಶಿಸುತ್ತದೆ: ರಘುರಾಮ್ ರಾಜನ್ ಭರವಸೆ

ಕಳೆದ ಎರಡು ವರ್ಷಗಳಲ್ಲೇ ಅಂತಾರಾಷ್ಟ್ರೀಯ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಭಾರೀ ಮಟ್ಟದಲ್ಲಿ ಕುಸಿದಿದ್ದು...

ಆರ್ ಬಿಐ ಮಧ್ಯ ಪ್ರವೇಶಿಸುತ್ತದೆ: ರಘುರಾಮ್ ರಾಜನ್ ಭರವಸೆ
ಆರ್ ಬಿಐ ಗವರ್ನರ್ ರಘುರಾಮ್ ರಾಜನ್
Published On :

ನವದೆಹಲಿ: ಕಳೆದ ಎರಡು ವರ್ಷಗಳಲ್ಲೇ ಅಂತಾರಾಷ್ಟ್ರೀಯ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಭಾರೀ ಮಟ್ಟದಲ್ಲಿ ಕುಸಿದಿದ್ದು, ರೂಪಾಯಿಯ ಅಸ್ಥಿರತೆಯನ್ನು ತಗ್ಗಿಸಲು ವಿದೇಶಿ ವಿನಿಮಯ ಮೀಸಲು ಹಣವನ್ನು ಬಳಸಲು ಯಾವುದೇ ಹಿಂಜರಿಕೆ ಇಲ್ಲ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

ಅವರು ಇಂದು ದೆಹಲಿಯಲ್ಲಿ ಭಾರತೀಯ ವಾಣಿಜ್ಯ ಮತ್ತು ಬ್ಯಾಂಕ್ ಒಕ್ಕೂಟದ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿ, ಕಳೆದ ವಾರದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದ್ದು, ಬೇರೆ ದೇಶಕ್ಕೆ ಹೋಲಿಸಿದರೆ ಭಾರತದ ಆರ್ಥಿಕ ಮಟ್ಟದ ಪರಿಸ್ಥಿತಿ ಉತ್ತಮವಾಗಿದೆ. ಮಾರುಕಟ್ಟೆಯ ಭವಿಷ್ಯದ ದಿಕ್ಕಿನ ಬಗ್ಗೆ ಹೇಳಲು ಇಚ್ಛಿಸುವುದಿಲ್ಲ ಎಂದು ತಿಳಿಸಿದರು.

ಷೇರು ಮಾರುಕಟ್ಟೆಯ ಸೋಮವಾರದ ಆರಂಭದ ವಹಿವಾಟಿನಲ್ಲಿ ಬಿಎಸ್ ಇ ಸೆನ್ಸೆಕ್ಸ್ ಶೇಕಡಾ 3.5ರಷ್ಟು ಕುಸಿತ ಕಂಡುಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕಳೆದ ಎರಡು ವರ್ಷಗಳಲ್ಲಿ ಭಾರೀ ಮಟ್ಟಕ್ಕೆ ಕುಸಿದಿದ್ದು, ಪ್ರತಿ ಡಾಲರ್ ಎದುರು ರೂಪಾಯಿ ಬೆಲೆ 66 ರೂಪಾಯಿ 49 ಪೈಸೆಯಷ್ಟಾಗಿದೆ.

ಮಾರುಕಟ್ಟೆಯ ಸಂಕೀರ್ಣ ಆರ್ಥಿಕ ಸಮಸ್ಯೆಗಳು ಹತೋಟಿಯಲ್ಲಿವೆ. ಭಾರತ ದೇಶದ ವಿದೇಶಿ ಮೀಸಲು ಅನುಪಾತ 380 ಶತಕೋಟಿ ಡಾಲರ್ ನಷ್ಟಿದೆ ಎಂದು ಹೇಳಿದರು.

ಏಷ್ಯಾ ಖಂಡದಲ್ಲಿ ಮಾರುಕಟ್ಟೆಯ ಅಸ್ಥಿರತೆ ಹತೋಟಿಗೆ ಬಂದಾಗ ಭಾರತ ಮತ್ತೆ ಹೂಡಿಕೆಯ ದೇಶವಾಗಿ ಮಾರ್ಪಾಡಾಗಲಿದೆ. ಇನ್ನು ಒಂದೆರಡು ವರ್ಷಗಳವರೆಗೆ ಕಚ್ಚಾತೈಲ ಬೆಲೆ ಕಡಿಮೆ ಪ್ರಮಾಣದಲ್ಲಿ ಇರಲಿದೆ.ಹಣದುಬ್ಬರವನ್ನು ಕಡಿಮೆ ಮಾಡಲು ಕಡಿಮೆ ಬೆಲೆಯ ಸರಕು ಬೆಲೆ ಪಾತ್ರ ವಹಿಸುತ್ತದೆ ಎಂದು ರಘುರಾಮನ್ ರಾಜನ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.