ವಾಣಿಜ್ಯ

ಅನುತ್ಪಾದಕ ಆಸ್ತಿ ಮೌಲ್ಯ ಹೆಚ್ಚಳಕ್ಕೆ ಕಾರ್ಪೊರೇಟ್ ಸಂಸ್ಥೆಗಳು ಕಾರಣ: ಜೇಟ್ಲಿ ಆರೋಪ

ಸಂಗ್ರಹಯೋಗ್ಯವಲ್ಲದ, ನಿಷ್ಪ್ರಯೋಜಕ ಸಾಲಭಾರದಿಂದ ಸಾರ್ವಜನಿಕ ಉದ್ದಿಮೆ ಬ್ಯಾಂಕುಗಳು ಈ ತ್ರೈ ಮಾಸಿಕದಲ್ಲಿ ಕಳಪೆ ಫಲಿತಾಂಶ...

ಅನುತ್ಪಾದಕ ಆಸ್ತಿ ಮೌಲ್ಯ ಹೆಚ್ಚಳಕ್ಕೆ ಕಾರ್ಪೊರೇಟ್ ಸಂಸ್ಥೆಗಳು ಕಾರಣ: ಜೇಟ್ಲಿ ಆರೋಪ
ಅರುಣ್ ಜೇಟ್ಲಿ
Published On :

ಮುಂಬೈ: ಸಂಗ್ರಹಯೋಗ್ಯವಲ್ಲದ, ನಿಷ್ಪ್ರಯೋಜಕ ಸಾಲಭಾರದಿಂದ ಸಾರ್ವಜನಿಕ ಉದ್ದಿಮೆ ಬ್ಯಾಂಕುಗಳು ಈ ತ್ರೈ ಮಾಸಿಕದಲ್ಲಿ ಕಳಪೆ ಫಲಿತಾಂಶ ನೀಡಿದ್ದು, ಅನುತ್ಪಾದಕ ಆಸ್ತಿ ಸಮಸ್ಯೆ ಹೆಚ್ಚಾಗಿದ್ದವು. ಇದಕ್ಕೆ ದೊಡ್ಡ ದೊಡ್ಡ ಸಂಸ್ಥೆಗಳು ಕಾರಣ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ನಮ್ಮ ದೇಶದ ಈಶಾನ್ಯ ರಾಜ್ಯಗಳ ಅಭಿವೃದ್ಧಿಯಾಗಬೇಕಾಗಿದೆ ಎಂದು ಹೇಳಿದ ಅವರು, ಈ ಭಾಗಗಳಲ್ಲಿ ಹೆಚ್ಚಿನ ಆರ್ಥಿಕ ಚಟುವಟಿಕೆಗಳ ಅಭಿವೃದ್ಧಿಯಾಗಬೇಕಾಗಿದೆ ಎಂದು ಹೇಳಿದರು.
ಅವರು ಇಂದು ಕೋಲ್ಕತ್ತಾದಲ್ಲಿ ಬಂದನ್ ಬ್ಯಾಂಕನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

ಬಂದನ್ ಬ್ಯಾಂಕು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಸಚಿವಾಲಯದ ವ್ಯವಹಾರಗಳನ್ನು ಕೇಂದ್ರೀಕರಿಸಲಿದೆ. ಈ ಮೂಲಕ ಬ್ಯಾಂಕ್ ಆರಂಭಿಸಿರುವ 500 ಶಾಖೆಗಳು ಮತ್ತು 250 ಎಟಿಎಂ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ.

ಈ ಹಿಂದೆ, ಸೂಕ್ಮ್ಸ ಹಣಕಾಸು ಸಂಸ್ಥೆಯಾಗಿದ್ದ ಬಂದನ್ ಬ್ಯಾಂಕ್ ಈಗ ಸಶಜ್ಜಿತ, ಸಂಪೂರ್ಣ ವ್ಯವಹಾರದ ಬ್ಯಾಂಕು ಆಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.